For Quick Alerts
ALLOW NOTIFICATIONS  
For Daily Alerts

Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ

Posted By:
|

ಸಾಮಾನ್ಯವಾಗಿ ಸೋಯಾ ಚಂಕ್ಸ್ ಅಥವಾ ಸೋಯಾ ಬೀಜಗಳಿಂದ ಕರ್ರಿ, ಡ್ರೈ ಪದಾರ್ಥಗಳನ್ನು ಮಾಡುವುದು ರೂಢಿ. ಇದರಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇದ್ದು, ಕಟ್ಟು ಮಾಸ್ತದ ದೇಹ ಬಯಸುವ ಯುವಕರಿಗೆ ಬಹಳ ಒಳ್ಳೆಯದು. ಆದರೆ, ಸೋಯಾಬಿನ್ ನ ಅದೇ ರೆಸಿಪಿ ತಿಂದು ಬೇಜಾರಾಗಿದ್ರೆ, ಇದನ್ನ ಒಮ್ಮೆ ಟ್ರೈ ಮಾಡಿ.
ಇಲ್ಲಿ ನಾವು ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ಮಾಡುವ ವಿಧಾನ ತಿಳಿಸಿದ್ದೇವೆ. ಇದನ್ನು ಬಹಳ ಸುಲಭವಾಗಿ ತಯಾರಿಸಬಹುದು. ಹೇಗೆ ಎಂಬುದನ್ನು ನೋಡೋಣ.

High Protein Soya Chunks Nutri Dosa Recipe in Kannada
ಸೋಯಾ ಚಂಕ್ಸ್ ದೋಸೆ ರೆಸಿಪಿ
ಸೋಯಾ ಚಂಕ್ಸ್ ದೋಸೆ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಪದಾರ್ಥಗಳು :

    1 ಕಪ್ ಸೋಯಾ ಚಂಕ್ಸ್

    1 ಟೊಮೆಟೊ

    2 ಒಣ ಮೆಣಸಿನಕಾಯಿ

    1 ಇಂಚಿನ ಶುಂಠಿ

    2 ಕಪ್ ನೀರು

    1 ಟೀಸ್ಪೂನ್ ಉಪ್ಪು

    1 ಕಪ್ ಗೋಧಿ ಹಿಟ್ಟು

    ¾ ಕಪ್ ಅಕ್ಕಿ ಹಿಟ್ಟು

    ½ ಈರುಳ್ಳಿ

    1 ಕ್ಯಾರೆಟ್ (ತುರಿದ)

    2 ಚಮಚ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ತಯಾರಿಸುವ ವಿಧಾನ :

    ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಸೋಯಾ, 1 ಟೊಮೆಟೊ, 2 ಒಣಮೆಣಸಿನಕಾಯಿ, 1 ಇಂಚಿನ ಶುಂಠಿ, 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪನ್ನು ಹಾಕಿ, 10 ನಿಮಿಷಗಳ ಕಾಲ ಮುಚ್ಚಿ ಕುದಿಸಿ, ತಣ್ಣಗಾಗಿಸಿ.

    ಇನ್ನೊಂದು ಬದಿ, ಟೊಮೆಟೊ ಸಿಪ್ಪೆ ತೆಗೆದು, ಮಿಕ್ಸಿಗೆ ವರ್ಗಾಯಿಸಿ, ನಯವಾದ ಪೇಸ್ಟ್‌ ಮಾಡಿಕೊಳ್ಳಿ.

    ಸೋಯಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಕಪ್ ಗೋಧಿ ಹಿಟ್ಟು, ¾ ಕಪ್ ಅಕ್ಕಿ ಹಿಟ್ಟು, ಟೊಮೊಟೊ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

    ಈಗ ½ ಈರುಳ್ಳಿ, 1 ಕ್ಯಾರೆಟ್ ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

    ಮುಂದೆ, ಪ್ಯಾನ್ ತೆಗೆದುಕೊಂಡು ಎಣ್ಣೆ ಹಚ್ಚಿ, ಮಿಶ್ರಣವನ್ನು ರೊಟ್ಟಿ ಹಾಗೆಯೇ ತಟ್ಟಿ ಅಥವಾ ದೋಸೆಯ ರೀತಿ ಹಾಕಿದರೆ, ಎರಡೂ ಕಡೆ ಚೆನ್ನಾಗಿ ಬೇಯಿಸಿ.

    ಅಂತಿಮವಾಗಿ, ಚಟ್ನಿ ಅಥವಾ ಸಾಸ್‌ನೊಂದಿಗೆ ಪ್ರೊಟೀನ್ ಭರಿತ ದೋಸೆಯನ್ನು ಆನಂದಿಸಿ.

Instructions
Nutritional Information
  • People - 2
  • ಕ್ಯಾಲೋರಿಗಳು: - 128 ಕೆ.ಸಿ.ಎಲ್
  • ಕೊಬ್ಬು: - 1 ಗ್ರಾಂ
  • ಪ್ರೋಟೀನ್: - 7 ಗ್ರಾಂ
  • ಕಾರ್ಬೋಹೈಡ್ರೇಟ್ಗಳು: - 24 ಗ್ರಾಂ
[ 5 of 5 - 66 Users]
X
Desktop Bottom Promotion