For Quick Alerts
ALLOW NOTIFICATIONS  
For Daily Alerts

ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿ

By Jaya subramanya
|

ಆರೋಗ್ಯಪೂರ್ಣವಾಗಿ ಇರುವುದು ಜೀವನದಲ್ಲಿ ಅತಿಮುಖ್ಯವಾದುದು. ಆರೋಗ್ಯಕರವಾಗಿ ಇರುವುದು ಎಂದರೆ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸುವುದು ಎಂದಾಗಿದೆ. ಆದ್ದರಿಂದ ಸರಿಯಾದ ಆಹಾರವನ್ನು ಸೇವಿಸುವುದು ಅತಿಮುಖ್ಯವಾದುದು. ಆದರೆ ಈಗೀಗ ಜೀವನ ಶೈಲಿಯಲ್ಲಿ ಜನರು ಆರೋಗ್ಯಪೂರ್ಣ ಆಹಾರಗಳನ್ನು ಆಯ್ಕೆಮಾಡುವುದು ಬಿಟ್ಟು ವಿದೇಶಿ ಆಹಾರ ಪದ್ಧತಿಗೆ ಮಾರುಹೋಗುತ್ತಿದ್ದಾರೆ. ಪಾಸ್ತಾ, ಪಿಜ್ಜಾ, ಬರ್ಗರ್ ಮೊದಲಾದ ಕೊಬ್ಬಿನ ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.

ಬಾಯಿ ಚಪಲಕ್ಕೆ ಸೇವಿಸುವ ಈ ಆಹಾರಗಳು ನಿಮಗೆ ಸ್ಥೂಲಕಾಯವನ್ನು ತರುವುದು ಮಾತ್ರವಲ್ಲದೆ ರೋಗಕ್ಕೂ ಆಹ್ವಾನವಾಗಿದೆ. ಹಾಗಿದ್ದರೆ ಇಂತಹ ಆಹಾರ ಪದ್ಧತಿಯನ್ನು ತ್ಯಜಿಸುವುದು ಒಮ್ಮೆಲೆ ಕಷ್ಟವೆನಿಸಿದರೂ ಆದಷ್ಟು ಆರೋಗ್ಯಪೂರ್ಣ ಆಹಾರಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ಇಂತಹ ಆಹಾರಗಳಿಗೆ ತಿಲಾಂಜಲಿಯನ್ನು ಇಡಬಹುದು. ಟೊಮೆಟೊ-ಸೌತೆ ಸಲಾಡ್ ಹಸಿಯಾಗಿ ತಿನ್ನಿ
ಸಸ್ಯಾಹಾರಿ ಪದಾರ್ಥಗಳನ್ನು ಹಾಗೆಯೇ ಹಸಿಯಾಗಿ ಸೇವಿಸುವುದು ನಿಮಗೆ ಇಷ್ಟವಾಗದೇ ಇರಬಹುದು ಆದರೆ ಬೇರೆ ಬೇರೆ ವಿಧಾನಗಳಲ್ಲಿ ಈ ಆಹಾರಗಳಲ್ಲಿ ಮಾರ್ಪಾಡುಗಳನ್ನು ತರುವ ಮೂಲಕ ಆರೋಗ್ಯಪೂರ್ಣವಾಗಿ ನೀವಿರಬಹುದು. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಹೆಚ್ಚು ರುಚಿಕರವಾದ ಸ್ವಾದಿಷ್ಟ ತರಕಾರಿ ಸಲಾಡ್ ರೆಸಿಪಿ ತಯಾರಿ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದೇವೆ. ಬನ್ನಿ ಅದೇನು ಎಂಬುದನ್ನು ಇಲ್ಲಿ ನೋಡೋಣ.

Simple And Healthy Salad Recipe

ಈ ಆರೋಗ್ಯಪೂರ್ಣ ಸಲಾಡ್ ರೆಸಿಪಿಗೆ ಕರಿಮೆಣಸಿನ ಹುಡಿಯನ್ನು ಹಾಕಿ ತಯಾರಿಸಬಹುದು ಅಂತೆಯೇ ಜೇನು ಕೂಡ ಹಾಕಿ ಈ ಸಲಾಡ್ ಅನ್ನು ನಿಮಗೆ ಸಿದ್ಧಗೊಳಿಸಬಹುದು. ದಿನದಲ್ಲಿ ಯಾವಾಗ ಬೇಕಾದರೂ ಈ ರೆಸಿಪಿಯನ್ನು ನಿಮಗೆ ಸಿದ್ಧಪಡಿಸಬಹುದಾಗಿದ್ದು ಇದನ್ನು ಬೆಳಗ್ಗಿನ ತಿಂಡಿಗೂ ನಿಮಗೆ ಸೇವಿಸಬಹುದು. ಇದು ನಿಮಗೆ ಶಕ್ತಿಯನ್ನು ನೀಡುವುದರೊಂದಿಗೆ ದಿನಪೂರ್ತಿ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಹಾಗಿದ್ದರೆ ಈ ಸಲಾಡ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಪ್ರಮಾಣ - 2
*ಅಡುಗೆಗೆ ಬೇಕಾದ ಸಮಯ - 10 ನಿಮಿಷಗಳು
*ಸಿದ್ಧತಾ ಸಮಯ - 15 ನಿಮಿಷಗಳು

ಸಾಮಾಗ್ರಿಗಳು
*ಹಸಿ ಮಾವು - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಸೌತೆಕಾಯಿ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಸ್ಟ್ರಾಬೆರ್ರಿ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಕಲ್ಲಂಗಡಿ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಮಸ್ಕ್ ಮೆಲನ್ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಬಾಳೆಹಣ್ಣು - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ದ್ರಾಕ್ಷಿ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಕಿತ್ತಳೆ - 1/2 ಕಪ್ (ಚಿಕ್ಕದಾಗಿ ಕತ್ತರಿಸಿರುವಂತಹದ್ದು)
*ಕಾಳುಮೆಣಸು - 1/2 ಚಮಚ
*ಆಮ್ ಚೂರ್ ಪೌಡರ್ - 1/2 ಚಮಚ
*ಲಿಂಬೆ ರಸ - 1/2 ಚಮಚ
*ಜೇನು - 2 ಚಮಚ
*ಪುದೀನಾ - 5-6
*ಉಪ್ಪು

ಮಾಡುವ ವಿಧಾನ
1.ದೊಡ್ಡ ಪಾತ್ರೆ ತೆಗೆದುಕೊಂಡು ಎಲ್ಲಾ ಸಾಮಾಗ್ರಿಗಳನ್ನು ಇದಕ್ಕೆ ಹಾಕಿ
2.ಇದಕ್ಕೆ ಕಾಳುಮೆಣಸು, ಆಮ್ ಚೂರ್ ಪೌಡರ್, ಲಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
3.ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
4.ಇದಕ್ಕೆ ಬೇಕಿದ್ದಲ್ಲಿ ಜೇನು ಸೇರಿಸಿಕೊಳ್ಳಬಹುದು.
5.ಅಲಂಕರಿಸುವುದಕ್ಕಾಗಿ, ಪುದೀನಾ ಎಲೆಗಳನ್ನು ಹಾಕಿ ಬಡಿಸಿ.
6.ಈ ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿಯನ್ನು ಪ್ರಯತ್ನಿಸಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ.

English summary

Simple And Healthy Salad Recipe

It is always important to stay healthy. And the only way to stay healthy is to eat healthy. So, eating the right food is very important. Though several varieties of healthy foods are available, people want tasty foods and always opt for unhealthy food items. But, today we shall share with you an easy salad recipe that is tasty and very healthy. So, let's take a look at how to prepare healthy salad recipe.
X
Desktop Bottom Promotion