Just In
- 33 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲರಿಗೂ ರುಚಿಸೋ ಮಲ್ಬೆರಿ ಮಿಲ್ಕ್ ಶೇಕ್
ಕೆಲವು ಹಣ್ಣುಗಳು ಭಾರತದ ಮಾರುಕಟ್ಟೆಗಳಲ್ಲಿ ಸಿಗುವುದಿಲ್ಲ. ಮಾರಾಟ ಪ್ರಕ್ರಿಯೆಗೆ ಸರಿಯಾದ ವ್ಯವಸ್ಥೆ ಲಭ್ಯವಿಲ್ಲದೇ ಇರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಅಂತಹ ಹಣ್ಣುಗಳಲ್ಲಿ ಮಲ್ಬೆರಿ ಕೂಡ ಒಂದು.
ದೇಶದ ಹಲವು ಪ್ರದೇಶಗಳಲ್ಲಿ ಮಲ್ಬೆರಿ ಅಥವಾ ಹಿಪ್ಪುನೇರಳೆ ಅಥವಾ ಆಮ್ರ ಹಣ್ಣು ಎಂದು ಕರೆಯುವ ಹಣ್ಣು ಬೆಳೆಯುತ್ತದೆಯಾದರೂ ಅದು ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ.
ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳನ್ನು ನೀಡುವ ಈ ಹಣ್ಣುಗಳ ಉಪಯೋಗವನ್ನು ಬೆಳೆಯುವವರೂ ಕೂಡ ತಿಳಿದಿಲ್ಲ. ರಕ್ತದ ಕಣಗಳ ವೃದ್ಧಿಗೆ ಸಾಕಷ್ಟು ಪ್ರಯೋಜನ ನೀಡುವ ಈ ಹಣ್ಣು ತಿನ್ನಲು ಬಲು ರುಚಿ. ಕೇವಲ ತಿನ್ನುವುದು ಮಾತ್ರ ಅನೇಕ ರೀತಿಯ ರೆಸಿಪಿಯನ್ನು ಕೂಡ ಇದರಿಂದ ಮಾಡಬಹುದು. ವಿದೇಶಗಳಲ್ಲಿ ಮಲ್ಬೆರಿಯನ್ನು ಕೇಕ್ ಗಳ ತಯಾರಿಕೆಯಲ್ಲೂ ಕೂಡ ಬಳಸುತ್ತಾರೆ. ನಾವಿಲ್ಲಿ ನಿಮಗೆ ಸಿಂಪಲ್ ಆಗಿ ಮಲ್ಬೆರಿಯಿಂದ ಮಿಲ್ಕ್ ಶೇಕ್ ತಯಾರಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.
ಒಂದು ವೇಳೆ ನಿಮ್ಮ ಮನೆಯ ಸುತ್ತಮುತ್ತ ಎಲ್ಲಿಯಾದರೂ ಮಲ್ಬೆರಿ ಹಣ್ಣುಗಳನ್ನು ಗಮನಿಸಿದರೆ ಖಂಡಿತ ಅದನ್ನು ವೇಸ್ಟ್ ಆಗಲು ಬಿಡಬೇಡಿ. ಬದಲಾಗಿ ಮಿಲ್ಕ್ ಶೇಕ್ ತಯಾರಿಸಿ. ಮಕ್ಕಳ ಆರೋಗ್ಯಕ್ಕೆ ಇದು ಬಹಳ ಪ್ರಯೋಜನ ನೀಡುತ್ತದೆ.
Recipe By: Sushma
Recipe Type: Veg
Serves: 1
-
ಬೇಕಾಗುವ ಸಾಮಗ್ರಿಗಳು:
ಮಲ್ಬೆರಿ ಹಣ್ಣುಗಳು- 25 ರಿಂದ 30
ಹಾಲು - ಒಂದು ಲೋಟ
ಜೇನುತುಪ್ಪ - ಒಂದು ಸ್ಪೂನ್
ಸಕ್ಕರೆ - 3 ಸ್ಪೂನ್
-
ಮಾಡುವ ವಿಧಾನ:
ಮಲ್ಬೆರಿ ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
ನಂತರ ಅವುಗಳನ್ನು ಕೈಯಲ್ಲಿ ಸ್ಮ್ಯಾಶ್ ಮಾಡಿ.
ಅದಕ್ಕೆ ಒಂದು ಲೋಟ ಹಾಲು, ಮೂರು ಸ್ಪೂನ್ ಸಕ್ಕರೆ,ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕದಡಿದರೆ ಮಿಕ್ಸ್ ಶೇಕ್ ಸಿದ್ಧವಾಗುತ್ತದೆ.
ಹೀಗೆ ಮಾಡುವುದರಿಂದ ಮಲ್ಬೆರಿ ಹಣ್ಣುಗಳು ಪಲ್ಪಿಪಲ್ಪಿಯಾಗಿ ಬಾಯಿಗೆ ಸಿಗುವುದರಿಂದ ಮಕ್ಕಳಿಗೆ ಕುಡಿಯುವುದಕ್ಕೆ ಹೆಚ್ಚು ಇಷ್ಟವಾಗುತ್ತದೆ.
ಇನ್ನು ಹಣ್ಣುಗಳು, ಹಾಲು, ಸಕ್ಕರೆಯನ್ನು ಮಿಕ್ಸಿ ಮಾಡಿಕೊಂಡು ನಂತರ ಒಂದು ಚಮಚ ಜೇನುತುಪ್ಪ ಸೇರಿಸಿ ಕೂಡ ಮಿಲ್ಕ್ ಶೇಕ್ ಮಾಡಬಹುದು. ಆದರೆ ಇದರಲ್ಲಿ ಪಲ್ಪ್ ನಂತೆ ಹಣ್ಣುಗಳು ಬಾಯಿಗೆ ಸಿಗದೇ ಎಲ್ಲವೂ ಕೂಡ ನುಣ್ಣಗೆ ರುಬ್ಬಿರುತ್ತದೆ. ನಿಮ್ಮಗೆ ಯಾವ ವಿಧಾನ ಇಷ್ಟವೆನಿಸುತ್ತದೆಯೋ ಹಾಗೆ ತಯಾರಿಸಿಕೊಳ್ಳಬಹುದು. ನಾವಿಲ್ಲಿ ಮೊದಲನೇ ವಿಧಾನವನ್ನು ಅನುಸರಿಸಿದ್ದೇವೆ.
- ಪ್ರಯೋಜನಗಳು ಕಣ್ಣುಗಳ ಆರೋಗ್ಯ ಹೆಚ್ಚಿಸುವುದಕ್ಕೆ ಇದು ಪ್ರಯೋಜನಕಾರಿ . ವಿಟಮಿನ್ ಸಿ ಅಂಶ ಇದರಲ್ಲಿ ಹೇರಳವಾಗಿರುತ್ತದೆ . ಮಲಬದ್ಧತೆ ಸಮಸ್ಯೆ ಇರುವವರಿಗೆ ಒಳ್ಳೆಯದು . ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ ಮತ್ತು ರಕ್ತದ ಸಂಚಲನವನ್ನು ಅಧಿಕಗೊಳಿಸುತ್ತದೆ. . ದೇಹಕ್ಕೆ ತಂಪಾಗುತ್ತದೆ. . ದೇಹ ತೂಕ ಇಳಿಸುವುದರಲ್ಲೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. .ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಬಹಳ ಕಡಿಮೆ ಇರುತ್ತದೆ.