For Quick Alerts
ALLOW NOTIFICATIONS  
For Daily Alerts

ರುಚಿ ಹೆಚ್ಚಿಸುವ 'ಚಿಕನ್ ಮೆಜೆಸ್ಟಿಕ್' ಹೊಸ ಶೈಲಿಯ ರೆಸಿಪಿ!

By Divya
|

ರಂಜಾನ್‌ಗಾಗಿ ಉಪವಾಸ ಮಾಡುವುದು ಸಂಪ್ರದಾಯ. ಈ ಸಮಯದಲ್ಲಿ ಆಹಾರವನ್ನು ತ್ಯಜಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶದಿಂದ ದೂರ ಉಳಿದಿರುತ್ತಾರೆ. ಅದಕ್ಕಾಗಿಯೇ ಉಪವಾಸದ ನಂತರದ ಸಮಯದಲ್ಲಿ ಸೇವಿಸುವ ದ್ರವರೂಪದ ಆಹಾರ ಮತ್ತು ಘನ ಆಹಾರದಲ್ಲಿ ಪೌಷ್ಟಿಕಾಂಶಗಳು ಇರುವಂತೆಯೇ ಕಾಳಜಿವಹಿಸಬೇಕು. ಇಲ್ಲವಾದರೆ ಆಯಾಸ ಹಾಗೂ ನಿರ್ಜಲೀಕರಣ(ಡಿಹೈಡ್ರೇಷನ್) ಉಂಟಾಗುವುದು.

ಉಪವಾಸದಿಂದ ದೇಹವು ಬಸವಳಿದಿರುತ್ತದೆ. ಈ ಸಮಯದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‍ಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್‍ಅನ್ನು ಬ್ರೆಡ್ ಮತ್ತು ಅಕ್ಕಿ ಪದಾರ್ಥಗಳಿಂದ ಪಡೆಯಬಹುದು. ಪ್ರೋಟೀನ್‍ಗಳನ್ನು ಸಸ್ಯಹಾರಿ ಪದಾರ್ಥಗಳಿಂದ ಪಡೆಯಬಹುದು. ಮೀನು, ಕೋಳಿ ಮತ್ತು ಮಟನ್‍ಗಳು ಸಹ ಉತ್ತಮ ಪ್ರೋಟೀನ್‍ಗಳನ್ನು ಒಳಗೊಂಡಿರುತ್ತವೆ. ರಂಜಾನ್ ನಂತರ ಇವುಗಳಿಂದ ವಿಶಿಷ್ಟ ಖಾದ್ಯಗಳನ್ನು ತಯಾರಿಸಿ ಸವಿಯಬಹುದು.

ವಾವ್! 'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಉಪವಾಸದ ನಂತರ ಸುಲಭವಾಗಿ ತಯಾರಿಸಬಹುದಾದ ಹೊಸ ರುಚಿಯ ಪರಿಚಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಹೈದರಾಬಾದ್‍ನ ಪ್ರಸಿದ್ಧ ಚಿಕನ್ ಖಾದ್ಯ. ಇದಕ್ಕೆ "ಚಿಕನ್ ಮೆಜೆಸ್ಟಿಕ್' ಎಂದು ಕರೆಯುತ್ತಾರೆ. ಇದು ಒಂದು ಬಗೆಯ ಡ್ರೈ ಡಿಶ್(ಒಣ ಭಕ್ಷ). ನಿಮಗೆ ಸ್ವಲ್ಪ ಗ್ರೇವಿಯ ತರಹ ಬೇಕೆಂದರೆ ಸ್ವಲ್ಪ ಮೊಸರನ್ನು ಸೇರಿಸಬಹುದು. ಇದರ ಸಿದ್ಧತೆ ಮತ್ತು ತಯಾರಿಗೆ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಖಾದ್ಯ ಮಾತ್ರ ಬಹಳ ರುಚಿಕರವಾಗಿರುತ್ತದೆ. ಈ ರುಚಿಕರ ಪದಾರ್ಥವನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.

Chicken Majestic Recipe

ಬೇಕಾಗುವ ಸಾಮಾಗ್ರಿಗಳು:
ಮಿಶ್ರಣ ತಯಾರಿಸಲು
* ಮೂಳೆಯಿಲ್ಲದ ಚಿಕನ್ ಪೀಸ್ -300 ಗ್ರಾಂ.
* ಮಜ್ಜಿಗೆ -1/2 ಕಪ್
* ಕಾರ್ನ್ ಹಿಟ್ಟು 1 1/2 ಚಮಚ
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್- 1 ಚಮಚ.
* ಅರಿಶಿನ ಪುಡಿ-1 ಚಮಚ
* ಕೆಂಪು ಮೆಣಸಿನ ಪುಡಿ- 1/2 ಚಮಚ
* ಎಣ್ಣೆ- ಆಳವಾಗಿ ಹುರಿಯಲು ಸ್ವಲ್ಪ
* ಉಪ್ಪು-2 ಚಮಚ ರಂಜಾನ್ ಹಬ್ಬಕ್ಕೆ 'ಆಲೂ ಚಿಕನ್ ಬಿರಿಯಾನಿ' ಮಾಡಿ ನೋಡಿ!

ಹುರಿಯುವ ಸಮಯಕ್ಕೆ
* ಎಣ್ಣೆ- ಆಳವಾಗಿ ಹುರಿಯಲು ಸ್ವಲ್ಪ
* ಹೆಚ್ಚಿದ ಬೆಳ್ಳುಳ್ಳಿ- 1 ಗಡ್ಡೆ
* ಹಸಿ ಮೆಣಸು-2
* ಕರಿಬೇವು/ಒಗ್ಗರಣೆ ಸೊಪ್ಪು- ಸ್ವಲ್ಪ
* ಪುದೀನ ಎಲೆ- ಒಂದು ಮುಷ್ಟಿ
* ಸೋಯಾ ಸಾಸ್-1 ಚಮಚ
* ಕೆಂಪು ಮೆಣಸಿನ ಪುಡಿ-1/4 ಚಮಚ
* ಗರಮ್ ಮಸಾಲಾ ಪುಡಿ -1/2 ಚಮಚ
* ಗಟ್ಟಿ ಮೊಸರು -3 ಚಮಚ

ತಯಾರಿಸುವ ವಿಧಾನ
1. ಚಿಕನ್ ಪೀಸ್‍ಗಳನ್ನು 2-3 ಇಂಚ್ ಉದ್ದದಷ್ಟು ಸೀಳಿಕೊಳ್ಳಬೇಕು.
2. ಒಂದು ದೊಡ್ಡ ಪಾತ್ರೆಯಲ್ಲಿ ಮಜ್ಜಿಗೆ ಮತ್ತು 2 ಚಮಚ ಉಪ್ಪನ್ನು ಸೇರಿಸಿ ಇಡಿ.
3. ಸೀಳಿಕೊಂಡ ಚಿಕನ್ ಪೀಸ್‍ಗಳನ್ನು ದೊಡ್ಡ ಪಾತ್ರದ ಮಜ್ಜಿಗೆಯಲ್ಲಿ 20 ನಿಮಿಷಗಳ ಕಾಲ ನೆನೆಯಿಡಬೇಕು. ಚಿಕನ್ ಭಾಗಗಳನ್ನು ಓವನ್ ಅಥವಾ ಗ್ರಿಲ್‍ಗಳಲ್ಲಿ ಬೇಯಿಸಬಹುದು. ಹೀಗೆ ಮಾಡುವುದಾದರೆ ಚಿಕನ್ ಪೀಸ್‍ಗಳನ್ನು ಮಜ್ಜಿಗೆಯಲ್ಲಿ 2-3 ತಾಸುಗಳ ಕಾಲ ನೆನೆಯಿಟ್ಟಿರಬೇಕು.
4. 20 ನಿಮಿಷದ ಬಳಿಕ ನೆನೆಯಿಟ್ಟ ಚಿಕನ್ ಪೀಸ್‍ಗಳನ್ನು ಮಜ್ಜಿಗೆಯಿಂದ ಹೊರ ತೆಗೆಯಬೇಕು. ಮಜ್ಜಿಗೆಯನ್ನು ಸಂಪೂರ್ಣ ಬಳಿಸಿ ಇನ್ನೊಂದು ಪಾತ್ರೆಯಲ್ಲಿ ಹಾಕಬೇಕು.
5. ಇನ್ನೊಂದು ಪಾತ್ರೆಯಲ್ಲಿ ಕೆಂಪು ಮೆಣಸಿನ ಪುಡಿ, ಕಾರ್ನ್ ಹಿಟ್ಟು, ಅರಿಶಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್‌ಗಳನ್ನು ಚೆನ್ನಾಗಿ ಬೆರೆಸಿ, 10 ನಿಮಿಷ ಬಿಡಬೇಕು.
6. ದಪ್ಪ ತಳದ ಒಂದು ಕಡಾಯಿ/ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಮೇಲೆ ಚಿಕನ್ ಭಾಗಗಳನ್ನು ಹುರಿಯಿರಿ. ನೆನಪಿರಲಿ ಎಣ್ಣೆ ಅತಿಯಾಗಿ ಕಾದಿದ್ದರೆ ಚಿಕನ್ ಪೀಸ್ ಕೇಲವ ಹೊರಭಾಗದಲ್ಲಿ ಬೆಂದಿರುತ್ತದೆ. ಎಣ್ಣೆ ಮಂದಗತಿಯಲ್ಲಿ ಬಿಸಿಯಾಗಿದ್ದರೆ ಚಿಕನ್ ಪೀಸ್‍ಗಳು ಹೆಚ್ಚು ಎಣ್ಣೆಯನ್ನು ಹೀರಿಕೊಂಡು, ಅತಿಯಾಗಿ ಮೆದುವಾದಂತೆ ಆಗುತ್ತದೆ. ಹಾಗಾಗಿ ಚಿಕನ್‍ಅನ್ನು ಬೇಕ್ ಅಥವಾ ಗ್ರಿಲ್‍ಗಳ ಮೂಲಕ ಬೇಯಿಸಿಕೊಳ್ಳಬಹುದು.
7. ಚಿಕನ್ ಪೀಸ್‍ಗಳು ಚನ್ನಾಗಿ ಹುರಿದು ಹೊಂಬಣ್ಣ/ಚಿನ್ನದಬಣ್ಣಕ್ಕೆ ಬಂದಾಗ ಉರಿಯಿಂದ ತೆಗೆಯಬೇಕು.
8. ಹುರಿಯುವ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಬಿಸಿಯಾದ ನಂತರ ಹೆಚ್ಚಿಕೊಂಡ ಬೆಳ್ಳುಳ್ಳಿಯನ್ನು ಸೇರಿಸಿ.
9. ಬೆಳ್ಳುಳ್ಳಿ ಹುರಿದು ಪರಿಮಳ ಬರುತ್ತಿರುವಾಗ ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವು/ಒಗ್ಗರಣೆ ಸೊಪ್ಪುನ್ನು ಹಾಕಿ.
10. ಇವೆಲ್ಲಾ ಹುರಿಯುತ್ತಿದ್ದಂತೆ ಒಂದು ಮುಷ್ಟಿ ಪುದೀನದ ಎಲೆ ಮತ್ತು ಗರಮ್ ಮಸಾಲ ಪುಡಿಯನ್ನು ಸೇರಿಸಿ. ಇದನ್ನು ಎರಡು ನಿಮಿಷಗಳ ಕಾಲ ಕೈಯಾಡಿಸುತ್ತಿರಬೇಕು.
11. ತಕ್ಷಣವೇ ಗಟ್ಟಿ ಮೊಸರನ್ನು ಸೇರಿಸಿ. ಇದು ತುಂಬಾ ಹುಳಿಯಾಗಿದೆಯೇ ಎಂದು ಮೊದಲೇ ಪರೀಕ್ಷಿಸಿಕೊಳ್ಳಿ.
12. ಮೊಸರನ್ನು ಸೇರಿಸಿದ ನಂತರ ಸಣ್ಣ ಉರಿಯಲ್ಲಿ ದಪ್ಪವಾಗುವವರೆಗೆ ಬೇಯಿಸಬೇಕು.
13. ಈ ಸಮಯದಲ್ಲೇ ಸೋಯಾ ಸಾಸ್‍ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.
14. ಈಗ ಹುರಿದುಕೊಂಡ ಚಿಕನ್ ಪೀಸ್‍ಗಳನ್ನು ಸೇರಿಸಿ, ಕೈಯಾಡಿಸುತ್ತಿರಬೇಕು. ಚಿಕನ್ ಪೀಸ್‍ಗಳು ಎಲ್ಲಾ ದ್ರಾವಣಗಳನ್ನು ಚೆನ್ನಾಗಿ ಹೀರಿಕೊಳ್ಳುವಂತೆ ಕೈಯಾಡಿಸಬೇಕು.
15. ಚಿಕನ್ ಪೀಸ್ ಸರಿಯಾಗಿ ಮಿಶ್ರಣವನ್ನು ಹೀರಿಕೊಂಡಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ.

ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!

English summary

Chicken Majestic Recipe For Ramzan

Today, we bring to you a famous Hyderabadi chicken dish. It is called Chicken Majestic and can be served as either a snack when you break the fast or at the elaborate Iftar feast. The recipe basically produces a dry dish; but if you would like a semi-gravy dish, all you need to do is add a little more curd. So, let us take a look at the ingredients and how the chicken majestic recipe is to be made.
X
Desktop Bottom Promotion