For Quick Alerts
ALLOW NOTIFICATIONS  
For Daily Alerts

ಹುಣಸೆ ಹಣ್ಣಿನ ಗೊಜ್ಜು ರೆಸಿಪಿ

Posted By: divya Pamdith
|

ಹುಣಸೆ ಗೊಜ್ಜು ಕರ್ನಾಟಕ ಶೈಲಿಯ ವಿಶೇಷವಾದ ಪಾಕವಿಧಾನವಾಗಿದೆ. ಹುಣಸೆ ಹಣ್ಣಿನ ರಸ, ಬೆಲ್ಲ ಮತ್ತು ಖಾರದಿಂದ ಮಿಶ್ರಿತ ಗೊಳ್ಳುವ ಹುಣಸೆ ಗೊಜ್ಜು ಸವಿಯಲು ಹೆಚ್ಚು ಖುಷಿಯನ್ನು ನೀಡುತ್ತದೆ. ರುಚಿಕರವಾದ ಮೇಲೊಗರ ಅಥವಾ ವಿಶೇಷ ಭಕ್ಷ್ಯ ಎಂದು ಕರೆಯಲ್ಪಡುವ ಈ ಗೊಜ್ಜನ್ನು ಪೊಂಗಲ್ ಹಾಗೂ ಬಿಸಿ ಅನ್ನದೊಂದಿಗೆ ಸವಿಯಬಹುದು.

ಈ ಪಾಕವಿಧಾನದಲ್ಲಿ ಸೂಕ್ತ ಪ್ರಮಾಣದ ಖಾರ, ಹುಳಿ, ಸಿಹಿ ಸಂಯೋಜಿಸಲಾಗಿರುವುದರಿಂದ ನಾಲಿಗೆಗೆ ಹೆಚ್ಚು ಆಹ್ಲಾದವನ್ನು ನೀಡುತ್ತದೆ. ಅಲ್ಲದೆ ಮತ್ತೆ ಮತ್ತೆ ಬೇಕೆನಿಸುವಂತೆ ಮಾಡುತ್ತದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲೂ ಈ ಪಾಕವಿಧಾನವನ್ನು ಅನುಸರಿಸಬಹುದು. ನಿಮಗೂ ಈ ರುಚಿಕರವಾದ ಭಕ್ಷ್ಯವನ್ನು ಮಾಡಬೇಕೆನ್ನುವ ಮನಸ್ಸಾದರೆ, ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಪಾಕವಿಧಾನದ ಮೊರೆ ಹೋಗಿ.

hunase gojju recipe
ಹುಣಸೆ ಗೊಜ್ಜು ರೆಸಿಪಿ| ಕರ್ನಾಟಕ ಶೈಲಿಯ ಹುಣಸೆ ಕರಿ| ಹುಣಸೆ ಗೊಜ್ಜು ರೆಸಿಪಿ| ಸಿಹಿ ಮತ್ತು ಹುಳಿ ಮಿಶ್ರಿತ ಕರಿ ರೆಸಿಪಿ
ಹುಣಸೆ ಗೊಜ್ಜು ರೆಸಿಪಿ| ಕರ್ನಾಟಕ ಶೈಲಿಯ ಹುಣಸೆ ಕರಿ| ಹುಣಸೆ ಗೊಜ್ಜು ರೆಸಿಪಿ| ಸಿಹಿ ಮತ್ತು ಹುಳಿ ಮಿಶ್ರಿತ ಕರಿ ರೆಸಿಪಿ
Prep Time
20 Mins
Cook Time
50M
Total Time
50 Mins

Recipe By: ಸುಮಾ ಜಯಂತ್

Recipe Type: ವಿಶೇಷ ಭಕ್ಷ್ಯ

Serves: 4 ಮಂದಿಗೆ

Ingredients
  • ಹುಣಸೆ ಹಣ್ಣು- ಒಂದು ನಿಂಬೆ ಹಣ್ಣಿನ ಗಾತ್ರದ್ದು.

    ನೀರು- 1,1/2 ಕಪ್

    ಎಣ್ಣೆ -1, 1/2 ಟೀ ಚಮಚ

    ಸಾಸಿವೆ -1 ಟೀ ಚಮಚ

    ಜೀರಿಗೆ -1 ಟೀ ಚಮಚ

    ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ- 1/4 ಕಪ್.

    ಕರಿ ಬೇವಿನ ಎಲೆ - 10-15

    ಇಂಗು -1/4 ಟೀ ಚಮಚ

    ಬೆಲ್ಲ -1/2 ಕಪ್

    ರುಚಿಗೆ ತಕ್ಕಷ್ಟು ಉಪ್ಪು

    ತೆಂಗಿನ ತುರಿ- 1/4 ಕಪ್

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು -1,1/2 ಟೇಬಲ್ ಚಮಚ

Red Rice Kanda Poha
How to Prepare
  • 1. ಹುಣಸೆ ಹಣ್ಣನ್ನು ಒಂದು ಬೌಲ್‍ಗೆ ಹಾಕಿ.

    2. ಅರ್ಧ ಕಪ್ ನೀರನ್ನು ಸೇರಿಸಿ.

    3. ಅದರ ರಸ ತೆಗೆಯಲು ಚೆನ್ನಾಗಿ ಕಿವುಚಿ.

    4. 15 ನಿಮಿಷಗಳ ಕಾಲ ನೆನೆಯಲು ಬಿಡಿ.

    5. ಒಂದು ಕಪ್‍ನಲ್ಲಿ ರಸವನ್ನು ಹಿಂಡಿ ತೆಗೆಯಿರಿ.

    6. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

    7. ಸಾಸಿವೆಯನ್ನು ಹಾಕಿ, ಸಿಡಿಯುವ ತನಕ ಹುರಿಯಿರಿ.

    8. ಜೀರಿಗೆಯನ್ನು ಸೇರಿಸಿ ಹುರಿಯಿರಿ.

    9. ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.

    10. ಇಂಗು ಮತ್ತು ಹುಣಸೆ ರಸವನ್ನು ಸೇರಿಸಿ.

    11. ಒಂದು ಕಪ್ ನೀರನ್ನು ಸೇರಿ, ಚೆನ್ನಾಗಿ ತಿರುವಿ.

    12. ಸಾಮಾನ್ಯ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಲು ಬಿಡಿ.

    13. ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    14. ನಂತರ ತೆಂಗಿನ ತುರಿ ಮತ್ತು ಉಪ್ಪನ್ನು ಬೆರೆಸಿ.

    15. ಚೆನ್ನಾಗಿ ತಿರುವಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಲು ಬಿಡಿ.

    16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.

    17. ಒಂದು ಬೌಲ್‍ಗೆ ವರ್ಗಾಯಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
  • 1. ಹುಣಸೆ ಹಣ್ಣನ್ನು ಬಳಸುವ ಬದಲು ಮಾರುಕಟ್ಟೆಯಲ್ಲಿ ಸಿಗುವ ಹುಣಸೆ ಪೇಸ್ಟ್‍ಅನ್ನು ಸಹ ಬಳಸಬಹುದು.
  • 2. ನೀವು ಬಿಸಿ ನೀರನ್ನು ಬಳಸಿ ಹುಣಸೆ ಹಣ್ಣನ್ನು ಕಿವುಚಿ ಕೊಂಡರೆ, ನೆನೆಸಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.
Nutritional Information
  • ಸರ್ವಿಂಗ್ ಸೈಜ್ - 2 ಟೇಬಲ್ ಚಮಚ
  • ಕ್ಯಾಲೋರಿ - 120 ಕ್ಯಾಲ್
  • ಫ್ಯಾಟ್ - 1.6 ಗ್ರಾಂ.
  • ಪ್ರೋಟೀನ್ - 5.1 ಗ್ರಾಂ.
  • ಕಾರ್ಬೋಹೈಡ್ರೇಟ್ - 31 ಗ್ರಾಂ.
  • ಸಕ್ಕರೆ - 19 ಗ್ರಾಂ.
  • ಫೈಬರ್ - 1 ಗ್ರಾಂ.

ಸ್ಟೆಪ್ ಬೈ ಸ್ಟೆಪ್ ಟಿಪ್ಸ್

1. ಹುಣಸೆ ಹಣ್ಣನ್ನು ಒಂದು ಬೌಲ್‍ಗೆ ಹಾಕಿ.

hunase gojju recipe

2. ಅರ್ಧ ಕಪ್ ನೀರನ್ನು ಸೇರಿಸಿ.

hunase gojju recipe

3. ಅದರ ರಸ ತೆಗೆಯಲು ಚೆನ್ನಾಗಿ ಕಿವುಚಿ.

hunase gojju recipe

4. 15 ನಿಮಿಷಗಳ ಕಾಲ ನೆನೆಯಲು ಬಿಡಿ.

hunase gojju recipe

5. ಒಂದು ಕಪ್‍ನಲ್ಲಿ ರಸವನ್ನು ಹಿಂಡಿ ತೆಗೆಯಿರಿ.

hunase gojju recipe

6. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

hunase gojju recipe

7. ಸಾಸಿವೆಯನ್ನು ಹಾಕಿ, ಸಿಡಿಯುವ ತನಕ ಹುರಿಯಿರಿ.

hunase gojju recipe
hunase gojju recipe

8. ಜೀರಿಗೆಯನ್ನು ಸೇರಿಸಿ ಹುರಿಯಿರಿ.

hunase gojju recipe

9. ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.

hunase gojju recipe
hunase gojju recipe

10. ಇಂಗು ಮತ್ತು ಹುಣಸೆ ರಸವನ್ನು ಸೇರಿಸಿ.

hunase gojju recipe
hunase gojju recipe

11. ಒಂದು ಕಪ್ ನೀರನ್ನು ಸೇರಿ, ಚೆನ್ನಾಗಿ ತಿರುವಿ.

hunase gojju recipe
hunase gojju recipe

12. ಸಾಮಾನ್ಯ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಲು ಬಿಡಿ.

hunase gojju recipe

13. ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

hunase gojju recipe

14. ನಂತರ ತೆಂಗಿನ ತುರಿ ಮತ್ತು ಉಪ್ಪನ್ನು ಬೆರೆಸಿ.

hunase gojju recipe
hunase gojju recipe

15. ಚೆನ್ನಾಗಿ ತಿರುವಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಲು ಬಿಡಿ.

hunase gojju recipe
hunase gojju recipe

16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.

hunase gojju recipe

17. ಒಂದು ಬೌಲ್‍ಗೆ ವರ್ಗಾಯಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

hunase gojju recipe
[ 5 of 5 - 48 Users]
X
Desktop Bottom Promotion