For Quick Alerts
ALLOW NOTIFICATIONS  
For Daily Alerts

ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ

Posted By: Divya Pandith
|

ನವರಾತ್ರಿಯ ಸಡಗರ ಅಕ್ಟೋಬರ್‌ 15ರಿಂದ ಶುರು... ಎಲ್ಲರಿಗೂ ನವರಾತ್ರಿ ವಿಜಯದಶಮಿ ಹಬ್ಬದ ಶುಭಾಶಯಗಳು

ದಪ್ಪದಾದ ಹಾಲು, ಸಕ್ಕರೆ ಪಾಕದ ಮಿಶ್ರಣಗಳಿಂದ ತಯಾರಾಗುವ ಮಿಷ್ತಿ ಡೊಯೈ ಅಥವಾ ಮಿಷ್ತಿ ದಹಿ ಬೆಂಗಾಲಿಯ ವಿಶೇಷ ಸಿಹಿ ತಿನಿಸುಗಳಲ್ಲೊಂದು. ಇದು ಬೆಂಗಾಲಿಯಲ್ಲಿ ಹುಟ್ಟಿರುವ ಸಿಹಿ ಭಕ್ಷ್ಯವಾಗಿದ್ದರೂ ದೇಶದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಹಬ್ಬ, ಉತ್ಸವ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ತಯಾರಿಸಲಾಗುವ ಮಿಶ್ತಿ ಡೊಯೈಯನ್ನು ಎಲ್ಲಾ ವಯಸ್ಸಿನವರೂ ಸಹ ಇಷ್ಟ ಪಟ್ಟು ಸವಿಯುತ್ತಾರೆ.

ಇದನ್ನು ತಯಾರಿಸಲು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆಯಾದರೂ ಮಾಡುವ ವಿಧಾನಗಳು ಬಹಳ ಸುಲಭ ಹಾಗೂ ಸರಳವಾದದ್ದು. ಈ ಸಿಹಿ ಭಕ್ಷ್ಯವು ಸ್ವಲ್ಪ ಹುಳಿ, ಸ್ವಲ್ಪ ಸಿಹಿಯ ರುಚಿಯನ್ನು ನೀಡುವ ಮೂಲಕ ಅನನ್ಯವಾದ ಅನುಭವ ನೀಡುತ್ತದೆ. ನೀವು ಈ ಸಿಹಿ ತಿಂಡಿಯನ್ನು ಮಾಡುವ ಉತ್ಸಾಹದಲ್ಲಿದ್ದರೆ ಇಲ್ಲಿ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ವೀಕ್ಷಿಸಿ.

mishti doi recipe
ಮಿಷ್ತಿ ಡೊಯೈ ರೆಸಿಪಿ| ಸಿಹಿಯಾದ ಮೊಸರು ರೆಸಿಪಿ ಮಾಡುವುದು ಹೇಗೆ| ಸಿಹಿಯಾದ ಮೊಸರು ರೆಸಿಪಿ| ಬೆಂಗಾಳಿ ಮಿಷ್ತಿ ಡೊಯೈ ರೆಸಿಪಿ
ಮಿಷ್ತಿ ಡೊಯೈ ರೆಸಿಪಿ| ಸಿಹಿಯಾದ ಮೊಸರು ರೆಸಿಪಿ ಮಾಡುವುದು ಹೇಗೆ| ಸಿಹಿಯಾದ ಮೊಸರು ರೆಸಿಪಿ| ಬೆಂಗಾಳಿ ಮಿಷ್ತಿ ಡೊಯೈ ರೆಸಿಪಿ
Prep Time
30 Mins
Cook Time
12H
Total Time
12 Hours 5 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 4 ಮಂದಿಗೆ

Ingredients
  • ಹಾಲು - 750 ಮಿ.ಲೀ

    ಸಕ್ಕರೆ - 7,1/2 ಟೇಬಲ್ ಚಮಚ

    ನೀರು - 1/4 ಕಪ್

    ತಾಜಾ ಮೊಸರು - 1/2 ಕಪ್

    ಹೆಚ್ಚಿಕೊಂಡ ಬಾದಾಮಿ - ಅಲಂಕಾರಕ್ಕೆ

    ಅಲ್ಯೂಮಿನಿಯಮ್ ಫಾಯಿಲ್

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

    2. ಹಾಲಿನ ಮೊದಲ ಪ್ರಮಾಣಕ್ಕಿಂತ ಅರ್ಧದಷ್ಟು ಆಗುವವರೆಗೂ ಕುದಿಸಿ.

    3. ಈ ಮಧ್ಯೆ, ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿಮಾಡಿ.

    4. ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಿರಿ.

    5. ಸಕ್ಕರೆಯು ತಳ ಹಿಡಿಯುತ್ತಿದೆ ಎಂದಾಗ ಒಮ್ಮೆ ಉರಿಯನ್ನು ಆರಿಸಿ.

    6. ಸಕ್ಕರೆ ಕರಗಿ, ಕಂದು ಬಣ್ಣಕ್ಕೆ ತಿರುಗುವ ತನಕ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇರಿ.

    7. ಉರಿಯನ್ನು ಆರಿಸಿ, ನೀರನ್ನು ಬೆರೆಸಿ.

    8. ಚೆನ್ನಾಗಿ ಮಿಶ್ರಗೊಳಿಸಿ ಒಂದೆಡೆ ಇಡಿ.

    9. ಹಾಲು ಅರ್ಧ ಪ್ರಮಾಣಕ್ಕೆ ಇಳಿದಾಗ ಸಕ್ಕರೆ ಪಾಕವನ್ನು ಸೇರಿಸಿ.

    10. ಚೆನ್ನಾಗಿ ಕಲುಕಿ, ಉರಿಯನ್ನು ಆರಿಸಿ.

    11. ಉಗುರು ಬೆಚ್ಚಗಾಗುವಷ್ಟು ತಣಿಯಲು ಒಂದೆಡೆ ಇಡಿ.

    12. ತಾಜಾ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    13. ಸವಿಯಲು ನೀಡುವ ಮಟಕಾ/ಬೌಲ್‍ಗೆ ವರ್ಗಾಯಿಸಿ.

    14. ಅಲ್ಯುಮಿನಿಯಂ ಫಾಯಿಲ್‍ನಿಂದ ಮಟಕಾವನ್ನು ಮುಚ್ಚಿರಿ.

    15. ಫ್ರಿಜ್‍ನಲ್ಲಿ 10-12 ಗಂಟೆಗಳ ಕಾಲ ಇಡಿ.

    16. ಫಾಯಿಲ್‍ಅನ್ನು ತೆಗೆದು ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕಾರ ಮಾಡಿ.

Instructions
  • 1. ಹುಳಿಯಿಲ್ಲದ, ತಾಜಾ ಮೊಸರನ್ನು ಬಳಸುತ್ತಿದ್ದೀರಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
  • 2. ಸಕ್ಕರೆ ಪಾಕ ಮಾಡುವಾಗ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮಾಡಬೇಕು. ಇಲ್ಲವಾದರೆ ಪಾಕ ತಳಹಿಡಿದು ಹೊತ್ತಿಹೋಗುವುದು.
  • 3. ಮೊಸರನ್ನು ನುಣುಪಾಗಿಸಿಕೊಳ್ಳಲು ಚೆನ್ನಾಗಿ ಕಲುಕಬೇಕು.
Nutritional Information
  • ಸರ್ವಿಂಗ್ ಸೈಜ್ - 1 ಬೌಲ್
  • ಕ್ಯಾಲೋರಿ - 152 ಕ್ಯಾಲ್
  • ಫ್ಯಾಟ್ - 5 ಗ್ರಾಂ.
  • ಪ್ರೋಟೀನ್ - 4 ಗ್ರಾಂ.
  • ಕಾರ್ಬೋಹೈಡ್ರೇಟ್ - 23 ಗ್ರಾಂ.
  • ಸಕ್ಕರೆ - 19 ಗ್ರಾಂ.

ಹಂತ ಹಂತವಾದ ಚಿತ್ರ ವಿವರಣೆ

1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

mishti doi recipe

2. ಹಾಲಿನ ಮೊದಲ ಪ್ರಮಾಣಕ್ಕಿಂತ ಅರ್ಧದಷ್ಟು ಆಗುವವರೆಗೂ ಕುದಿಸಿ.

mishti doi recipe

3. ಈ ಮಧ್ಯೆ, ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿಮಾಡಿ.

mishti doi recipe

4. ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಿರಿ.

mishti doi recipe

5. ಸಕ್ಕರೆಯು ತಳ ಹಿಡಿಯುತ್ತಿದೆ ಎಂದಾಗ ಒಮ್ಮೆ ಉರಿಯನ್ನು ಆರಿಸಿ.

mishti doi recipe
mishti doi recipe

6. ಸಕ್ಕರೆ ಕರಗಿ, ಕಂದು ಬಣ್ಣಕ್ಕೆ ತಿರುಗುವ ತನಕ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇರಿ.

mishti doi recipe
mishti doi recipe

7. ಉರಿಯನ್ನು ಆರಿಸಿ, ನೀರನ್ನು ಬೆರೆಸಿ.

mishti doi recipe

8. ಚೆನ್ನಾಗಿ ಮಿಶ್ರಗೊಳಿಸಿ ಒಂದೆಡೆ ಇಡಿ.

mishti doi recipe

9. ಹಾಲು ಅರ್ಧ ಪ್ರಮಾಣಕ್ಕೆ ಇಳಿದಾಗ ಸಕ್ಕರೆ ಪಾಕವನ್ನು ಸೇರಿಸಿ.

mishti doi recipe

10. ಚೆನ್ನಾಗಿ ಕಲುಕಿ, ಉರಿಯನ್ನು ಆರಿಸಿ.

mishti doi recipe

11. ಉಗುರು ಬೆಚ್ಚಗಾಗುವಷ್ಟು ತಣಿಯಲು ಒಂದೆಡೆ ಇಡಿ.

mishti doi recipe

12. ತಾಜಾ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

mishti doi recipe
mishti doi recipe

13. ಸವಿಯಲು ನೀಡುವ ಮಟಕಾ/ಬೌಲ್‍ಗೆ ವರ್ಗಾಯಿಸಿ.

mishti doi recipe

14. ಅಲ್ಯುಮಿನಿಯಂ ಫಾಯಿಲ್‍ನಿಂದ ಮಟಕಾವನ್ನು ಮುಚ್ಚಿರಿ.

mishti doi recipe

15. ಫ್ರಿಜ್‍ನಲ್ಲಿ 10-12 ಗಂಟೆಗಳ ಕಾಲ ಇಡಿ.

mishti doi recipe

16. ಫಾಯಿಲ್‍ಅನ್ನು ತೆಗೆದು ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕಾರ ಮಾಡಿ.

mishti doi recipe
[ 5 of 5 - 15 Users]
X
Desktop Bottom Promotion