Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರುಚಿ ಹೆಚ್ಚಿಸುವ 'ಚಿಕನ್ ಮೆಜೆಸ್ಟಿಕ್' ಹೊಸ ಶೈಲಿಯ ರೆಸಿಪಿ!
ರಂಜಾನ್ಗಾಗಿ ಉಪವಾಸ ಮಾಡುವುದು ಸಂಪ್ರದಾಯ. ಈ ಸಮಯದಲ್ಲಿ ಆಹಾರವನ್ನು ತ್ಯಜಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶದಿಂದ ದೂರ ಉಳಿದಿರುತ್ತಾರೆ. ಅದಕ್ಕಾಗಿಯೇ ಉಪವಾಸದ ನಂತರದ ಸಮಯದಲ್ಲಿ ಸೇವಿಸುವ ದ್ರವರೂಪದ ಆಹಾರ ಮತ್ತು ಘನ ಆಹಾರದಲ್ಲಿ ಪೌಷ್ಟಿಕಾಂಶಗಳು ಇರುವಂತೆಯೇ ಕಾಳಜಿವಹಿಸಬೇಕು. ಇಲ್ಲವಾದರೆ ಆಯಾಸ ಹಾಗೂ ನಿರ್ಜಲೀಕರಣ(ಡಿಹೈಡ್ರೇಷನ್) ಉಂಟಾಗುವುದು.
ಉಪವಾಸದಿಂದ ದೇಹವು ಬಸವಳಿದಿರುತ್ತದೆ. ಈ ಸಮಯದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್ಅನ್ನು ಬ್ರೆಡ್ ಮತ್ತು ಅಕ್ಕಿ ಪದಾರ್ಥಗಳಿಂದ ಪಡೆಯಬಹುದು. ಪ್ರೋಟೀನ್ಗಳನ್ನು ಸಸ್ಯಹಾರಿ ಪದಾರ್ಥಗಳಿಂದ ಪಡೆಯಬಹುದು. ಮೀನು, ಕೋಳಿ ಮತ್ತು ಮಟನ್ಗಳು ಸಹ ಉತ್ತಮ ಪ್ರೋಟೀನ್ಗಳನ್ನು ಒಳಗೊಂಡಿರುತ್ತವೆ. ರಂಜಾನ್ ನಂತರ ಇವುಗಳಿಂದ ವಿಶಿಷ್ಟ ಖಾದ್ಯಗಳನ್ನು ತಯಾರಿಸಿ ಸವಿಯಬಹುದು.
ವಾವ್! 'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಉಪವಾಸದ
ನಂತರ
ಸುಲಭವಾಗಿ
ತಯಾರಿಸಬಹುದಾದ
ಹೊಸ
ರುಚಿಯ
ಪರಿಚಯವನ್ನು
ನಿಮ್ಮ
ಮುಂದೆ
ಇಡುತ್ತಿದ್ದೇವೆ.
ಇದು
ಹೈದರಾಬಾದ್ನ
ಪ್ರಸಿದ್ಧ
ಚಿಕನ್
ಖಾದ್ಯ.
ಇದಕ್ಕೆ
"ಚಿಕನ್
ಮೆಜೆಸ್ಟಿಕ್'
ಎಂದು
ಕರೆಯುತ್ತಾರೆ.
ಇದು
ಒಂದು
ಬಗೆಯ
ಡ್ರೈ
ಡಿಶ್(ಒಣ
ಭಕ್ಷ).
ನಿಮಗೆ
ಸ್ವಲ್ಪ
ಗ್ರೇವಿಯ
ತರಹ
ಬೇಕೆಂದರೆ
ಸ್ವಲ್ಪ
ಮೊಸರನ್ನು
ಸೇರಿಸಬಹುದು.
ಇದರ
ಸಿದ್ಧತೆ
ಮತ್ತು
ತಯಾರಿಗೆ
ಸ್ವಲ್ಪ
ಸಮಯ
ಹಿಡಿಯಬಹುದು.
ಆದರೆ
ಖಾದ್ಯ
ಮಾತ್ರ
ಬಹಳ
ರುಚಿಕರವಾಗಿರುತ್ತದೆ.
ಈ
ರುಚಿಕರ
ಪದಾರ್ಥವನ್ನು
ತಯಾರಿಸಲು
ಬೇಕಾಗುವ
ಪದಾರ್ಥಗಳು
ಮತ್ತು
ತಯಾರಿಸುವ
ವಿಧಾನವನ್ನು
ತಿಳಿಯೋಣ.
ಬೇಕಾಗುವ
ಸಾಮಾಗ್ರಿಗಳು:
ಮಿಶ್ರಣ
ತಯಾರಿಸಲು
*
ಮೂಳೆಯಿಲ್ಲದ
ಚಿಕನ್
ಪೀಸ್
-300
ಗ್ರಾಂ.
*
ಮಜ್ಜಿಗೆ
-1/2
ಕಪ್
*
ಕಾರ್ನ್
ಹಿಟ್ಟು
1
1/2
ಚಮಚ
*
ಶುಂಠಿ
ಮತ್ತು
ಬೆಳ್ಳುಳ್ಳಿ
ಪೇಸ್ಟ್-
1
ಚಮಚ.
*
ಅರಿಶಿನ
ಪುಡಿ-1
ಚಮಚ
*
ಕೆಂಪು
ಮೆಣಸಿನ
ಪುಡಿ-
1/2
ಚಮಚ
*
ಎಣ್ಣೆ-
ಆಳವಾಗಿ
ಹುರಿಯಲು
ಸ್ವಲ್ಪ
*
ಉಪ್ಪು-2
ಚಮಚ
ರಂಜಾನ್
ಹಬ್ಬಕ್ಕೆ
'ಆಲೂ
ಚಿಕನ್
ಬಿರಿಯಾನಿ'
ಮಾಡಿ
ನೋಡಿ!
ಹುರಿಯುವ
ಸಮಯಕ್ಕೆ
*
ಎಣ್ಣೆ-
ಆಳವಾಗಿ
ಹುರಿಯಲು
ಸ್ವಲ್ಪ
*
ಹೆಚ್ಚಿದ
ಬೆಳ್ಳುಳ್ಳಿ-
1
ಗಡ್ಡೆ
*
ಹಸಿ
ಮೆಣಸು-2
*
ಕರಿಬೇವು/ಒಗ್ಗರಣೆ
ಸೊಪ್ಪು-
ಸ್ವಲ್ಪ
*
ಪುದೀನ
ಎಲೆ-
ಒಂದು
ಮುಷ್ಟಿ
*
ಸೋಯಾ
ಸಾಸ್-1
ಚಮಚ
*
ಕೆಂಪು
ಮೆಣಸಿನ
ಪುಡಿ-1/4
ಚಮಚ
*
ಗರಮ್
ಮಸಾಲಾ
ಪುಡಿ
-1/2
ಚಮಚ
*
ಗಟ್ಟಿ
ಮೊಸರು
-3
ಚಮಚ
ತಯಾರಿಸುವ
ವಿಧಾನ
1.
ಚಿಕನ್
ಪೀಸ್ಗಳನ್ನು
2-3
ಇಂಚ್
ಉದ್ದದಷ್ಟು
ಸೀಳಿಕೊಳ್ಳಬೇಕು.
2.
ಒಂದು
ದೊಡ್ಡ
ಪಾತ್ರೆಯಲ್ಲಿ
ಮಜ್ಜಿಗೆ
ಮತ್ತು
2
ಚಮಚ
ಉಪ್ಪನ್ನು
ಸೇರಿಸಿ
ಇಡಿ.
3.
ಸೀಳಿಕೊಂಡ
ಚಿಕನ್
ಪೀಸ್ಗಳನ್ನು
ದೊಡ್ಡ
ಪಾತ್ರದ
ಮಜ್ಜಿಗೆಯಲ್ಲಿ
20
ನಿಮಿಷಗಳ
ಕಾಲ
ನೆನೆಯಿಡಬೇಕು.
ಚಿಕನ್
ಭಾಗಗಳನ್ನು
ಓವನ್
ಅಥವಾ
ಗ್ರಿಲ್ಗಳಲ್ಲಿ
ಬೇಯಿಸಬಹುದು.
ಹೀಗೆ
ಮಾಡುವುದಾದರೆ
ಚಿಕನ್
ಪೀಸ್ಗಳನ್ನು
ಮಜ್ಜಿಗೆಯಲ್ಲಿ
2-3
ತಾಸುಗಳ
ಕಾಲ
ನೆನೆಯಿಟ್ಟಿರಬೇಕು.
4.
20
ನಿಮಿಷದ
ಬಳಿಕ
ನೆನೆಯಿಟ್ಟ
ಚಿಕನ್
ಪೀಸ್ಗಳನ್ನು
ಮಜ್ಜಿಗೆಯಿಂದ
ಹೊರ
ತೆಗೆಯಬೇಕು.
ಮಜ್ಜಿಗೆಯನ್ನು
ಸಂಪೂರ್ಣ
ಬಳಿಸಿ
ಇನ್ನೊಂದು
ಪಾತ್ರೆಯಲ್ಲಿ
ಹಾಕಬೇಕು.
5.
ಇನ್ನೊಂದು
ಪಾತ್ರೆಯಲ್ಲಿ
ಕೆಂಪು
ಮೆಣಸಿನ
ಪುಡಿ,
ಕಾರ್ನ್
ಹಿಟ್ಟು,
ಅರಿಶಿನ
ಪುಡಿ,
ಶುಂಠಿ
ಮತ್ತು
ಬೆಳ್ಳುಳ್ಳಿಯ
ಪೇಸ್ಟ್ಗಳನ್ನು
ಚೆನ್ನಾಗಿ
ಬೆರೆಸಿ,
10
ನಿಮಿಷ
ಬಿಡಬೇಕು.
6.
ದಪ್ಪ
ತಳದ
ಒಂದು
ಕಡಾಯಿ/ಪಾತ್ರೆಯಲ್ಲಿ
ಎಣ್ಣೆಯನ್ನು
ಹಾಕಿ
ಬಿಸಿ
ಮಾಡಿ.
ಎಣ್ಣೆ
ಬಿಸಿಯಾದ
ಮೇಲೆ
ಚಿಕನ್
ಭಾಗಗಳನ್ನು
ಹುರಿಯಿರಿ.
ನೆನಪಿರಲಿ
ಎಣ್ಣೆ
ಅತಿಯಾಗಿ
ಕಾದಿದ್ದರೆ
ಚಿಕನ್
ಪೀಸ್
ಕೇಲವ
ಹೊರಭಾಗದಲ್ಲಿ
ಬೆಂದಿರುತ್ತದೆ.
ಎಣ್ಣೆ
ಮಂದಗತಿಯಲ್ಲಿ
ಬಿಸಿಯಾಗಿದ್ದರೆ
ಚಿಕನ್
ಪೀಸ್ಗಳು
ಹೆಚ್ಚು
ಎಣ್ಣೆಯನ್ನು
ಹೀರಿಕೊಂಡು,
ಅತಿಯಾಗಿ
ಮೆದುವಾದಂತೆ
ಆಗುತ್ತದೆ.
ಹಾಗಾಗಿ
ಚಿಕನ್ಅನ್ನು
ಬೇಕ್
ಅಥವಾ
ಗ್ರಿಲ್ಗಳ
ಮೂಲಕ
ಬೇಯಿಸಿಕೊಳ್ಳಬಹುದು.
7.
ಚಿಕನ್
ಪೀಸ್ಗಳು
ಚನ್ನಾಗಿ
ಹುರಿದು
ಹೊಂಬಣ್ಣ/ಚಿನ್ನದಬಣ್ಣಕ್ಕೆ
ಬಂದಾಗ
ಉರಿಯಿಂದ
ತೆಗೆಯಬೇಕು.
8.
ಹುರಿಯುವ
ಪಾತ್ರೆಯಲ್ಲಿ
ಸ್ವಲ್ಪ
ಎಣ್ಣೆ
ಹಾಕಿ
ಬಿಸಿಮಾಡಿ.
ಎಣ್ಣೆ
ಬಿಸಿಯಾದ
ನಂತರ
ಹೆಚ್ಚಿಕೊಂಡ
ಬೆಳ್ಳುಳ್ಳಿಯನ್ನು
ಸೇರಿಸಿ.
9.
ಬೆಳ್ಳುಳ್ಳಿ
ಹುರಿದು
ಪರಿಮಳ
ಬರುತ್ತಿರುವಾಗ
ಹೆಚ್ಚಿಕೊಂಡ
ಹಸಿ
ಮೆಣಸು
ಮತ್ತು
ಕರಿಬೇವು/ಒಗ್ಗರಣೆ
ಸೊಪ್ಪುನ್ನು
ಹಾಕಿ.
10.
ಇವೆಲ್ಲಾ
ಹುರಿಯುತ್ತಿದ್ದಂತೆ
ಒಂದು
ಮುಷ್ಟಿ
ಪುದೀನದ
ಎಲೆ
ಮತ್ತು
ಗರಮ್
ಮಸಾಲ
ಪುಡಿಯನ್ನು
ಸೇರಿಸಿ.
ಇದನ್ನು
ಎರಡು
ನಿಮಿಷಗಳ
ಕಾಲ
ಕೈಯಾಡಿಸುತ್ತಿರಬೇಕು.
11.
ತಕ್ಷಣವೇ
ಗಟ್ಟಿ
ಮೊಸರನ್ನು
ಸೇರಿಸಿ.
ಇದು
ತುಂಬಾ
ಹುಳಿಯಾಗಿದೆಯೇ
ಎಂದು
ಮೊದಲೇ
ಪರೀಕ್ಷಿಸಿಕೊಳ್ಳಿ.
12.
ಮೊಸರನ್ನು
ಸೇರಿಸಿದ
ನಂತರ
ಸಣ್ಣ
ಉರಿಯಲ್ಲಿ
ದಪ್ಪವಾಗುವವರೆಗೆ
ಬೇಯಿಸಬೇಕು.
13.
ಈ
ಸಮಯದಲ್ಲೇ
ಸೋಯಾ
ಸಾಸ್ಅನ್ನು
ಸೇರಿಸಿ,
ಚೆನ್ನಾಗಿ
ಮಿಶ್ರಗೊಳಿಸಬೇಕು.
14.
ಈಗ
ಹುರಿದುಕೊಂಡ
ಚಿಕನ್
ಪೀಸ್ಗಳನ್ನು
ಸೇರಿಸಿ,
ಕೈಯಾಡಿಸುತ್ತಿರಬೇಕು.
ಚಿಕನ್
ಪೀಸ್ಗಳು
ಎಲ್ಲಾ
ದ್ರಾವಣಗಳನ್ನು
ಚೆನ್ನಾಗಿ
ಹೀರಿಕೊಳ್ಳುವಂತೆ
ಕೈಯಾಡಿಸಬೇಕು.
15.
ಚಿಕನ್
ಪೀಸ್
ಸರಿಯಾಗಿ
ಮಿಶ್ರಣವನ್ನು
ಹೀರಿಕೊಂಡಿದೆ
ಎನ್ನುವುದು
ಖಚಿತವಾಗುತ್ತಿದ್ದಂತೆ
ಪಾತ್ರೆಯನ್ನು
ಉರಿಯಿಂದ
ಕೆಳಗಿಳಿಸಿ.
ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!