For Quick Alerts
ALLOW NOTIFICATIONS  
For Daily Alerts

ಸೋರೆಕಾಯಿ ಹಲ್ವಾ ರೆಸಿಪಿ

Posted By:
|

ಸಿಹಿ ಇಷ್ಟ ಪಡುವವರಿಗೆ ಸೋರೆಕಾಯಿ ಹಲ್ವ ಕೂಡ ಒಂದು ಅಗ್ರಸ್ಥಾನದಲ್ಲಿ ನಿಂತಿರುತ್ತದೆ. ಬಾಯಲ್ಲಿ ನೀರು ಸುರಿಯುವಂತೆ ಮಾಡುವ ಪಾಕವಿಧಾನಗಳಲ್ಲಿ ಸೋರೆಕಾಯಿ ಹಲ್ವಾ ಸಹ ಒಂದು. ಈ ರುಚಿಕರವಾದ ಪಾಕವಿಧಾನವನ್ನು ಸೋರೆಕಾಯಿ, ಹಾಲು, ಸಕ್ಕರೆ, ಏಲಕ್ಕಿ ಮತ್ತು ತುಪ್ಪಗಳ ಸಮ್ಮಿಶ್ರಣದಲ್ಲಿ ತಯಾರಿಸಲಾಗುತ್ತದೆ. ಅದ್ಭುತ ರುಚಿ ಹಾಗೂ ಆಹ್ಲಾದಕರವಾದ ಪರಿಮಳದಿಂದ ಕೂಡಿರುವ ಈ ಸಿಹಿ ತಿಂಡಿಯನ್ನು ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ಹಬ್ಬಗಳ ಸಂದರ್ಭದಲ್ಲಿ, ಅತಿಥಿಗಳು ಆಗಮಿಸಿದಾಗ ಅಥವಾ ವ್ರತಾಚರಣೆಯ ಸಮಯದಲ್ಲಿ ಹೆಚ್ಚಾಗಿ ತಯಾರಿಸಬಹುದು. ಸಿಹಿ ತಿನ್ನಬೇಕು ಎಂದು ಬಯಸಿದಾಗ ತಕ್ಷಣದಲ್ಲಿ ತಯಾರಿಸಬಹುದಾದ ಪಾಕವಿಧಾನ. ಇನ್ನೇಕೆ ತಡ? ಇಂದೇ ನೀವು ಮನೆಯಲ್ಲಿ ತಯಾರಿಸಿ, ನಿಮ್ಮವರಿಗೆ ಸವಿಯಲು ನೀಡಿ.

Lauki Ka Halwa Recipe in Kannada
ಸೋರೆಕಾಯಿ ಹಲ್ವಾ ರೆಸಿಪಿ
ಸೋರೆಕಾಯಿ ಹಲ್ವಾ ರೆಸಿಪಿ
Prep Time
5 Mins
Cook Time
15M
Total Time
20 Mins

Recipe By: Shreeraksha

Recipe Type: Vegetarian

Serves: 1

Ingredients
  • ಪ್ರಮುಖ ಸಾಮಗ್ರಿಗಳು:

    1 - ಸೋರೆಕಾಯಿ

    1 ಕಪ್‌ ಹಾಲು

    ಅಗತ್ಯಕ್ಕೆ ತಕ್ಕಷ್ಟು ಕಪ್ಪು ಏಲಕ್ಕಿ

    4 ಚಮಚ ಸಕ್ಕರೆ

    5 ಚಮಚ ತುಪ್ಪ

    ಅಗತ್ಯಕ್ಕೆ ತಕ್ಕಷ್ಟು ಹಾಲಿನ ಪುಡಿ

    1 ಕಪ್‌ ಮಂದ ಹಾಲು

    5 - ಬಾದಾಮಿ

    7 - ಗೋಡಂಬಿ

    8 - ಒಣ ದ್ರಾಕ್ಷಿ

Red Rice Kanda Poha
How to Prepare
  • ತಯಾರಿಸುವ ವಿಧಾನ:

    - ಒಂದು ಸೋರೆಕಾಯನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ತೆಗೆದುಕೊಳ್ಳಿ. ನಂತರ ಸೋರೆ ಕಾಯಿಯ ಬೀಜಗಳನ್ನು ಬೇರ್ಪಡಿಸಿಕೊಂಡು ತುರಿಯಿರಿ. ತುರಿದ ಸೋರೆಕಾಯನ್ನು ಪಕ್ಕಕ್ಕೆ ಇರಿಸಿ.

    - ಒಂದು ಬಾಣಲೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ತುಪ್ಪಕ್ಕೆ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ, ಹುರಿಯಿರಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ

    - ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪವನ್ನು ಸೇರಿಸಿ, ತುರಿದ ಸೋರೆಕಾಯನ್ನು ಹಾಕಿ. ಸೋರೆಕಾಯಿ ಮೃದುವಾಗಿ ಬೇಯುವಂತೆ ಹುರಿಯಿರಿ. ಬೆಂದ ಸೋರೆಕಾಯಿಗೆ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ. ಹಾಲಿನ ಪ್ರಮಾಣ 1/4ಕ್ಕೆ ಇಳಿಯುವ ತನಕ ಬೇಯಿಸಬೇಕು- ಬಳಿಕ ಸಕ್ಕರೆಯನ್ನು ಸೇರಿಸಿ, 2-3 ನಿಮಿಷಗಳ ಕಾಲ ಬೇಯಿಸಿ

    - ಪ್ರತ್ಯೇಕ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಅದಕ್ಕೆ ಹಾಲನ್ನು ಹಾಕಿ. ಹಾಲು ಮತ್ತು ತುಪ್ಪದ ಮಿಶ್ರಣ ಕುದಿಯಲು ಪ್ರಾರಂಭಿಸಿದ ಬಳಿಕ ಅದಕ್ಕೆ ಹಾಲಿನ ಪುಡಿಯನ್ನು ಸೇರಿಸಿ. ಹಾಲು ದಪ್ಪವಾದ ಸ್ಥಿರತೆ ಪಡೆಯಬೇಕು. ಆಗ ತಾಜಾ ಖೋಯಾ ಸಿದ್ಧವಾಗುತ್ತದೆ

    - ಈಗ ಸೋರೆಕಾಯಿ ಬಾಣಲೆಗೆ ಖೋಯಾ ಅನ್ನು ಸೇರಿಸಿ, ಮಿಶ್ರಗೊಳಿಸಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಬೇಯುವಂತೆ ಮಿಶ್ರಗೊಳಿಸಿ. ಹುರಿದುಕೊಂಡ ಒಣ ಹಣ್ಣುಗಳನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವು ಬಾಣಲೆಯ ಸುತ್ತ ತಳ ಬಿಡುವ ಹಾಗೆ ಬೇಯಿಸಬೇಕು. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ. ಬಳಿಕ ಉರಿಯನ್ನು ಆರಿಸಿ, ಬೇರೆ ಪಾತ್ರೆಗೆ ವರ್ಗಾಯಿಸಿ.

    - ನಿಮ್ಮ ಆಯ್ಕೆಗೆ ಅನುಗುಣವಾಗಿ ಬಿಸಿ ಇರುವಾಗ ಅಥವಾ ತಣ್ಣಗಾಗಿಸಿಕೊಂಡು ಸವಿಯಬಹುದು.

Instructions
  • ಸಿಹಿ ಇಷ್ಟ ಪಡುವವರಿಗೆ ಸೋರೆಕಾಯಿ ಹಲ್ವ ಕೂಡ ಒಂದು ಅಗ್ರಸ್ಥಾನದಲ್ಲಿ ನಿಂತಿರುತ್ತದೆ. ಬಾಯಲ್ಲಿ ನೀರು ಸುರಿಯುವಂತೆ ಮಾಡುವ ಪಾಕವಿಧಾನಗಳಲ್ಲಿ ಸೋರೆಕಾಯಿ ಹಲ್ವಾ ಸಹ ಒಂದು.
Nutritional Information
  • People - 1
  • ಎನರ್ಜಿ - ೩೧೭ಕ್ಯಾ
  • ಕೊಬ್ಬು - ೧೪.೯ಗ್ರಾ
  • ಪ್ರೋಟೀನ್ - ೪ಗ್ರಾ
  • ಕಾರ್ಬೋಹೈಡ್ರೇಟ್ - ೪೦.೯ಗ್ರಾ
  • ಫೈಬರ್ - ೧ಗ್ರಾ
[ 5 of 5 - 56 Users]
X
Desktop Bottom Promotion