For Quick Alerts
ALLOW NOTIFICATIONS  
For Daily Alerts

ನಾಲಗೆ ಚಪಲ ತಣಿಸುವ ಮಾವಿನಕಾಯಿ ರೆಸಿಪಿ

By Manu
|

ಬೇಸಿಗೆಯ ದಿನಗಳು ಮುಂದುವರೆಯುತ್ತಿದ್ದಂತೆಯೇ ಮಾವಿನ ಮಿಡಿಗಳೂ ಮಾವಿನ ಮರದಲ್ಲಿ ಕಳೆಗಟ್ಟುತ್ತಿವೆ. ಅಂತೆಯೇ ಮಾರುಕಟ್ಟೆಯಲ್ಲಿ ವಿವಿಧ ಮಾವಿನ ಮಿಡಿ ಮತ್ತು ಮಾವಿನ ಕಾಯಿಗಳು ಲಗ್ಗೆಯಿಡುತ್ತಿವೆ. ಒಂದು ವೇಳೆ ನಿಮ್ಮ ಶರೀರದಲ್ಲಿ ವಿಟಮಿನ್ ಎ ಅಥವಾ ಸಿ ಕಡಿಮೆ ಇದ್ದು ಇವೆರಡೂ ಹೆಚ್ಚಿರುವ ಆಹಾರ ಸೇವಿಸಿ ಎಂದು ವೈದ್ಯರು ಹೇಳಿದ್ದರೆ ಮಾವಿನ ಕಾಯಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ.

ಸಾಮಾನ್ಯವಾಗಿ ನಾವೆಲ್ಲರೂ ಮಾವಿನ ಮಿಡಿಯನ್ನು ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ತಿನ್ನುವುದನ್ನು ಇಷ್ಟಪಡುತ್ತೇವೆ. ಆದರೆ ಮಾವಿನ ಮಿಡಿ ಮತ್ತು ಕಾಯಿಯನ್ನು ಸವಿಯಲು ಇದಕ್ಕಿಂತಲೂ ಉತ್ತಮವಾದ ಕೆಲವು ಕ್ರಮಗಳಿವೆ. ಬನ್ನಿ, ಈ ವಿಧಾನಗಳು ಯಾವುದು ಎಂಬುದನ್ನು ನೋಡೋಣ...

ಮಾವಿನ ಚಟ್ನಿ

ಮಾವಿನ ಚಟ್ನಿ

ಮಾಂಗಾ ಪಚ್ಚಡಿ ಎಂದೇ ತಮಿಳುನಾಡು, ಕೇರಳಗಳಲ್ಲಿ ಹೆಚ್ಚು ಜನಪ್ರಿಯವಾದ ಈ ಚಟ್ನಿಯನ್ನು ತಯಾರಿಸಲು ಒಂದು ಚಿಕ್ಕ ಚಮಚ ತುಪ್ಪವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಬಿಸಿಮಾಡಿ ತಲಾ ಅರ್ಧ ಚಮಚದಷ್ಟು ಸಾಸಿವೆ, ಉದ್ದಿನ ಬೇಳೆ ಮತ್ತು ಮೆಣಸಿನ ಪುಡಿ ಸೇರಿಸಿ. ಇದಕ್ಕೆ ಒಂದು ಇಡಿಯ ಕೆಂಪು ಮೆಣಸನ್ನು ಸೇರಿಸಿ ಕೊಂಚ ಹುರಿಯಿರಿ. ಕೆಲವು ಕರಿಬೇವಿನ ಹೂವುಗಳನ್ನೂ ಸೇರಿಸಿ. ಬಳಿಕ ಒಂದು ಕಪ್ ಚಿಕ್ಕದಾಗಿ ಹೆಚ್ಚಿದ ಮಾವಿನ ಕಾಯಿಯನ್ನು ಸೇರಿಸಿ ಉಪ್ಪು ಸೇರಿಸಿ ಕೊಂಚ ಹುರಿಯಿರಿ. ಎಣ್ಣೆ ಎಲ್ಲಾ ಮಾವಿನ ಕಾಯಿಯ ತುಂಡುಗಳಿಗೆ ಅಂಟಿದೆ ಎಂದು ಅನ್ನಿಸಿದ ಬಳಿಕ ಒಂದು ಅಥವಾ ಎರಡು ಕಪ್ ನೀರು ಸೇರಿಸಿ ಕುದಿಸಿ. ಮಾವು ಬೆಂದಿದೆ ಎಂದೆನ್ನಿಸಿದ ಬಳಿಕ ಒಂದು ತುಂಡು ಬೆಲ್ಲವನ್ನು ಪುಡಿ ಮಾಡಿ ಬೆರೆಸಿ. ಚಿಕ್ಕ ಉರಿಯಲ್ಲಿ ಸುಮಾರು ಐದು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ ಊಟದೊಂದಿಗೆ ಬಡಿಸಿ.

ಮಾವಿನ ಅನ್ನ

ಮಾವಿನ ಅನ್ನ

ಒಂದು ಪಾತ್ರೆಯಲ್ಲಿ ಒಂದು ಚಿಕ್ಕಚಮಚ ಎಣ್ಣೆ ಬಿಸಿಮಾಡಿ ತಲಾ ಅರ್ಧ ಚಮಚದಷ್ಟು ಕಡ್ಲೆಬೇಳೆ, ಉದ್ದಿನ ಮೇಳೆ, ಸಾಸಿವೆ, ಜೀರಿಗೆ ಹಾಕಿ ಹುರಿಯಿರಿ. ಕೊಂಚ ಬೇವಿನ ಎಲೆಗಳನ್ನೂ ಸೇರಿಸಿ. ಸಾಸಿವೆ ಸಿಡಿದ ಬಳಿಕ ಒಂದು ಕಪ್ ತುರಿದ ಮಾವಿನ ಕಾಯಿಯನ್ನು ಹಾಕಿ ಚಿಕ್ಕ ಉರಿಯಲಿ ಐದು ನಿಮಿಷಗಳ ಕಾಲ ತಿರುವುತ್ತಿರಿ. ಬಳಿಕ ಚಿಟಿಕೆಯಷ್ಟು ಅರಿಶಿನ ಪುಡಿ, ಉಪ್ಪು ಹಾಗಿ ಬೆರೆಸಿ ಒಂದು ಕಪ್ ಅನ್ನ ಸೇರಿಸಿ ಮೂರು ನಿಮಿಷಗಳ ಕಾಲ ತಿರುವುತ್ತಿರಿ. ಬಳಿಕ ಕೊಂಚ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಬಿಸಿಬಿಸಿಯಾಗಿ ಬಡಿಸಿ.

ಮಾವಿನ ಕಾಯಿಯ ಮುರಬ್ಬಾ

ಮಾವಿನ ಕಾಯಿಯ ಮುರಬ್ಬಾ

ಒಂದು ಮಾವಿನ ಕಾಯಿಯನ್ನು ಅರ್ಧ ಇಂಚಿನಷ್ಟು ದೊಡ್ಡದಾದ ತುಂಡುಗಳನ್ನಾಗಿಸಿ. ಇವನ್ನು ಒಂದು ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಸೇರಿಸಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಉರಿಯನ್ನು ಚಿಕ್ಕದಾಗಿಸಿ ನೀರು ಅರ್ಧಮಟ್ಟಕ್ಕಿ ಇಳಿಯುವಷ್ಟು ಕಾಲ ಕುದಿಸಿ. ಈ ಪಾತ್ರೆಯನ್ನು ಇಳಿಸಿ ಪಕ್ಕದಲ್ಲಿಡಿ. ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಸಕ್ಕರೆ ಹಾಕಿ ಇದು ಮುಳುಗುವಷ್ಟು ಮಾತ್ರ ನೀರು ಹಾಕಿ ಕೊಂಚ ಬಿಸಿಮಾಡಿ ದಪ್ಪನೆಯ ದ್ರಾವಣವಾಗುವಂತೆ ಮಾಡಿ. ಈ ದ್ರಾವಣಕ್ಕೆ ಮೊದಲ ಪಾತ್ರೆಯಲ್ಲಿರುವ ಬೇಯಿಸಿದ ಮಾವಿನ ತುಂಡುಗಳನ್ನು ಹಾಕಿ ಬೆರೆಸಿ. ಕೊಂಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ನೀರಿನ ಪ್ರಮಾಣ ಹೆಚ್ಚಾದಂತೆ ಕಂಡು ಬಂದರೆ ಕೊಂಚ ಬಿಸಿ ಮಾಡಬಹುದು. ಬಳಿಕ ಇದನ್ನು ಗಾಜಿನ ಜಾಡಿಯಲ್ಲಿ ಹಾಕಿ ಗಟ್ಟಿಯಾದ ಮುಚ್ಚಳ ಹಾಕಿ ಫ್ರಿಜ್ಜಿನಲ್ಲಿ ಸಂಗ್ರಹಿಸಿ. ಊಟದ ಬಳಿಕ ಸಿಹಿತಿಂಡಿಯ ರೂಪದಲ್ಲಿ ಸೇವಿಸಲು ಇದು ಚೆನ್ನಾಗಿರುತ್ತದೆ.

 ಮಾವಿನ ಧಾಲ್

ಮಾವಿನ ಧಾಲ್

ಒಂದು ಕಪ್ ತೊಗರಿ ಬೇಳೆಯನ್ನು ಎರಡು ಕಪ್ ನೀರು, ಅರ್ಧ ಕಪ್ ಈರುಳ್ಳಿ, ಒಂದು ಕಪ್ ಚಿಕ್ಕದಾಗಿ ಹೆಚ್ಚಿದ ಮಾವಿನ ಕಾಯಿ, ಅರ್ಧ ಕಪ್ ಹೆಚ್ಚಿದ ಟೊಮೇಟೊ, 2- 3 ಚಿಕ್ಕದಾಗಿ ತುಂಡರಿಸಿದ ನುಗ್ಗೇಕಾಯಿ,ತಲಾ ಒಂದು ಚಿಕ್ಕ ಚಮಚ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಎಲ್ಲವನ್ನೂ ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ನಾಲ್ಕೈದು ಸೀಟಿ ಬರುವವರೆಗೆ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ಬೇವಿನ ಎಲೆ, ಬೆಳ್ಳುಳ್ಳಿಯ ನಾಲ್ಕು ಎಸಳು ಎರಡು ಹಸಿಮೆಣಸು ಹಾಕಿ ಕೊಂಚ ಹುರಿದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ದ್ರವವನ್ನು ಸೇರಿಸಿ ಕಲಕಿ. ಕೊಂಚ ಕಾಲ ತಿರುವಿದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಆಮ್ ಪನ್ನಾ

ಆಮ್ ಪನ್ನಾ

ಒಂದು ಸಾಮಾನ್ಯ ಗಾತ್ರದ ಅದರೆ ಒಳಗೆ ಗಟ್ಟಿಗೊರಟಾಗಿರುವ ಮಾವಿನ ಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ. ಬಳಿಕ ಇದನ್ನು ತಣಿಸಿ ಸಿಪ್ಪೆ ಸುಲಿದು ತಿರುಳನ್ನು ಹಿಂಡಿ ತೆಗೆಯಿರಿ, ಸಿಪ್ಪೆ ಮತ್ತು ಗೊರಟನ್ನು ನಿವಾರಿಸಿ. ಈ ರಸಕ್ಕೆ ಒಂದು ಚಿಕ್ಕ ಚಮಚ ಜೀರಿಗೆ ಪುಡಿ ಮತ್ತು ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ, ಚಿಟಿಕೆ ಇಂಗು ಹಾಕಿ ಬೆರೆಸಿ. ಒಂದು ಲೋಟದಲ್ಲಿ ಅರ್ಧ ಲೋಟ ನೀರು, ಕಾಲು ಲೋಟದಷ್ಟು ಈ ರಸ ಮತ್ತು ಎರಡು ಚಿಕ್ಕಚಮಚ ಬೆಲ್ಲದ ಪುಡಿ ಸೇರಿಸಿ ಕಲಕಿ. ಇದನ್ನು ಕುಡಿದು ನೋಡಿ, ಇಷ್ಟರವರೆಗೆ ಇಷ್ಟು ರುಚಿಯಾದ ಪೇಯವನ್ನು ಏಕೆ ಯಾರು ಹೇಳಿರಲಿಲ್ಲ ಎಂಬ ವಿಚಾರ ಖಂಡಿತಾ ನಿಮ್ಮ ಮನದಲ್ಲಿ ಸುಳಿಯುತ್ತದೆ.

English summary

Simple and delicious raw mango recipes you have to try!

If you suffer from vitamin C deficiency or are lacking vitamin A in your diet, then raw mango is what you should eat to meet your requirement of these vitamins naturally. As this seasonal fruit is tangy in nature, it is better to reap its benefits with raw mango recipes rather than eating it with salt and spice.
Story first published: Friday, April 1, 2016, 19:48 [IST]
X
Desktop Bottom Promotion