For Quick Alerts
ALLOW NOTIFICATIONS  
For Daily Alerts

ಕೆಂಗಾರ್ ಎಲೆಯಲ್ಲಿ ಹಲಸಿನ ಕಡುಬು

Posted By:
|

ಪ್ರಕೃತಿಯಲ್ಲಿ ಅನೇಕ ರೀತಿಯ ಪರಿಮಳಯುಕ್ತ ಎಲೆಗಳಿವೆ. ಹಿಂದೆಲ್ಲಾ ಆ ಎಲೆಗಳೇ ಅದೆಷ್ಟೋ ಅಡುಗೆಗೆ ನೆರವು ನೀಡುತ್ತಿದ್ದವು. ಪ್ಲೇಟ್ ಗಳಿಲ್ಲದ ಕಾಲದಲ್ಲಿ ದೊಡ್ಡದೊಡ್ಡ ಎಲೆಗಳೆ ಆಹಾರ ಸರಬರಾಜಿಗೆ ಉಪಯೋಗಿಸಲಾಗುತ್ತಿತ್ತು.

ಉದಾಹರಣೆಗೆ ಬಾಳೆ ಎಲೆಯನ್ನೆ ತೆಗೆದುಕೊಳ್ಳಿ, ಅದೆಷ್ಟೋ ಸಿಹಿತಿಂಡಿಗಳನ್ನು ಇದರಲ್ಲಿ ಮಾಡಲಾಗುತ್ತದೆ. ಊಟ ಬಡಿಸಲು ಇಂದಿಗೂ ಬಾಳೆಎಲೆಗೆ ಪ್ರಮುಖ ಸ್ಥಾನ.

Jackfruit Kadubu Recipe

ಎಲೆಯನ್ನು ಪ್ಯಾಕೆಟ್ ನಂತೆ ಮಾಡಿ ಅಪ್ಪಚ್ಚಿ ತಯಾರಿಸುವುದು ಅಡುಗೆಯಲ್ಲಿರುವ ಒಂದು ಪರಿಪಾಠ. ಅದಕ್ಕಾಗಿ ಬಾಳೆಎಲೆ, ಅರಿಶಿನದ ಎಲೆ ಇತ್ಯಾದಿ ಅನೇಕ ಎಲೆಗಳನ್ನು ಬಳಸಲಾಗುತ್ತದೆ. ಅದ್ರಲ್ಲೂ ಅರಿಶಿನದೆಲೆಯ ಕಡುಬು ಎಲ್ಲರಿಗೂ ಪರಿಚಿತ. ಹೀಗೆ ಅರಿಶಿ‌ನದ ಎಲೆಯಂತೆಯೇ ವಿಭಿನ್ನ ಪರಿಮಳ ಹೊಂದಿರುವ ಮತ್ತೊಂದು ಎಲೆ ಕೆಂಗಾರ್ ಎಲೆ.

Jackfruit Kadubu Recipe

ಪರಾವಲಂಬಿ ಸಸ್ಯವಾಗಿರುವ ಇದು ಬೇರೆ ಮರಕ್ಕೆ ಅಪ್ಪಿಕೊಂಡಂತೆ ಹಬ್ಬುತ್ತದೆ. ವಿಶೇಷ ಪರಿಮಳದ ಈ ಎಲೆಯನ್ನು ಕಡುಬು ತಯಾರಿಸುವುದಕ್ಕೆ ಬಳಸಲಾಗುತ್ತದೆ. ಇದೀಗ ಹಲಸಿನ ಸೀಸನ್. ಹಲಸಿನ ಕಡುಬನ್ನು ಕೆಂಗಾರ್ ಎಲೆಯಲ್ಲಿ ತಯಾರಿಸುವುದು ಕರಾವಳಿ ಪ್ರದೇಶದಲ್ಲಿ ಭಾರೀ ಫೇಮಸ್..
Jackfruit Kadubu Recipe
ಕಡುಬು ಎಂದ ಕೂಡ್ಲೇ ಎಲ್ಲರ ಬಾಯಲ್ಲೂ ನೀರು ಬರೋದು ಸಹಜ. ಇಡ್ಲಿ ತಟ್ಟೆ ಮಾರುಕಟ್ಟೆ ಪ್ರವೇಶಿಸಿದ ಮೇಲೆ ಕಡುಬಪ್ಪಚ್ಚಿ ತಯಾರಿಸುವವರು ಬಹಳ ವಿರಳವಾಗಿದ್ದಾರೆ. ಹಾಗಾಗಿ ಕೆಲವು ಹಳೆಯ ತಿಂಡಿಗಳು ತೆರೆಮರೆಗೆ ಸರಿಯುತ್ತಿದೆ. ಆದರೆ ಅಂತಹ ತಿಂಡಿಗಳನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಬೋಲ್ಡ್ ಸ್ಕೈ ಮಾಡುತ್ತಿದೆ. ಅದಕ್ಕಾಗಿಯೇ ಇಲ್ಲಿದೆ ನೋಡಿ ಕೆಂಗಾರ್ ಎಲೆಯ ಹಲಸಿನ ಕಡುಬು ರೆಸಿಪಿ..
Jackfruit Kadubu Recipe
Jackfruit Kadubu Recipe/ ಹಲಸಿನ ಕಡುಬು
Jackfruit Kadubu Recipe/ ಹಲಸಿನ ಕಡುಬು
Prep Time
1 Hours0 Mins
Cook Time
45M
Total Time
1 Hours45 Mins

Recipe By: Sushma

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಹಲಸಿನ ಹಣ್ಣು - ಮೂರು ಬೌಲ್

    ಅಕ್ಕಿ - ಒಂದು ಬೌಲ್

    ತೆಂಗಿನತುರಿ- ಒಂದು ಬೌಲ್

    ಬೆಲ್ಲ - ಒಂದು ಬೌಲ್

    ಉಪ್ಪು - ರುಚಿಗೆ ತಕ್ಕಷ್ಟು

Red Rice Kanda Poha
How to Prepare
  • ಮಾಡುವ ವಿಧಾನ -

    ಅಕ್ಕಿಯನ್ನು ಎರಡರಿಂದ ಮೂರು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

    ಮಿಕ್ಸಿಯಲ್ಲಿ ಹಲಸಿನ ಹಣ್ಣುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

    ನಂತರ ಅದಕ್ಕೆ ತೆಂಗಿನತುರಿ, ಬೆಲ್ಲ ಸೇರಿಸಿ ರುಬ್ಬಿ.

    ನಂತರ ಅಕ್ಕಿಯನ್ನು ಸೇರಿಸಿ ತರಿತರಿ ಕಡಿಕಡಿಯಾಗುವಂತೆ ರುಬ್ಬಿ.

    ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿ.

    ಮಿಶ್ರಣವನ್ನು ಎರಡು ನಿಮಿಷ ಹಾಗೆಯೇ ಬಿಡಿ.

    ಮಿಶ್ರಣವು ಇಡ್ಲಿ ಹಿಟ್ಟಿನಂತೆ ಗಟ್ಟಿಯಾಗಿರಬೇಕು.

    ನಂತರ ಕಡುಬಿನ ಅಟ್ಟದಲ್ಲಿ ನೀರು ಹಾಕಿ. ನೀರು ಕುದಿಬರುವ ಹೊತ್ತಿಗೆ ನೀವು ತಯಾರು ಮಾಡಿಟ್ಟುಕೊಂಡ ಮಿಶ್ರಣವನ್ನು ಕೆಂಗಾರು ಎಲೆಗೆ ಹಚ್ಚಿ ಎಲೆಯನ್ನು ಮಡಚಿ ಅಟ್ಟದಲ್ಲಿ ಇಡಿ.

    ಸುಮಾರು 45 ನಿಮಿಷ ಬೇಯಲು ಬಿಡಿ.

    ಕೆಂಗಾರ್ ಎಲೆಯ ಘಮವು ಕಡುಬಿಗೆ ಅಂಟಿ ವಿಶೇಷ ಸ್ವಾದ ಒದಗಿಸುತ್ತದೆ.

    ಬಡಿಸುವಾಗ ಎಲೆಯನ್ನು ಬಿಡಿಸಿ ಕಡುಬು ತೆಗೆದು ಬಡಿಸಿದರೆ ಕೆಂಗಾರು ಎಲೆಯ ಹಲಸಿನ ಕಡುಬು ತಿನ್ನಲು ಮಜಬೂತಾಗಿರುತ್ತದೆ.

Instructions
  • ಕೆಂಗಾರು ಎಲೆ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದು ಕಡಿಮೆ. ಈ ರೆಸಿಪಿಗಾಗಿ ನಿಮಗೆ ಕೆಂಗಾರು ಎಲೆ ಸಿಗದೆ ಇದ್ದಲ್ಲಿ ಬಾಳೆಎಲೆ, ಅರಿಶಿನದ ಎಲೆಯಲ್ಲೂ ಟ್ರೈ ಮಾಡಬಹುದು. ಹಲಸಿನಲ್ಲಿರುವ ಅನೇಕ ಪೋಷಕಾಂಶಗಳು ನಿಮ್ಮ ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲದು. ಹಸಿದು ಹಲಸು, ಉಂಡ್ ಮಾವು ಅನ್ನೋ ಮಾತೇ ಇದೆ. ನೆರಿಗೆಗಳನ್ನು ತಡೆಯುವುದಕ್ಕೆ ಇದು ಸಹಕಾರಿ.ಕೂದಲಿನ ಆರೋಗ್ಯ, ಕಣ್ಣಿನ ಆರೋಗ್ಯ ಹೆಚ್ಚಿಸಲು ಉಪಯೋಗಕಾರಿ.
Nutritional Information
  • ಕ್ಯಾಲೊರಿಗಳು - 157
  • ವಿಟಮಿನ್ ಸಿ - 22.6 mg
  • ಡಯಟರಿ ಫೈಬರ್ - 2.5 g
  • ಪ್ರೋಟೀನ್ - 2.84 g
  • ಸಕ್ಕರೆ - 31.48
  • ಕಾರ್ಬೋಹೈಡ್ರೇಟ್ - 38.36 g
[ 4.5 of 5 - 73 Users]
X
Desktop Bottom Promotion