For Quick Alerts
ALLOW NOTIFICATIONS  
For Daily Alerts

ಹೋಳಿ ಸ್ಪೆಷಲ್: ಈ ಬೂಂದಿ ರೈತಾ ನಿಮ್ಮ ಹೊಟ್ಟೆ ತಂಪಾಗಿಸುತ್ತೆ

Posted By:
|

ಬೂಂದಿ ರೈತಾ ಒಂದು ರುಚಿಯಾದ ಸೈಡ್ ಡಿಶ್ ಪಾಕವಿಧಾನವಾಗಿದ್ದು, ಉತ್ತರ ಬಾರತದ ಮೂಲದ ಫೇಮಸ್ ತಿಂಡಿಯಾಗಿದೆ. ಮೊಸರು ಬೇಸಿಗೆಯ ಆಹಾರದ ಅತ್ಯಗತ್ಯ ಭಾಗವಾಗಿದೆ ಮತ್ತು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇನ್ನು ಈ ಬೂಂಡಿ ರೈತಾ ಹೋಳಿ ಹಬ್ಬದ ಪ್ರಮುಖ ಖಾದ್ಯವಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಹೋಳಿ ಆಡಿದ ನಂತರ ಈ ತಂಪಾದ ರೈತಾ ನಿಮ್ಮ ಹೊಟ್ಟೆ ಹಾಗೂ ಮನಸ್ಸನ್ನು ತಂಪಾಗಿಸುತ್ತದೆ. ಹಾಗಾದರೆ ಇನ್ನೇಕೆ ತಡ, ಈ ಹೋಳಿ ಸ್ಪೆಷಲ್ ಬೂಂದಿ ರೈತಾವನ್ನು ಮಾಡುವ ವಿಧಾನವನ್ನು ನೋಡ್ಕೊಂಡು ಬರೋಣ.

Holi Special Boondi Raitha Recipe In Kannada
ಹೋಳಿ ಸ್ಪೆಷಲ್: ಈ ಬೂಂದಿ ರೈತಾ ನಿಮ್ಮ ಹೊಟ್ಟೆ ತಂಪಾಗಿಸುತ್ತೆ
ಹೋಳಿ ಸ್ಪೆಷಲ್: ಈ ಬೂಂದಿ ರೈತಾ ನಿಮ್ಮ ಹೊಟ್ಟೆ ತಂಪಾಗಿಸುತ್ತೆ
Prep Time
5 Mins
Cook Time
15M
Total Time
20 Mins

Recipe By: Shreeraksha

Recipe Type: Vegetarian

Serves: 3

Ingredients
  • ಬೇಕಾಗುವ ಪದಾರ್ಥಗಳು:

    2 ಕಪ್ ಮೊಸರು

    1 ಚಮಚ ಜೀರಿಗೆ ಪುಡಿ

    1/2 ಚಮಚ ಮೆಣಸಿನ ಪುಡಿ

    1 ಚಮಚ ಸಂಸ್ಕರಿಸಿದ ಎಣ್ಣೆ

    1/2 ಚಮಚ ಸಕ್ಕರೆ

    1/2 ಕಪ್ ಕಡಲೆ ಹಿಟ್ಟು

    1 ಚಮಚ ಅಡಿಗೆ ಸೋಡಾ

    ನೀರು

    ಉಪ್ಪು

Red Rice Kanda Poha
How to Prepare
  • ಬೂಂದಿ ರೈತಾ ತಯಾರಿಸುವ ವಿಧಾನ:

    • ಒಂದು ಬಟ್ಟಲಿನಲ್ಲಿ ಒಂದು ಕಪ್ ಕಡಲೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಜೀರಾ ಮತ್ತು ಸೋಡಾವನ್ನು ಬೆರೆಸಿ ಮೃದುವಾದ ಬ್ಯಾಟರ್ ತಯಾರಿಸಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ, ಮಧ್ಯಮ ಸ್ಥಿರತೆಯ ಬ್ಯಾಟರ್ ತಯಾರಿಸಿ.
    • ಮೀಡಿಯಮ್ ಫ್ಲೇಮ್ ನಲ್ಲಿ ಕಡಾಯಿ ಇಟ್ಟು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾದಾಗ, ರಂಧ್ರವಿರುವ ಚಮಚದ ಮೂಲಕ ಬ್ಯಾಟರ್ ಅನ್ನು ಸುರಿಯಿರಿ. ಇದರಿಂದಾಗಿ ಗುಳ್ಳೆಯ ಆಕಾರದಲ್ಲಿ ಹಿಟ್ಟು ಹನಿರೂಪದಲ್ಲಿ ಕಡಾಯಿಗೆ ಬೀಳುತ್ತದೆ. ಒಂದು ಸಮಯದಲ್ಲಿ ಮೂರು ಅಥವಾ ನಾಲ್ಕು ಚಮಚಗಳನ್ನು ತೆಗೆದುಕೊಂಡು, ಅವು ತಿಳಿ ಕಂದು ಬಣ್ಣ ಬರುವವರೆಗೆ ಲಘುವಾಗಿ ಹುರಿದು, ಬೆಚ್ಚಗಿನ ನೀರಿನಲ್ಲಿ ನೇರವಾಗಿ ಹಾಕಿ. ಅವುಗಳನ್ನು ಸ್ವಲ್ಪ ಸಮಯದವರೆಗೆ ನೆನೆಯಲು ಬಿಡಿ.
    • ಈಗ, ರೈಟಾಗೆ, ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಮೊಸರು, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಸ್ವಲ್ಪ ಸಕ್ಕರೆಯೊಂದಿಗೆ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ.
    • ಹೆಚ್ಚುವರಿ ನೀರನ್ನು ತೆಗೆದುಹಾಕಲು ಬೂಂದಿಯನ್ನು ಜರಡಿ ಹಿಡಿಯಿರಿ ಅಥವಾ ಅದನ್ನು ಹಿಸುಕಿ ಹಾಕಿ ಸ್ವಲ್ಪ ಸಮಯದವರೆಗೂ ಬಿಡಿ. ಇದರಿಂದ ಬೂಂದಿ ಊಡಿಕೊಳ್ಳುತ್ತದೆ.
    • ನಂತರ ಮೊಸರಿಗೆ ಬೂಂದಿ ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಆನಂದಿಸಿ!
Instructions
  • ಮೊಸರು ಬೇಸಿಗೆಯ ಆಹಾರದ ಅತ್ಯಗತ್ಯ ಭಾಗವಾಗಿದೆ ಮತ್ತು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇನ್ನು ಈ ಬೂಂಡಿ ರೈತಾ ಹೋಳಿ ಹಬ್ಬದ ಪ್ರಮುಖ ಖಾದ್ಯವಾಗಿದೆ.
Nutritional Information
  • People - 3
  • ಎನರ್ಜಿ - 69ಕ್ಯಾ
  • ಕೊಬ್ಬು - 3.9ಗ್ರಾ
  • ಪ್ರೋಟೀನ್ - 2.4ಗ್ರಾ
  • ಕಾರ್ಬೋಹೈಡ್ರೇಟ್ - 3.3ಗ್ರಾ
  • ಫೈಬರ್ - 0.2ಗ್ರಾ
[ 3.5 of 5 - 42 Users]
X
Desktop Bottom Promotion