For Quick Alerts
ALLOW NOTIFICATIONS  
For Daily Alerts

ರಂಜಾನ್ ಹಬ್ಬಕ್ಕೆ 'ಆಲೂ ಚಿಕನ್ ಬಿರಿಯಾನಿ' ಮಾಡಿ ನೋಡಿ!

By Arshad
|

ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ರಮಧಾನ್ (ವಾಡಿಕೆಯಂತೆ ರಂಜಾನ್) ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳಾಗಿದ್ದು ಇಡಿಯ ಮಾಸ ಮುಸ್ಲಿಮರು ಸೂರ್ಯೋದಯಕ್ಕೂ ಒಂದು ಗಂಟೆ ಮುನ್ನಾಸಮಯದಿಂದ ಸೂರ್ಯಾಸ್ತದವರೆಗೆ ಕಠಿಣ ಉಪವಾಸ ಕೈಗೊಳ್ಳುತ್ತಾರೆ. ಇದು ಸುಮಾರು ಹದಿನಾಲ್ಕೂವರೆ ಗಂಟೆಗಳ ಕಾಲವಾಗಿದ್ದು ಈ ಅವಧಿಯಲ್ಲಿ ದೈಹಿಕವಾಗಿ ಆಹಾರವನ್ನೂ, ಮಾನಸಿಕವಾಗಿ ಹತ್ತು ಹಲವು ಕಟ್ಟುಪಾಡುಗಳನ್ನು ವಿಧಿಸಿಕೊಳ್ಳುವ ಮೂಲಕ ಶರೀರ ಮತ್ತು ಮನಸ್ಸನ್ನು ಶುದ್ಧಿಗೊಳಿಸಲು ಅನುವಾಗುವುದೇ ಈ ಮಾಸದ ಮಹತ್ವವಾಗಿದೆ.

ಈ ಹದಿನಾಲ್ಕು ಘಂಟೆಗಳಲ್ಲಿ ದೇಹದ ಚಟುವಟಿಕೆಗಳಿಗೆ ದೇಹ ಸಂಗ್ರಹವಾಗಿದ್ದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ಶಕ್ತಿಯನ್ನು ಮರುತುಂಬಿಸಿಕೊಳ್ಳಲು ಸಂಜೆಯ ಉಪವಾಸ ಸಂಪನ್ನಗೊಳಿಸುವ ಊಟದ ಸಮಯದಲ್ಲಿ (ಇಫ್ತಾರ್) ಉತ್ತಮ ಪೌಷ್ಟಿಕ ಆಹಾರದ ಅಗತ್ಯವಿದೆ. ಖರ್ಜೂರ ಈ ನಿಟ್ಟಿನಲ್ಲಿ ಅತ್ಯುತ್ತಮವಾದ ಆಹಾರವಾಗಿದೆ. ಆದರೆ ಇದರೊಂದಿಗೇ ಇತರ ರುಚಿಯಾದ ಭಕ್ಷ್ಯಗಳನ್ನೂ ತಯಾರಿಸಲಾಗುತ್ತದೆ.

ಇಫ್ತಾರ್‌ಗೆ ಆಗಮಿಸುವ ಅತಿಥಿಗಳನ್ನು ಸತ್ಕರಿಸಲು ಹಲವು ಬಗೆಯ ಮತ್ತು ಪೌಷ್ಟಿಕವಾದ ಹೊಸರುಚಿಗಳನ್ನು ಆಯ್ಕೆ ಮಾಡುವುದೇ ಗೃಹಿಣಿಯರಿಗೆ ಒಂದು ಸವಾಲಿನ ವಿಷಯವಾಗಿದೆ. ಈ ಸವಾಲನ್ನು ಆಲೂ ಚಿಕನ್ ಬಿರಿಯಾನಿ ಸಮರ್ಥವಾಗಿ ಎದುರಿಸುತ್ತದೆ. ಇದು ಅತ್ಯಂತ ಪೌಷ್ಟಿಕವಾಗಿದ್ದು ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಬನ್ನಿ, ಈ ರುಚಿಕರ ಬಿರಿಯಾನಿ ಮಾಡುವುದು ಹೇಗೆ ಎಂಬುದನ್ನು ನೋಡೋಣ: ರಂಜಾನ್‌ಗಾಗಿ ರುಚಿಯಾದ ಕೇರಳ ಶೈಲಿಯ ಬಿರಿಯಾನಿ ರೆಸಿಪಿ

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಮೂವತ್ತು ನಿಮಷಗಳು

*ತಯಾರಿಕಾ ಸಮಯ: ನಲವತ್ತೈದು ನಿಮಿಷಗಳು

Aloo Chicken Biryani Recipe: A Must Try For Ramzan

ಅಗತ್ಯವಿರುವ ಸಾಮಾಗ್ರಿಗಳು

*ಕೋಳಿಮಾಂಸ: ತಾಜಾ, ಐನೂರು ಗ್ರಾಂ

*ಬಾಸ್ಮತಿ ಅಥವ ಗಂಧಸಾಲೆ ಅಕ್ಕಿ : ಅರ್ಧ ಕೇಜಿ (ಇದನ್ನು ಅರ್ಧ ಬೇಯಿಸಿ ಬಸಿದು ಇಡಬೇಕು)

*ಆಲುಗಡ್ಡೆ: ಸುಮಾರು ನಾಲ್ಕರಿಂದ ಐದು, ಮಧ್ಯಮ ಗಾತ್ರ (ಚಿಕ್ಕದಾದ ಚೌಕಾಕಾರದ ತುಂಡುಗಳಾಗಿಸಿದ್ದು)

*ಚೆಕ್ಕೆ: ಒಂದಿಂಚಿನ ಸುಮಾರು ನಾಲ್ಕೈದು ತುಂಡುಗಳು

*ಏಲಕ್ಕಿ: ನಾಲ್ಕಾರು.

*ದಾಲ್ಚಿಚ್ಚಿ ಎಲೆ: ಒಂದು

*ಲವಂಗ: ನಾಲ್ಕಾರು ಕಾಳುಗಳು

*ಕಾಳುಮೆಣಸು: ಸುಮಾರು ಐದರಿಂದ ಆರು

*ಹಸಿಮೆಣಸು: ಎಂಟರಿಂದ ಹತ್ತು

*ಈರುಳ್ಳಿ: ಎರಡು ಕಪ್, ಚಿಕ್ಕದಾಗಿ ಹೆಚ್ಚಿದ್ದು

*ಅರಿಶಿನ ಪುಡಿ - 1/2 ಚಿಕ್ಕ ಚಮಚ

*ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ (ಬ್ಯಾಡಗಿ ಉತ್ತಮ, ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಿಕ್ಕ ಚಮಚ ಬಳಸಿ)

*ಲಿಂಬೆ ರಸ - 1 ಚಿಕ್ಕ ಚಮಚ

*ಕೊತ್ತಂಬರಿ ಸೊಪ್ಪು - 4 ರಿದ 5 ಎಸಳು

*ಕೇಸರಿ - 1 ಚಿಕ್ಕಚಮಚ (ಅಥವಾ ಕಾಲು ಗ್ರಾಂ ಸಾಕು)

*ಎಣ್ಣೆ: ಅಗತ್ಯಕ್ಕೆ ತಕ್ಕಂತೆ

*ಉಪ್ಪು ರುಚಿಗನುಸಾರ ನಾಲಿಗೆಯ ರುಚಿ ತಣಿಸುವ ವೆಜ್ ಬಿರಿಯಾನಿ!

ತಯಾರಿಕಾ ವಿಧಾನ:

1) ಒಂದು ದಪ್ಪತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ಇದರಲ್ಲಿ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಇದನ್ನು ಚಿಕ್ಕ ತಟ್ಟೆಯಲ್ಲಿ ಬೇರೆಯಾಗಿ ತೆಗೆದಿಡಿ.

2) ಇದೇ ಬಾಣಲೆಗೆ ಇನ್ನೊಂದಿಷ್ಟು ಎಣ್ಣೆ ಹಾಕಿ ಆಲುಗಡ್ಡೆಯ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ. ಇದನ್ನೂ ಇನ್ನೊಂದು ತಟ್ಟೆಯಲ್ಲಿ ಬೇರೆಯಾಗಿ ತೆಗೆದಿಡಿ.

3) ಈಗ ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಕೋಳಿಮಾಂಸ (ತೊಳೆದ ನೀರು ಪೂರ್ಣವಾಗಿ ಇಳಿದಿರಬೇಕು), ಉಪ್ಪು, ಕೆಂಪುಮೆಣಸಿನ ಪುಡಿ ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಸುಮಾರು ಹದಿನೈದು ನಿಮಿಷಗಳ ಕಾಲ ಪಕ್ಕದಲ್ಲಿಡಿ.

4) ಈಗ ಬಿರಿಯಾನಿ ಪ್ರಮಾಣ ಹಿಡಿಸುವಷ್ಟು ದೊಡ್ಡ, ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ದಾಲ್ಚಿನ್ನಿ, ಏಲಕ್ಕಿ, ಕಾಳುಮೆಣಸು, ದಾಲ್ಚಿನ್ನಿ ಎಲೆ, ಹಸಿಮೆಣಸು, ಲವಂಗ ಎಲ್ಲವನ್ನೂ ಚೆನ್ನಾಗಿ ತಿರುವುತ್ತಾ ಹುರಿಯಿರಿ.

5) ಇದಕ್ಕೆ ಕೋಳಿಮಾಂಸವನ್ನು ಹಾಕಿ ಮತ್ತಷ್ಟು ತಿರುವಿರಿ.

6) ಈ ಮಾಂಸ ಬೇಯುತ್ತಿರುವ ಹೊತ್ತಿನಲ್ಲಿ ಒಲೆಯ ಇನ್ನೊಂದು ಬದಿಯಲ್ಲಿ ಪ್ರೆಶರ್ ಕುಕ್ಕರ್‌ ಇಟ್ಟು ಇದರಲ್ಲಿ ಅರ್ಧ ಬೆಂದಿದ್ದ ಅಕ್ಕಿಯನ್ನು ಹಾಕಿ.

7) ಈಗ ಇತ್ತಕಡೆಯ ಪಾತ್ರೆಯಲ್ಲಿದ್ದ ಕೋಳಿಮಾಂಸವನ್ನು ಅಕ್ಕಿಯ ಮೇಲೆ ಸುರಿಯಿರಿ.

8) ಪ್ರೆಶರ್ ಕುಕ್ಕರಿನ ಮುಚ್ಚಳ ಮುಚ್ಚಿ ಸುಮಾರು ಮೂರು ಸೀಟಿ ಬರುವವರೆಗೆ ಬೇಯಿಸಿ.

9) ಕುಕ್ಕರ್ ತಣಿಸಿದ ಬಳಿಕ ಮುಚ್ಚಳ ತೆರೆದು ಮೊದಲಿನ ದಪ್ಪತಳದ ಪಾತ್ರೆಗೆ ನಿಧಾನವಾಗಿ ಸುರಿಯಿರಿ. ಇದರ ಮೇಲೆ ಕೇಸರಿಯ ತುಣುಕುಗಳನ್ನು ಸಿಂಪಡಿಸಿ

10) ಇದಕ್ಕೆ ಮೊದಲು ಬೇಯಿಸಿಟ್ಟಿದ್ದ ಈರುಳ್ಳಿ, ಆಲುಗಡ್ಡೆ ಹಾಕಿ ಆವರಿಸುವಂತೆ ಮಾಡಿ. ಮೇಲ್ಭಾಗದಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ ಕೊಂಚ ಹೊತ್ತು ಬಿಗಿಯಾಗಿ ಮುಚ್ಚಳ ಮುಚ್ಚಿಡಿ. ರಂಜಾನ್ ಹಬ್ಬಕ್ಕೆ ಸ್ಪೆಷೆಲ್-ಚಿಕನ್ ಹುಸೈನಿ

ಇಫ್ತಾರ್ ಸಮಯದಲ್ಲಿ ಪಾತ್ರೆಯನ್ನೇ ಅತಿಥಿಗಳ ನಡುವೆ ಕೊಂಡೊಯ್ದು ಬಿಸಿಬಿಸಿಯಾಗಿ ಬಡಿಸಿ, ಮೆಚ್ಚುಗೆಗಳಿಸಿ. ಇದರೊಂದಿಗೆ ಮೊಸರಿನ ರಾಯ್ತಾ ಉತ್ತಮ ಜೊತೆಯಾಗುತ್ತದೆ. ಈ ಬಿರಿಯಾನಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

English summary

Aloo Chicken Biryani Recipe: A Must Try For Ramzan

Ramzan is a very auspicious month for Muslims across the world. Irrespective of the work life, they have to fast during this month, as it is believed that it will take them closer to God. During the month of Ramzan people do not consume water or food for more than 12 hours at a stretch in a day. As we know, Suhoor is the morning meal that they take around 4 AM (before sunrise) and Iftar is taken post sunset.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more