For Quick Alerts
ALLOW NOTIFICATIONS  
For Daily Alerts

ಹೆಸರು ಬೇಳೆ ಕಿಚಡಿ ರೆಸಿಪಿ

Posted By: Lekhaka
|

ಹೆಸರು ಬೇಳೆ ಕಿಚಡಿಯನ್ನು ಸಾಮಾನ್ಯವಾಗಿ ದಾಲ್ ಕಿಚಡಿ ಎಂದು ಸಹ ಕರೆಯುತ್ತಾರೆ. ಇದನ್ನು ಮಹಾರಾಷ್ಟ್ರದಲ್ಲಿ ಉಪಹಾರವಾಗಿ ಸ್ವೀಕರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಇದನ್ನು ದೇವರ ನೈವೇದ್ಯವಾಗಿಯೂ ತಯಾರಿಸಿ, ನಂತರ ಜನರು ಸವಿಯುತ್ತಾರೆ.

ಮೂಂಗ್ ದಾಲ್/ಹೆಸರು ಬೇಳೆ ಕಿಚಡಿ ಹೆಸರೇ ಹೇಳುವಂತೆ, ಕೆಲವು ಮಸಾಲೆ ಹಾಗೂ ಬೇಳೆ ಅಕ್ಕಿಗಳ ಮಿಶ್ರಣದಲ್ಲಿ ತಯಾರಿಸಲಾಗುವುದು. ಈರುಳ್ಳಿ, ಬೆಳ್ಳುಳ್ಳಿ ಇಷ್ಟ ಪಡುವವರು ಇದಕ್ಕೆ ಸೇರಿಸಿಕೊಳ್ಳಬಹುದು. ಈರುಳ್ಳಿ ಬೆಳ್ಳುಳ್ಳಿ ಇಲ್ಲದೆಯೇ ತಯಾರಿಸಬಹುದಾದ ಈ ಖಾದ್ಯವನ್ನು ದುರ್ಗ ಪೂಜೆ, ಗಣೇಶನ ಪೂಜೆ ಸೇರಿದಂತೆ ಅನೇಕ ಹಬ್ಬ ಹಾಗೂ ಉತ್ಸವಗಳಲ್ಲಿ ತಯಾರಿಸುತ್ತಾರೆ.

ಅತ್ಯಂತ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ದಾಲ್ ಕಿಚಡಿಯನ್ನು ಉಪಹಾರ ಹಾಗೂ ಊಟದ ರೂಪದಲ್ಲಿ ಸೇವಿಸಬಹುದು. ಕಿಚಡಿಯ ಮೇಲೆ ಹೊರ ಹೊಮ್ಮುವ ತುಪ್ಪಗಳು ಹಾಗೂ ಮಸಾಲೆಯ ಪರಿಮಳ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಬಾಯಲ್ಲಿ ನೀರೂರಿಸುವ ಈ ಪಾಕ ವಿಧಾನವನ್ನು ನೀವು ಮಾಡಬೇಕೆಂದಿದ್ದರೆ ನಾವಿಲ್ಲಿ ತೋರಿಸುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಗಮನಿಸಬಹುದು.

ಹೆಸರು ಬೇಳೆ ಕಿಚಡಿ ವಿಡಿಯೋ ರೆಸಿಪಿ

moong dal khichdi recipe
ಹೆಸರು ಬೇಳೆ ಕಿಚಡಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಹೆಸರು ಬೇಳೆ ಕಿಚಡಿ | ದಾಲ್ ಕಿಚಡಿ ರೆಸಿಪಿ | ಹೆಸರು ಬೇಳೆ ಕಿಚಡಿ ವಿಡಿಯೋ ರೆಸಿಪಿ | ಕಿಚಡಿ ರೆಸಿಪಿ
ಹೆಸರು ಬೇಳೆ ಕಿಚಡಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಹೆಸರು ಬೇಳೆ ಕಿಚಡಿ | ದಾಲ್ ಕಿಚಡಿ ರೆಸಿಪಿ | ಹೆಸರು ಬೇಳೆ ಕಿಚಡಿ ವಿಡಿಯೋ ರೆಸಿಪಿ | ಕಿಚಡಿ ರೆಸಿಪಿ
Prep Time
5 Mins
Cook Time
30M
Total Time
35 Mins

Recipe By: ಮೀನಾ ಭಂಡಾರಿ

Recipe Type: ಮುಖ್ಯ ಖಾದ್ಯ

Serves: 2 ಮಂದಿಗೆ

Ingredients
  • ಬಾಸುಮತಿ ಅಕ್ಕಿ - 1/2 ಕಪ್

    ಒಡೆದ ಹಸಿರು ಹೆಸರುಕಾಳು - 1/2 ಕಪ್

    ಇಂಗು - 1/4 ಟೀಚಮಚ

    ರುಚಿಗೆ ತಕ್ಕಷ್ಟು ಉಪ್ಪು

    ಅರಿಶಿನ ಪುಡಿ - 1 ಟೀಚಮಚ

    ತುಪ್ಪ - 1 ಟೀಚಮಚ

    ಜೀರಿಗೆ - 1 ಟೀಚಮಚ

    ಜೀರಿಗೆ ಪುಡಿ - 1 ಟೀಚಮಚ

    ನೀರು - 5 ಕಪ್ + ತೊಳೆಯಲು

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಹಾಕಿ.

    2. ನಂತರ ಒಡೆದ ಹೆಸರುಕಾಳನ್ನು ಸೇರಿಸಿ.

    3. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ.

    4. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ.

    5. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ಜೀರಿಗೆ ಹುರಿದು ಹೊಂಬಣ್ಣಕ್ಕೆ ಬರುವವರೆಗೆ ಕೈಯಾಡಿಸಿ.

    6. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ.

    7. ಚೆನ್ನಾಗಿ ಕಲುಕಿ.

    8. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ.

    9. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    10. ಉಪ್ಪನ್ನು ಸೇರಿಸಿ, ಬೇಯಲು ಎರಡು ನಿಮಿಷ ಬಿಡಿ.

    11. ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಸುಮಾರು 4-5 ಸೀಟಿ ಕೂಗಬೇಕು.

    12. ಇದು ತಣಿದ ಮೇಲೆ, ಕೆಳಗಿಳಿಸಿ ಚೆನ್ನಾಗಿ ಮಿಶ್ರಗೊಳಿಸಿ.

    13. ನಂತರ ತಟ್ಟೆಯಲ್ಲಿ ಹಾಕಿ ಸವಿಯಲು ನೀಡಿ.

Instructions
  • 1. ಕಿಚಡಿ ತುಂಬಾ ತೆಳು ಹಾಗೂ ಇನ್ನಷ್ಟು ಮುದ್ದೆ ಮುದ್ದೆಯಂತಾಗಿರಬೇಕೆಂದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು.
  • 2. ಸವಿಯಲು ನೀಡುವಾಗ, ಕಿಚಡಿಯ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ನೀಡಿ. ರುಚಿ ಹಾಗೂ ಪರಿಮಳ ಎರಡು ಹೆಚ್ಚುವುದು.
Nutritional Information
  • ಸರ್ವಿಂಗ್ ಸೈಜ್ - 1 ಕಪ್
  • ಕ್ಯಾಲೋರಿ - 180 ಕ್ಯಾಲ್
  • ಫ್ಯಾಟ್ - 5 ಗ್ರಾಂ
  • ಪ್ರೋಟೀನ್ - 6 ಗ್ರಾಂ
  • ಕಾರ್ಬೋಹೈಡ್ರೇಟ್ - 36 ಗ್ರಾಂ.
  • ಸಕ್ಕರೆ - 2 ಗ್ರಾಂ

ಸ್ಟೆಪ್ ಬೈ ಸ್ಟೆಪ್ ಹೆಸರು ಬೇಳೆ ಕಿಚಡಿ

1. ಒಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಹಾಕಿ.

moong dal khichdi recipe

2. ನಂತರ ಒಡೆದ ಹೆಸರುಕಾಳನ್ನು ಸೇರಿಸಿ.

moong dal khichdi recipe

3. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ.

moong dal khichdi recipe

4. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ.

moong dal khichdi recipe

5. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ಜೀರಿಗೆ ಹುರಿದು ಹೊಂಬಣ್ಣಕ್ಕೆ ಬರುವವರೆಗೆ ಕೈಯಾಡಿಸಿ.

moong dal khichdi recipe
moong dal khichdi recipe
moong dal khichdi recipe

6. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ.

moong dal khichdi recipe

7. ಚೆನ್ನಾಗಿ ಕಲುಕಿ.

moong dal khichdi recipe

8. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ.

moong dal khichdi recipe
moong dal khichdi recipe

9. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

moong dal khichdi recipe
moong dal khichdi recipe

10. ಉಪ್ಪನ್ನು ಸೇರಿಸಿ, ಬೇಯಲು ಎರಡು ನಿಮಿಷ ಬಿಡಿ.

moong dal khichdi recipe
moong dal khichdi recipe

11. ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಸುಮಾರು 4-5 ಸೀಟಿ ಕೂಗಬೇಕು.

moong dal khichdi recipe
moong dal khichdi recipe

12. ಇದು ತಣಿದ ಮೇಲೆ, ಕೆಳಗಿಳಿಸಿ ಚೆನ್ನಾಗಿ ಮಿಶ್ರಗೊಳಿಸಿ.

moong dal khichdi recipe
moong dal khichdi recipe

13. ನಂತರ ತಟ್ಟೆಯಲ್ಲಿ ಹಾಕಿ ಸವಿಯಲು ನೀಡಿ.

moong dal khichdi recipe
moong dal khichdi recipe
[ 5 of 5 - 45 Users]
X
Desktop Bottom Promotion