For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...

By Suma
|

ನಗರ ಪ್ರದೇಶದವರು ಈ ಲೇಖನವನ್ನು ಒಮ್ಮೆ ಓದಲೇಬೇಕು. ಏಕೆಂದರೆ ಹಿಂದಿನ ಕಾಲಗಳಲ್ಲಿ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಸಿಗುತ್ತಿದ್ದ ಹಾಗೂ ಈಗಲೂ ಸಿಗುತ್ತಿರುವಂತಹ ರುಚಿರುಚಿಯಾದ ಆಹಾರವೆಂದರೆ ರಾಗಿ ಮುದ್ದೆ ಮತ್ತು ಉಪ್ಪುಸಾರು. ಹೌದು! ಅದರಲ್ಲೂ ರಾಗಿ ಮುದ್ದೆ ಎಂದರೆ ಹಳ್ಳಿ ಜನರಿಗೆ ಪಂಚಪ್ರಾಣ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿಯೂ ಸಹ ರಾಗಿ ಮುದ್ದೆಯ ಬಳಕೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಅದಕ್ಕೆ ಕಾರಣ ರಾಗಿಯಲ್ಲಿರುವ ವಿಶೇಷ ವಿಟಮಿನ್ ಮತ್ತು ಖನಿಜ ಸತ್ವಗಳು. ಹಾಗಾಗಿ ರಾಗಿ ಮುದ್ದೆಯು ಅತ್ಯಂತ ಆರೋಗ್ಯಕರವಾದ ಆಹಾರ ಪದಾರ್ಥಗಳಲ್ಲಿ ಒಂದು ಎನ್ನಬಹುದು.

ಕ್ರಮವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುವವರು ರಾಗಿ ಮುದ್ದೆಯನ್ನು ತಮ್ಮ ಆಹಾರದ ಭಾಗವಾಗಿ ಸೇವಿಸಲೇಬೇಕು. ಸಾಮಾನ್ಯವಾಗಿ ರಾಗಿ ಮುದ್ದೆಯು ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಸೇವಿಸುತ್ತಾರೆ. ಬಿಸಿಬಿಸಿ ರಾಗಿ ಮುದ್ದೆಯನ್ನು ತರಕಾರಿ ಸಾಂಬಾರಿನ ಜೊತೆ ಸೇವಿಸುತ್ತಿದ್ದರೆ ಅದರ ಮಜವೇ ಮಜಾ. ನಿಜ, ರಾಗಿ ಮುದ್ದೆಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ದೇಹದ ಸಾಮರ್ಥ್ಯ ಹೆಚ್ಚಾಗಿ ಅತ್ಯಂತ ಆರೋಗ್ಯಪೂರ್ಣವಾದ ಜೀವನ ನಡೆಸಬಹುದು.

Easy Ragi Ball And Curry Recipe

ಇತ್ತೀಚೆಗಂತೂ ರಾಗಿ ಮುದ್ದೆಯ ಗುಣವನ್ನು ತಿಳಿದವರು ಹೆಚ್ಚಾಗುತ್ತಿದ್ದು, ಬೆಳಗಿನ ಉಪಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತು ರಾತ್ರಿಯ ಊಟಕ್ಕೂ ರಾಗಿ ಮುದ್ದೆಯನ್ನೇ ಆದ್ಯತೆಯ ಮೇರೆಗೆ ಸೇವಿಸುತ್ತಿದ್ದಾರೆ. ಹಾಗಾದರೆ ಏಕೆ ತಡ? ರಾಗಿ ಮುದ್ದೆ ಮತ್ತು ತರಕಾರಿ ಸಾಂಬಾರು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.... ಸರ್ವರೋಗವನ್ನು ಬಗ್ಗುಬಡಿಯುವ ರಾಗಿಮುದ್ದೆಯ ಕರಾಮತ್ತೇನು?

ಇಬ್ಬರಿಗೆ ಉಣಬಡಿಸಲು
*ಬೇಕಾಗುವ ತಯಾರಿಯ ಸಮಯ - 10 ನಿಮಿಷ
*ತಯಾರಿಸಲು ಬೇಕಾದ ಸಮಯ - 10 ನಿಮಿಷ

ರಾಗಿ ಮುದ್ದೆ ತಯಾರಿಸಲು ಬೇಕಾದ ಸಾಮಗ್ರಿಗಳು:
*ರಾಗಿ ಹಿಟ್ಟು - 2 ಬಟ್ಟಲು
*ತುಪ್ಪ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಸ್ವಲ್ಪ

ಮಾಡುವ ವಿಧಾನ:
*ಒಂದು ಪಾತ್ರೆಯಲ್ಲಿ 2 ಲೋಟ ನೀರು ಮತ್ತು 1 ಚಮಚ ಎಣ್ಣೆ, ಹಾಕಿ. ನೀರನ್ನು ಚೆನ್ನಾಗಿ ಕಾಯಲು ಬಿಡಿ.
*ಒಮ್ಮೆ ನೀರು ಕುದಿಯಲು ಪ್ರಾರಂಭಿಸಿದಾಗ ರಾಗಿ ಹಿಟ್ಟನ್ನು ನಿಧಾನವಾಗಿ ಹಾಕುತ್ತಾ ನಿಧಾನವಾಗಿ ಕಲಕುತ್ತಾ ಇರಿ.
*ಕಡಿಮೆ ಉರಿಯೊಂದಿಗೆ ನಿಧಾನವಾಗಿ ಕಲಕುತ್ತಾ ಇರಿ. ಆದರೆ ಜಾಗ್ರತೆ, ರಾಗಿ ಹಿಟ್ಟು ಉಂಡೆಗಲಾಗುವುದಕ್ಕೆ ಬಿಡಬೇಡಿ.
*ಸುಮಾರು 5 ರಿಂದ 10 ನಿಮಿಷ ಕಲಕುತ್ತಾ ಇರಿ.
*ಇನ್ನು ಈ ಮಿಶ್ರಣವನ್ನು ಒಂದು ತಟ್ಟೆಯ ಮೇಲೆ ಇಟ್ಟುಕೊಳ್ಳಿ.
*ತದನಂತರ ಹಸ್ತಕ್ಕೆ ತುಪ್ಪವನ್ನು ಸವರಿಕೊಂಡು ನಿಧಾನವಾಗಿ ಮೃದುವಾದ ಮುದ್ದೆಯಾಗುವಂತೆ ಮಾಡಿ.
ರಾಗಿ ಮುದ್ದೆ ಇದೀಗ ತಯಾರಾಗಿದ್ದು, ತುಪ್ಪದ ಜೊತೆ ನೀಡಿದರೆ ಮತ್ತಷ್ಟು ರುಚಿಯಾಗಿರುತ್ತದೆ.

ಸಾಂಬಾರನ್ನು ತಯಾರಿಸಲು ಬೇಕಾದ ಸಾಮಗ್ರಿಗಳು
*ಬಸಲೆ ಸೊಪ್ಪು - 2 ಬಟ್ಟಲು
*ಹಸಿ ಮೆಣಸಿನಕಾಯಿ - 4 ರಿಂದ 5
*ತೊಗರಿಬೇಳೆ - 1 ಬಟ್ಟಲು
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1/4 ಚಮಚ
*ಕರಿಬೇವು - 8 ರಿಂದ 10
*ಅರಿಶಿನ - 1/4 ಚಮಚ
*ಜೀರಿಗೆ - 1/4 ಚಮಚ
*ಎಣ್ಣೆ

ತಯಾರಿಸುವ ವಿಧಾನ:
*ಮೊದಲಿಗೆ ಕುಕ್ಕರ್ ಗೆ ತೊಗರಿ ಬೇಳೆ, ಬಸಲೆ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಮತ್ತು ನೀರನ್ನು ಹಾಕಿ.
*ಇನ್ನು ಕುಕ್ಕರ್ ಬಾಯಿಯನ್ನು ಮುಚ್ಚಿ 3 ವಿಶಲ್ ಆಗುವವರೆಗೆ ಒಲೆಯ ಮೇಲಿಡಿ.
*ಕುಕ್ಕರ್ ಆರಿದ ನಂತರ ಅದರ ಬಾಯಿಯನ್ನು ತೆರೆದು ಮಿಶ್ರಣವನ್ನು ಚೆನ್ನಾಗಿ ಕಲಸಿ.
*ಇನ್ನು ಮತ್ತೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಮೇಲೆ ಜೀರಿಗೆ ಮತ್ತು ಕರಿಬೇವನ್ನು ಸೇರಿಸಿ.
*ನಂತರ ಇದಕ್ಕೆ ಕುಕ್ಕರ್‌ನ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ.
ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಈಗ ರುಚಿರುಚಿಯಾದ ಬಿಸಿ ರಾಗಿ ಮುದ್ದೆ ಮತ್ತು ಬಿಸಿ ಬಿಸಿ ಸಾಂಬಾರು ಸವಿಯಲು ಸಿದ್ಧ.

English summary

Easy Ragi Ball And Curry Recipe

If you are a diet conscious person, yet crave to eat, here is the best dish for you. Ragi ball is a typical South Indian delicacy, which is very healthy and tasty. Ragi, otherwise called finger millet, is widely used across India in one or the other form. As stated earlier, ragi is highly rich in proteins and minerals than any other millets and is an effective food to include in your diet for weight loss.
Story first published: Thursday, January 7, 2016, 12:59 [IST]
X
Desktop Bottom Promotion