For Quick Alerts
ALLOW NOTIFICATIONS  
For Daily Alerts

ನವರಾತ್ರಿ ವಿಶೇಷ: ಗುಲ್ಪಾವೇಟೆ ರೆಸಿಪಿ

Posted By: Divya Pandith
|

ಗುಲ್ಪಾವೇಟೆ ಒಂದು ಕರ್ನಾಕದ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಹೆಚ್ಚಾಗಿ ಹಬ್ಬ ಹರಿದಿನ ಹಾಗೂ ಉತ್ಸವದ ಸಂದರ್ಭದಲ್ಲಿ ತಯಾರಿಸುತ್ತಾರೆ. ಸಿಹಿ ತಿನಿಸಾದ ಇದನ್ನು ಗೋಧಿ ಹಿಟ್ಟು, ಬೆಲ್ಲದ ಪಾಕ, ತೆಂಗಿನ ತುರಿ ಮತ್ತು ಏಲಕ್ಕಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದಕ್ಕೆ ಬೆರೆಸುವ ತೆಂಗಿನ ತುರಿ ಮತ್ತು ಏಲಕ್ಕಿಯು ಗಲ್ಪಾವೇಟೆಯ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತವೆ.

ಕೆಲಸದ ಒತ್ತಡ ಅಥವಾ ಅನಿರೀಕ್ಷಿತ ಅತಿಥಿಗಳ ಆಗಮನಕ್ಕೂ ಈ ಸಿಹಿಯನ್ನು ಸರಳ ಹಾಗೂ ಸುಲಭವಾಗಿ ತಯಾರಿಸಬಹುದು. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಸಿಹಿ ನಿಮ್ಮ ಬಾಯಿರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಚಿರೋಟಿ ರವೆಯಿಂದಲೂ ತಯಾರಿಸಬಹುದು. ಆದರೆ ನಾವಿಲ್ಲಿ ಗೋಧಿ ಹಿಟ್ಟನ್ನು ಬಳಸಿದ್ದೇವೆ. ನಿಮಗೂ ಈ ಸಿಹಿ ತಿಂಡಿಯ ಪಾಕವಿಧಾನವನ್ನು ತಿಳಿದುಕೊಳ್ಳಬೇಕೆಂದಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಗಮನಿಸಿ.

gulpavate recipe
ಗುಲ್ಪಾವೇಟೆ ರೆಸಿಪಿ| ಗೋಧಿ ಹಿಟ್ಟಿನ ಗುಲ್ಪಾವೇಟೆ ರೆಸಿಪಿ ಮಾಡುವುದು ಹೇಗೆ| ಹಿಟ್ಟು ಮತ್ತು ಬೆಲ್ಲದ ಲಡ್ಡೂ ರೆಸಿಪಿ| ಗುಲ್ಪಾವೇಟೆ ಉಂಡೆ ರೆಸಿಪಿ
ಗುಲ್ಪಾವೇಟೆ ರೆಸಿಪಿ| ಗೋಧಿ ಹಿಟ್ಟಿನ ಗುಲ್ಪಾವೇಟೆ ರೆಸಿಪಿ ಮಾಡುವುದು ಹೇಗೆ| ಹಿಟ್ಟು ಮತ್ತು ಬೆಲ್ಲದ ಲಡ್ಡೂ ರೆಸಿಪಿ| ಗುಲ್ಪಾವೇಟೆ ಉಂಡೆ ರೆಸಿಪಿ
Prep Time
5 Mins
Cook Time
20M
Total Time
25 Mins

Recipe By: ಸುಮಾ ಜಯಂತ್

Recipe Type: ಸಿಹಿ ತಿಂಡಿ

Serves: 15 ಗುಲ್ಪಾವೇಟೆ

Ingredients
  • ತುಪ್ಪ - 9 ಟೇಬಲ್ ಚಮಚ+ ಅಲಂಕಾರಕ್ಕೆ

    ಗೋಧಿ ಹಿಟ್ಟು - 1 ಬೌಲ್

    ಬೆಲ್ಲ - 3/4 ಬೌಲ್

    ನೀರು - 1, 1/4 ಕಪ್

    ತೆಂಗಿನ ತುರಿ - 1/2 ಕಪ್

    ಏಲಕ್ಕಿ ಪುಡಿ - 2, 1/2 ಟೀ ಚಮಚ

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ 3 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

    2. ಗೋಧಿ ಹಿಟ್ಟನ್ನು ಸೇರಿಸಿ.

    3. ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಅದರ ಬಣ್ಣವು ತಿಳಿ ಹೊಂಬಣ್ಣಕ್ಕೆ ತಿರುಗಬೇಕು.

    4. ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, ಒಂದೆಡೆ ಇಡಿ.

    5. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಬಿಸಿ ಮಾಡಿ.

    6. ತಕ್ಷಣವೇ ನೀರನ್ನು ಸೇರಿಸಿ, ತಳಹಿಡಿಯುವುದನ್ನು ತಪ್ಪಿಸಿ.

    7. ಬೆಲ್ಲವನ್ನು ಕರಗಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ.

    8. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.

    9. ಹುರಿದುಕೊಂಡ ಹಿಟ್ಟನ್ನು ಸೇರಿಸಿ ಮತ್ತು ಒಲೆಯ ಬೆಂಕಿಯನ್ನು ಆರಿಸಿ.

    10. ಚೆನ್ನಾಗಿ ಮಿಶ್ರಗೊಳಿಸಿ ಒಂದು ಮುದ್ದೆಯ ಹದಕ್ಕೆ ತನ್ನಿ.

    11. ತೆಂಗಿನ ತುರಿಯನ್ನು ಸೇರಿಸಿ.

    12. ನಂತರ 3 ಟೇಬಲ್ ಚಮಚ ತುಪ್ಪವನ್ನು ಮತ್ತೆ ಸೇರಿಸಿ.

    13. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    14. ನಿಮ್ಮ ಅಂಗೈಗೆ ತುಪ್ಪವನ್ನು ಸವರಿಕೊಳ್ಳಿ.

    15. ನಿಮ್ಮ ಅಂಗೈನಿಂದ ಮಿಶ್ರಣವನ್ನು ನಾದಿ.

    16. ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಉಂಡೆಯನ್ನು ಮಾಡಿ.

    17. ಒಂದು ಪ್ಲೇಟ್‍ನಲ್ಲಿ ಹಾಕಿ, ಸವಿಯಲು ನೀಡಿ.

Instructions
  • 1. ತೆಂಗಿನ ತುರಿಯ ಬದಲು ನುಣ್ಣಗೆ ಹೆಚ್ಚಿಕೊಂಡ ತೆಂಗಿನಕಾಯನ್ನು ಬಳಸಬಹುದು.
  • 2. ಉಂಡೆ/ಲಡ್ಡೂ ಕಟ್ಟುವಾಗ ಮಿಶ್ರಣವು ಬೆಚ್ಚಗೆ ಇರಬೇಕು.
Nutritional Information
  • ಸರ್ವಿಂಗ್ ಸೈಜ್ - 1 ಗುಲ್ಪಾವೇಟೆ
  • ಕ್ಯಾಲೋರಿ - 296 ಕ್ಯಾಲ್
  • ಫ್ಯಾಟ್ - 5.5 ಗ್ರಾಂ.
  • ಪ್ರೋಟೀನ್ - 5 ಗ್ರಾಂ.
  • ಕಾರ್ಬೋಹೈಡ್ರೇಟ್ - 46 ಗ್ರಾಂ.
  • ಸಕ್ಕರೆ - 13.1 ಗ್ರಾಂ.
  • ಫೈಬರ್ - 4 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ:

1. ಒಂದು ಪಾತ್ರೆಯಲ್ಲಿ 3 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

gulpavate recipe

2. ಗೋಧಿ ಹಿಟ್ಟನ್ನು ಸೇರಿಸಿ.

gulpavate recipe

3. ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಅದರ ಬಣ್ಣವು ತಿಳಿ ಹೊಂಬಣ್ಣಕ್ಕೆ ತಿರುಗಬೇಕು.

gulpavate recipe

4. ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, ಒಂದೆಡೆ ಇಡಿ.

gulpavate recipe

5. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಬಿಸಿ ಮಾಡಿ.

gulpavate recipe

6. ತಕ್ಷಣವೇ ನೀರನ್ನು ಸೇರಿಸಿ, ತಳಹಿಡಿಯುವುದನ್ನು ತಪ್ಪಿಸಿ.

gulpavate recipe

7. ಬೆಲ್ಲವನ್ನು ಕರಗಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ.

gulpavate recipe

8. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.

gulpavate recipe

9. ಹುರಿದುಕೊಂಡ ಹಿಟ್ಟನ್ನು ಸೇರಿಸಿ ಮತ್ತು ಒಲೆಯ ಬೆಂಕಿಯನ್ನು ಆರಿಸಿ.

gulpavate recipe

10. ಚೆನ್ನಾಗಿ ಮಿಶ್ರಗೊಳಿಸಿ ಒಂದು ಮುದ್ದೆಯ ಹದಕ್ಕೆ ತನ್ನಿ.

gulpavate recipe

11. ತೆಂಗಿನ ತುರಿಯನ್ನು ಸೇರಿಸಿ.

gulpavate recipe

12. ನಂತರ 3 ಟೇಬಲ್ ಚಮಚ ತುಪ್ಪವನ್ನು ಮತ್ತೆ ಸೇರಿಸಿ.

gulpavate recipe

13. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

gulpavate recipe
gulpavate recipe

14. ನಿಮ್ಮ ಅಂಗೈಗೆ ತುಪ್ಪವನ್ನು ಸವರಿಕೊಳ್ಳಿ.

gulpavate recipe

15. ನಿಮ್ಮ ಅಂಗೈನಿಂದ ಮಿಶ್ರಣವನ್ನು ನಾದಿ.

gulpavate recipe

16. ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಉಂಡೆಯನ್ನು ಮಾಡಿ.

gulpavate recipe

17. ಒಂದು ಪ್ಲೇಟ್‍ನಲ್ಲಿ ಹಾಕಿ, ಸವಿಯಲು ನೀಡಿ.

gulpavate recipe
[ 5 of 5 - 64 Users]
X
Desktop Bottom Promotion