For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಬ್ರೇಕ್‌ಫಾಸ್ಟ್‌ ಮೆಂತ್ಯ ಮಿಸ್ಸಿ ರೊಟ್ಟಿ

|

ಸೊಪ್ಪು ಆರೋಗ್ಯಕ್ಕೆ ತುಂಬಾ ಸಹಕಾರಿ, ದಿನನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಸೊಪ್ಪನ್ನು ಸೇರಿಸುವುದರಿಂದ ಅನಾರೋಗ್ಯದಿಂದ ದೂರವಿರಬಹುದು ನಿಜ. ಆದರೆ ನಿತ್ಯ ಸೊಪ್ಪಿನ ಸೇವನೆ ಹೇಗೆ ಗೊಂದಲ ಉಂಟಾಗುವುದು ಸಹಜ.ಸೊಪ್ಪನ್ನು ನಾವು ಮಾಡುವ ವಿವಿಧ ಆಡುಗೆಗಳಿಗೆ ವಿಭಿನ್ನ ಶೈಲಿಯಲ್ಲಿ ಬಳಸುವುದರಿಂದ ಸೊಪ್ಪು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮ ದೇಹ ಸೇರುತ್ತದೆ.

Methi Missi Roti Recipe
ಆಸ್ತಮಾ, ಬ್ರಾಂಕೈಟಿಸ್ ಮತ್ತು ಅಜೀರ್ಣಕ್ಕೆ ಹೆಚ್ಚು ಪ್ರಯೋಜನಕಾರಿಯಾದ ಮೆಂತ್ಯ ಸೊಪ್ಪನ್ನು ನಾವು ಮಾಡುವ ಬೆಳಗಿನ ಉಪಹಾರ ರೆಸಿಪಿಯಲ್ಲಿ ಹೇಗೆ ಬೆರೆಸಬಹುದು ಗೊತ್ತೆ?. ಪಂಜಾಬ್‌ನ ಜನಪ್ರಿಯ ಪಾಕವಿಧಾನ ಮೆಂತ್ಯ ಮಿಸ್ಸಿ ರೊಟ್ಟಿ ಅತ್ಯುತ್ತಮ ಆರೋಗ್ಯಕರ ರೆಸಿಪಿ ಆಗಿದೆ. ಇದನ್ನು ಗೋಧಿ ಹಿಟ್ಟು ಮತ್ತು ತಾಜಾ ಮೆಂತ್ಯ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಮೆಂತ್ಯ ಮಿಸ್ಸಿ ರೋಟಿ ತಯಾರಿಸುವ ವಿಧಾನ ಹೇಗೆ ಮಂದೆ ತಿಳಿಸಿದ್ದೇವೆ:
Methi Missi Roti Recipe/ಮೆಂತ್ಯ ಮಿಸ್ಸಿ ರೊಟ್ಟಿ
Methi Missi Roti Recipe/ಮೆಂತ್ಯ ಮಿಸ್ಸಿ ರೊಟ್ಟಿ
Prep Time
15 Mins
Cook Time
15M
Total Time
30 Mins

Recipe By: Boldsky

Recipe Type: Breakfast

Serves: 4

Ingredients
  • ಬೇಕಾಗುವ ಪದಾರ್ಥಗಳು

    ನುಣ್ಣಗೆ ಕತ್ತರಿಸಿದ ತಾಜಾ ಮೆಂತ್ಯ ಎಲೆಗಳು- 1 ಕಪ್

    ಗೋಧಿ ಹಿಟ್ಟು- 2 ಕಪ್

    ಕಡಲೆ ಹಿಟ್ಟು - 1 ಕಪ್

    ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ- 1

    ನುಣ್ಣಗೆ ಕತ್ತರಿಸಿದ ಈರುಳ್ಳಿ- 1

    ಅಜ್ವಾನ- ಅರ್ಧ ಚಮಚ

    ಕೆಂಪು ಮೆಣಸಿನ ಪುಡಿ- ½ ಚಮಚ

    ಉಪ್ಪು- ರುಚಿಗೆ ತಕ್ಕಷ್ಟು

    ನೀರು- ½ ಕಪ್

    ಎಣ್ಣೆ ಅಥವಾ ತುಪ್ಪ- 3 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ

    ಒಂದು ಅಗಲವಾದ ಪಾತ್ರೆಗೆ ಗೋಧಿ ಹಿಟ್ಟು, ಕಡಲೆ ಹಿಟ್ಟು , ಉಪ್ಪು, ಮೆಂತ್ಯ ಸೊಪ್ಪು, ಮೆಣಸಿನಕಾಯಿ, ಈರುಳ್ಳಿ, ಅಜ್ವಾನ ಬೀಜಗಳು, ಕೆಂಪು ಮೆಣಸಿನ ಪುಡಿ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.

    ಅಗತ್ಯವಿರುವಷ್ಟು ನೀರು ಸೇರಿಸಿ. ಮೆಂತ್ಯ ಎಲೆಗಳು ಸಹ ನೀರನ್ನು ಬಿಡುಗಡೆ ಮಾಡುವುದರಿಂದ ಕಡಿಮೆ ನೀರನ್ನು ಸೇರಿಸಿ.

    ಮಿಶ್ರಣವನ್ನು ಅರೆ ಮೃದುವಾದ ಹಿಟ್ಟಿನಲ್ಲಿ ಬೆರೆಸಿಕೊಳ್ಳಿ.

    ಈ ಹಿಟ್ಟಿನಿಂದ ಮಧ್ಯಮ ಗಾತ್ರದ ಚೆಂಡುಗಳನ್ನು ಮಾಡಿ.

    ಚೆಂಡುಗಳನ್ನು ತೆಳುವಾದ ಚಪಾತಿಗಳಾಗಿ ಲಟ್ಟಿಸಿಕೊಳ್ಳಿ.

    ತವಾವನ್ನು ಬಿಸಿ ಮಾಡಿ ಮತ್ತು ಒಸೆದ ಚಪಾತಿಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಫ್ರೈ ಮಾಡಿ.

    ಎರಡೂ ಬದಿಗಳಲ್ಲಿಚೆನ್ನಾಗಿ ಹದವಾಗಿ ಬೇಯಿಸಿ ನಂತರ ಅದನ್ನು ತಟ್ಟೆಗೆ ವರ್ಗಾಯಿಸಿ.

    ಮೆಂತ್ಯ ಮಿಸ್ಸಿ ರೊಟ್ಟಿ ಬಡಿಸಲು ಸಿದ್ಧವಾಗಿದೆ. ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಇದನ್ನು ಸವಿಯಬಹುದು ಬಡಿಸಿ.

Instructions
  • ಈ ಖಾದ್ಯವು ಪೌಷ್ಠಿಕಾಂಶಯುಕ್ದಿಂಯವಾಗಿದೆ. ಮೆಂತ್ಯ ಸೊಪ್ಪಿನ ಬದಲಾಗಿ ಪಾಲಕನ್ನು ಅದಕ್ಕೆ ಸೇರಿಸುವ ಮೂಲಕ ಮತ್ತಷ್ಟು ಪ್ರಯೋಗಿಸಬಹುದು.
Nutritional Information
[ 5 of 5 - 90 Users]
Story first published: Wednesday, July 7, 2021, 20:30 [IST]
X
Desktop Bottom Promotion