For Daily Alerts
Just In
Don't Miss
- News Namma Metro: ಈ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲೂ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ-ಎಲ್ಲೆಲ್ಲಿ? ಮಾಹಿತಿ ತಿಳಿಯಿರಿ
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Movies ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆಗಾಲದ ಹಣ್ಣು: ಹಲಸಿನ ಹಣ್ಣಿನ ಹಲ್ವ ರೆಸಿಪಿ
Recipes
oi-Shreeraksha
Posted By: Shreeraksha
|
ಕರಾವಳಿಯ ಆಟಿ ತಿಂಗಳ ಅಥವಾ ಆಷಾಢ ತಿಂಗಳ ಸಂಪ್ರದಾಯ ಖಾದ್ಯ, ಆಚರಣೆಯ ಎಲ್ಲವೂ ವಿಶೇಷ. ಈ ಸಮಯದ ಆಚರಣೆಯ ಜೊತೆಗೆ ಖಾದ್ಯಗಳಿಗೂ ಮಹತ್ವವಿದೆ. ಅಂತಹುದರಲ್ಲಿ ಒಂದು ಹಲಸಿನ ಹಣ್ಣಿನ ಹಲ್ವ. ಹಲಸಿನ ಕಾಲವಾಗಿರುವುದರಿಂದ ಈ ಹಲ್ವವನ್ನು ಸುಲಭವಾಗಿ ಪ್ರಯತ್ನಿಸಬಹುದು. ಹಲ್ವಾ ಪ್ರಿಯರಿಗೆ ಹಲಸಿನ ಹಣ್ಣಿನ ಹಲ್ವಾವು ಇಷ್ಟವಾಗದಿರಲು ಸಾಧ್ಯವಿಲ್ಲ. ಹಲಸಿನ ಹಣ್ಣಿನ ಹಲ್ವ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ ಬಹು ರುಚಿ.
ಮಳೆಗಾಲದ ಹಣ್ಣು: ಹಲಸಿನ ಹಣ್ಣಿನ ಹಲ್ವ
ರೆಸಿಪಿ
ಮಳೆಗಾಲದ ಹಣ್ಣು: ಹಲಸಿನ
ಹಣ್ಣಿನ ಹಲ್ವ ರೆಸಿಪಿ
Prep Time
5 Mins
Cook Time
30M
Total Time
35 Mins
Recipe By: Shreeraksha
Recipe Type: Vegetarian
Serves: 3
Ingredients
-
ಬೇಕಾಗುವ ಪದಾರ್ಥಗಳು:
ಹಲಸಿನ ಹಣ್ಣು- 4ಕಪ್, ಬೀಜ ತೆಗೆದು ಕತ್ತರಿಸಿದ್ದು
ಬೆಲ್ಲ- 2 ಕಪ್
ತುಪ್ಪ- ಅರ್ಧ ಕಪ್
ಬೇಕಿದ್ದಲ್ಲಿ ಏಲಕ್ಕಿ ಹಾಗೂ ಗೋಡಂಬಿ ಪುಡಿ
How to Prepare
-
ತಯಾರಿಸುವ ವಿಧಾನ:
- ಮೊದಲು ಬೀಜ ತೆಗೆದ ಹಲಸಿನ ಹಣ್ಣನ್ನು ನೀರು ಸೇರಿಸದೆ ರುಬ್ಬಿಕೊಳ್ಳಬೇಕು.
- ರುಬ್ಬಿಕೊಂಡ ಮಿಶ್ರಣವನ್ನು ಬಿಸಿ ಬಾಣಲೆಗೆ ಹಾಕಬೇಕು. ಹಣ್ಣಿನ ಪ್ರಮಾಣಕ್ಕೆ ಸರಿದೂಗುವಂತೆ ಬೆಲ್ಲವನ್ನು ಹಾಕಬೇಕು.
- ಈ ಮಿಶ್ರಣವನ್ನು ಕುದಿಸುತ್ತಾ, ಕೈಯಾಡಿಸುತ್ತಿರಬೇಕು. ಇದು ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ಸಮಯವೂ ತೆಗೆದುಕೊಳ್ಳಬಹುದು.
- ಬಣ್ಣ ಬದಲಾಗುತ್ತಾ ಬರುತ್ತದೆ. ಮೊದಲು ಕಂದು ಬಣ್ಣ, ನಂತರ ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಿ, ತುಪ್ಪ ಒಮ್ಮೆಲೆ ಹಾಕಬೇಡಿ, ಸ್ವಲ್ಪ ಸ್ವಲ್ಪ ಹಾಕುತ್ತಾ ಕೈಯಾಡಿಸಿ.
- ಬೇಕಿದ್ದಲ್ಲಿ ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ.
- ಹಲ್ವ ಪಾತ್ರೆಯ ಬದಿಗಳನ್ನು ಬಿಡಲು ಪ್ರಾರಂಭಿಸಿದಾಗ ಅದನ್ನು ತೆಗೆದು, ಅದನ್ನು ತುಪ್ಪ ಹಚ್ಚಿದ ಬಟ್ಟಲು ಅಥವಾ ಗ್ರೀಸ್ ಪ್ಯಾನ್ ಗೆ ವರ್ಗಾಯಿಸಿ, ತಣಿಯಲು ಬಿಡಿ.
- ಸುಮಾರು ಒಂದು ಗಂಟೆಗಳ ನಂತರ, ಹಲಸಿನ ಹಣ್ಣಿನ ಹಲ್ವ ಸವಿಯಲು ಸಿದ್ಧ.
Instructions
Nutritional Information
- People - 3
- ಪ್ರೋಟೀನ್ - 2.42ಗ್ರಾ
- ಕಾರ್ಬೋಹೈಡ್ರೇಟ್ - 82.4ಗ್ರಾ
- ಫೈಬರ್ - 2.26ಗ್ರಾ
Comments
[ 3.5 of 5 - 94 Users]
GET THE BEST BOLDSKY STORIES!
Allow Notifications
You have already subscribed
Story first published: Wednesday, July 28, 2021, 15:15 [IST]
Other articles published on Jul 28, 2021