For Quick Alerts
ALLOW NOTIFICATIONS  
For Daily Alerts

ಕಿಚನ್ ಟಿಪ್ಸ್: ಫೋರ್ಕ್ ಮತ್ತು ನೈಫ್‌ ಸರಿಯಾಗಿ ಬಳಸುವುದು ಹೇಗೆ?

Posted By:
|

ದೊಡ್ಡ ಹೋಟೆಲ್‌ಗೆ ಹೋಗುತ್ತೇವೆ, ಅಲ್ಲಿ ಟೇಬಲ್‌ ಮೇಲೆ ಫೋರ್ಕ್ ಮತ್ತು ನೈಫ್‌ ಕೂಡ ಇಟ್ಟಿರುತ್ತಾರೆ, ಆಹಾರವನ್ನು ಸರ್ವ್ ಮಾಡಲಾಗುವುದು, ನೋಡಿದರೆ ಸುತ್ತಲಿನ ಟೇಬಲ್‌ನಲ್ಲಿ ಎಲ್ಲರೂ ಫೋರ್ಕ್‌ ಮತ್ತು ನೈಫ್‌ ಬಳಸಿ ತಿನ್ನುತ್ತಿರುತ್ತಾರೆ, ಆದರೆ ನಮಗೆ ಅವುಗಳಲ್ಲಿ ತಿಂದು ಅಭ್ಯಾಸವಿರಲ್ಲ, ಆದರೆ ಕೈಯಲ್ಲಿ ತಿಂದ್ರೆ ನಮ್ಮ ಫ್ರೆಂಡ್ಸ್, ನಮ್ಮ ಪಕ್ಕದ ಟೇಬಲ್‌ನಲ್ಲಿ ಏನು ಅಂದ್ಕೊಳ್ಳುತ್ತಾರೋ ಎಂಬ ಹಿಂಜರಿಕೆ...

Kitchen Tips

ಭಾರತದಲ್ಲಿ ಆದರೆ ಅವರು ಏನಾದರೂ ಅಂದ್ಕೊಳ್ಳಲಿ, ನನಗೇನು ಅಂತ ಕೈಯಿಂದ ತಿನ್ನಬಹುದು, ಆದರೆ ಕೆಲವೊಂದು ದೇಶಗಳಿಗೆ ಹೋದರೆ ಕೈಯಲ್ಲಿ ತಿನ್ನುವಂತೆಯೇ ಇಲ್ಲ, ವಿದೇಶ ಟ್ರಿಪ್‌ಗಳಿಗೆ ಹೋಗುವಾಗ ಈ ಫೋರ್ಕ್, ನೈಫ್‌ ಬಳಸುವ ಟ್ರಿಕ್ಸ್ ಗೊತ್ತಿರಬೇಕು.

ಬ್ರಿಟಿಷ್, ಅಮೆರಿಕಾ ಶಾಲೆಗಳಲ್ಲಿ ಟೇಬಲ್‌ ಮ್ಯಾನರ್ಸ್ ಕುರಿತು ಪಾಠವಿರುತ್ತದೆ. ಭಾರತದಲ್ಲಿ ನಾವು ಬ್ರಿಟಿಷರು ತಿನ್ನುತ್ತಿದ್ದ ಶೈಲಿಯನ್ನು ಈಗಲೂ ಪಾಲಿಸುತ್ತಿದ್ದೇವೆ, ಹಾಗಾಗಿ ದೊಡ್ಡ ಸ್ಟಾರ್ ಹೋಟೆಲ್‌ಗಳಿಗೆ ಹೋದರೆ ಫೋರ್ಕ್‌, ನೈಫ್‌ ಕಾಣಬಹುದು.

ನೂಡಲ್ಸ್‌ನಂಥ ಆಹಾರವನ್ನು ತಿನ್ನಬೇಕಾದರೆ ಫೋರ್ಕ್‌ ಬೇಕು, ಇನ್ನು ಗ್ರಿಲ್ಡ್ ಮುಂತಾದ ಆಹಾರಗಳನ್ನು ನೈಫ್‌ ಬಳಸಿ ಕತ್ತರಿಸಿ ತಿನ್ನಬೇಕಾಗುತ್ತದೆ. ಸೆಲೆಬ್ರಿಟಿ ಪಂಕಜ್ ಭದೋರಿಯಾ ನೈಫ್‌ ಹಾಗೂ ಫೋರ್ಕ್‌ ಅನ್ನು ಸರಿಯಾಗಿ ಬಳಸುವುದರ ಬಗ್ಗೆ ಕೆಲವೊಂದು ಟಿಪ್ಸ್ ನೀಡಿದ್ದಾರೆ ನೋಡಿ:

ಫೋರ್ಕ್ ಮತ್ತು ನೈಫ್‌ ಬಳಸಲು 6 ಟಿಪ್ಸ್
1. ಫೋರ್ಕ್‌ ಅನ್ನು ಎಡಗೈಯಲ್ಲಿ, ನೈಫ್‌ ಅನ್ನು ಬಲಗೈಯಲ್ಲಿ ಹೊಡಿಯಬೇಕು.
2. ನಾವು ಫೋರ್ಕ್‌ ಅನ್ನು ಹಿಡಿದಾಗ ಅದರ ಕೊನೆ ಎಡಗೈಗೆ ತಾಗುವಂತೆ ಇರಬೇಕು, ಅದೇ ರೀತಿ ನೈಫ್‌ನ ಹಿಡಿ ನಿಮ್ಮ ಬಲಗೈಗೆ ತಾಗುವಂತಿರಬೇಕು.
3. ಈಗ ನಾವು ಕಟ್‌ ಮಾಡುವ ಆಹಾರದ ಫೋರ್ಕ್‌ ಒತ್ತಿ ಹಿಡಿದು ಮೆಲ್ಲನೆ ನೈಫ್‌ನಿಂದ ಕತ್ತರಿಸಿ, ತುಂಬಾ ಪ್ರೆಷರ್ ಹಾಕಬೇಡಿ.
4. ನಿಮಗೆ ತಿನ್ನಲು ಸಾಧ್ಯವಾದಷ್ಟು ದೊಡ್ಡದಾದ ಪೀಸ್‌ಗಳನ್ನು ಮಾಡಿ.
5. ತಿನ್ನುವಾಗ ನೈಫ್‌ ಅನ್ನು ಕೆಳಗಿಡಲು ಬಯಸುವುದಾದರೆ ಅದನ್ನು ಪ್ಲೇಟ್‌ನ ಮೇಲ್ಭಾಗದಲ್ಲಿ ಇಡಬೇಕು. ಆಗ ಬಲಗೈಗೆ ಫೋರ್ಕ್ ವರ್ಗಾಯಿಸಿ.
6. ತಿಂದಾದ ಬಳಿಕ ಪೋರ್ಕ್‌ನ್ನು ಪ್ಲೇಟ್‌ನ ಮಧ್ಯದಲ್ಲಿ ಅದರ ತುದಿ ನಮ್ಮ ಕಡೆ ಇರುವಂತೆ ಇಡಬೇಕು. ಇದು ನಾವು ತಿಂದಾಯಿತು ಎಂಬುವುದನ್ನು ಸೂಚಿಸುತ್ತದೆ. ಆಗ ಸರ್ವರ್‌ ಬಂದು ಪ್ಲೇಟ್‌ ಸ್ವಚ್ಛ ಮಾಡುತ್ತಾರೆ.

[ of 5 - Users]
Story first published: Friday, January 21, 2022, 19:06 [IST]
X
Desktop Bottom Promotion