For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಹಲ್ವಾ ಮಾಡುವುದು ತುಂಬಾ ಸುಲಭ ನೋಡಿ

Posted By:
|

ಕ್ಯಾರೆಟ್ ಹಲ್ವಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಒಂದು ಸಿಹಿ ತಿನಿಸು ಆಗಿದೆ. ಇನ್ನು ಇದರಲ್ಲಿ ಹಾಲು, ತುಪ್ಪ, ನಟ್ಸ್ ಬಳಸುವುದರಿಂದ ಇವು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ಈ ಕ್ಯಾರೆಟ್ ಹಲ್ವಾವನ್ನು ಸುಲಭದಲ್ಲಿ ಮಾಡಬಹುದಾಗಿದೆ.

Carrot Halwa Recipe

ಕ್ಯಾರೆಟ್ ತ್ವಚೆಗೆ ಹಾಗೂ ಕಣ್ಣಿಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೂ ಸಹಕಾರಿ. ಸಿಹಿ ತಿನ್ನಬೇಕೆಂದು ಅನಿಸುವಾಗ ಈ ರೀತಿಯ ವಸ್ತುಗಳನ್ನು ಸುಲಭದಲ್ಲಿ ಮಾಡಿ ಸವಿಯಬಹುದಾಗಿದೆ ನೋಡಿ. ಇಲ್ಲಿ ನಾವು ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:

Carrot Halwa Recipe,ಕ್ಯಾರೆಟ್ ಹಲ್ವಾ ರೆಸಿಪಿ
Carrot Halwa Recipe,ಕ್ಯಾರೆಟ್ ಹಲ್ವಾ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Reena TK

Recipe Type: Sweet

Serves: 2-3

Ingredients
  • ಬೇಕಾಗುವ ಸಾಮಗ್ರಿ

    2-4 ಕ್ಯಾರೆಟ್

    ಅರ್ಧ ಲೀಟರ್ ಹಾಲು ಅರ್ಧ ಕಪ್ ಸಕ್ಕರೆ (ನಿಮ್ಮ ಸಿಹಿಗೆ ತಕ್ಕಷ್ಟು)

    ನಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ)

    ದ್ರಾಕ್ಷಿ

    3-4 ಚಮಚ ತುಪ್ಪ

Red Rice Kanda Poha
How to Prepare
  • ಕ್ಯಾರೆಟ್ ಹಲ್ವಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಒಂದು ಸಿಹಿ ತಿನಿಸು ಆಗಿದೆ. ಇನ್ನು ಇದರಲ್ಲಿ ಹಾಲು, ತುಪ್ಪ, ನಟ್ಸ್ ಬಳಸುವುದರಿಂದ ಇವು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ಈ ಕ್ಯಾರೆಟ್ ಹಲ್ವಾವನ್ನು ಸುಲಭದಲ್ಲಿ ಮಾಡಬಹುದಾಗಿದೆ.

    ಕ್ಯಾರೆಟ್ ತ್ವಚೆಗೆ ಹಾಗೂ ಕಣ್ಣಿಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೂ ಸಹಕಾರಿ. ಸಿಹಿ ತಿನ್ನಬೇಕೆಂದು ಅನಿಸುವಾಗ ಈ ರೀತಿಯ ವಸ್ತುಗಳನ್ನು ಸುಲಭದಲ್ಲಿ ಮಾಡಿ ಸವಿಯಬಹುದಾಗಿದೆ ನೋಡಿ. ಇಲ್ಲಿ ನಾವು ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:

    {recipe}

Instructions
  • ಕ್ಯಾರೆಟ್ ಹಲ್ವಾಗೆ ಸಕ್ಕರೆ ಬದಲಿಗೆ ಬೆಲ್ಲ ಅಥವಾ ಖರ್ಜೂರ ಬಳಸಿ ಮಾಡಿದರೆ ಮತ್ತಷ್ಟು ಒಳ್ಳೆಯದು.
Nutritional Information
  • ಸರ್ವ್ - 1 ಚಿಕ್ಕ ಕಪ್
  • ಕ್ಯಾಲೋರಿ - 115 ಕ್ಯಾ
  • ಕೊಬ್ಬು - 3.8ಗ್ರಾಂ
  • ಕಾರ್ಬ್ಸ್ - 19.8ಗ್ರಾಂ
  • ನಾರಿನಂಶ - 4.2 ಗ್ರಾಂ

ಮಾಡುವ ವಿಧಾನ
* ಕ್ಯಾರೆಟ್‌ ಅನ್ನು ತುರಿಯಿರಿ.
* ಈಗಕ್ಯಾರೆಟ್‌ ಅನ್ನು ಚಿಕ್ಕ ಕುಕ್ಕರ್‌ಗೆ ಹಾಕಿ ಬೇಯಲು ತಕ್ಕ ಹಾಲು ಸೇರಿಸಿ 2-3 ವಿಶಲ್‌ ಬರುವವರೆಗೆ ಬೇಯಿಸಿ.
* ಈಗ ಪ್ಯಾನ್‌ಗೆ ತುಪ್ಪ ಹಾಕಿ (ತುಪ್ಪ ಸ್ವಲ್ಪ ಅಧಿಕವಿದ್ದರೆ ರುಚಿ ಇನ್ನಷ್ಟು ಚೆನ್ನಾಗಿರುತ್ತದೆ)

Carrot Halwa Recipe


* ತುಪ್ಪ ಬಿಸಿಯಾದಾಗ ನಟ್ಸ್ ಹಾಗೂ ದ್ರಾಕ್ಷಿ ಹಾಕಿ ಸ್ವಲ್ಪ ಹುರಿಯಿರಿ.
* ನಂತರ ಬೇಯಿಸಿದ ಕ್ಯಾರೆಟ್ ಹಾಕಿ, ಸಕ್ಕರೆ ಸೇರಿಸಿ ಸೌಟ್‌ನಿಂದ ಆಡಿಸುತ್ತಾ ಬೇಯಿಸಿ.
* ಹಾಲಿನಂಶ ಇಂಗಿ ಕ್ಯಾರೆಟ್ ಸ್ವಲ್ಪ ಡ್ರೈ ರೀತಿಯಾಗುವವರೆಗೆ ಸೌಟ್‌ನಿಂದ ಆಡಿಸುತ್ತಾ ಬೇಯಿಸಿ.

Carrot Halwa Recipe
* ಕ್ಯಾರೆಟ್‌ನಲ್ಲಿ ಹಾಲಿನಂಶ ಆವಿಯಾದ ಮೇಲೆ ಉರಿಯಿಂದ ಇಳಿಸಿದರೆ ಸವಿಯಲು ರುಚಿಕರವಾದ ಕ್ಯಾರೆಟ್ ಹಲ್ವಾ ರೆಡಿ.
[ 4 of 5 - 34 Users]
X
Desktop Bottom Promotion