For Quick Alerts
ALLOW NOTIFICATIONS  
For Daily Alerts

ಅವರೆಕಾಯಿ ಪಲ್ಯ ರೆಸಿಪಿ

Posted By: Divya pandit Pandit
|

ಪಲ್ಯ, ಸಾಂಬಾರ್, ಕುರುಕುರೆ ತಿನಿಸುಗಳ ತಯಾರಿಸಲು ಅತ್ಯುತ್ತಮ ಕಾಳು ಎಂಬ ಹೆಗ್ಗಳಿಕೆ ಪಡೆದುಕೊಂಡಿರುವುದು ಅವರೆಕಾಳು. ಅವರೆಕಾಳು ಬೀನ್ಸ್ ರೂಪದಲ್ಲಿದ್ದು, ಅದರ ಬಳಕೆಗಾಗಿ ಸೂಸುವುದು ಅಥವಾ ಬಿಡಿಸುವುದು ಎಂದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಅದರಿಂದ ತಯಾರಿಸಿದ ತಿನಿಸು ಹಾಗೂ ಆಹಾರ ಪದಾರ್ಥಗಳು ಬಹಳ ರುಚಿಕರವಾಗಿರುತ್ತವೆ. ಕರ್ನಾಕದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಅವರೆಕಾಯಿಯ ಪದಾರ್ಥಗಳನ್ನು ತಯಾರಿಸುತ್ತಾರೆ. ಅದರಲ್ಲಿ ಅವರೆಕಾಯಿ ಪಲ್ಯವು ವಿಶೇಷವಾದದ್ದು. ಅವರೆಕಾಯಿ ಬೆಳೆಯುವ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲೂ ವಿವಿಧ ಬಗೆಯಿಂದ ಕೂಡಿರುವ ಅವರೆಕಾಳಿನ ಅಡುಗೆ ಮಾಡುತ್ತಾರೆ.

ಅಧಿಕ ಪೋಷಕಾಂಶವನ್ನು ಹೊಳಗೊಂಡಿರುವ ಅವರೆಕಾಯಿ ಸಮೃದ್ಧವಾದ ವಿಟಮಿನ್‍ಗಳನ್ನು ಒಳಗೊಂಡಿರುತ್ತದೆ. ಅವರೆಕಾಯಿಯೊಂದಿಗೆ ಆರೋಗ್ಯ ಭರಿತ ಮಸಾಲೆ ಹಾಗೂ ಕೊತ್ತಂಬರಿ ಸೊಪ್ಪುಗಳ ಬಳಕೆ ಮಾಡುವುದರ ಮೂಲಕ ಅದರ ಶಕ್ತಿ ಅಥವಾ ಪೋಷಕಾಂಶದ ಪ್ರಮಾಣವನ್ನು ದ್ವಿಗುಣಗೊಳಿಸಬಹುದು. ಸರಳ ಮತ್ತು ಸುಲಭ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಕವಿಧಾನವನ್ನು ಬೋಲ್ಡ್ ಸ್ಕೈ ಇಂದು ನಿಮಗೆ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಮೂಲಕ ತಿಳಿಸಿಕೊಡಲಿದೆ.

Avarekai palya recipe
ಸರಳ ಹಾಗೂ ತ್ವರಿತವಾಗಿ ಅವರೆಕಾಳು ಪಲ್ಯ ರೆಸಿಪಿ| ಅವರೆಕಾಳು ಪಲ್ಯ ಮಾಡುವುದು ಹೇಗೆ| ಅವರೆಕಾಳು ಪಲ್ಯ ಸ್ಟೆಪ್ ಸ್ಟೆಪ್ | ಅವರೆಕಾಳು ಪಲ್ಯ ವಿಡಿಯೋ
ಸರಳ ಹಾಗೂ ತ್ವರಿತವಾಗಿ ಅವರೆಕಾಳು ಪಲ್ಯ ರೆಸಿಪಿ| ಅವರೆಕಾಳು ಪಲ್ಯ ಮಾಡುವುದು ಹೇಗೆ| ಅವರೆಕಾಳು ಪಲ್ಯ ಸ್ಟೆಪ್ ಸ್ಟೆಪ್ | ಅವರೆಕಾಳು ಪಲ್ಯ ವಿಡಿಯೋ
Prep Time
15 Mins
Cook Time
25M
Total Time
40 Mins

Recipe By: ಕಾವ್ಯ

Recipe Type: ಪ್ರಮುಖ ಖಾದ್ಯ

Serves: 1

Ingredients
  • *ಅವರೆಕಾಯಿ ಬೀನ್ಸ್ - 1/2 ಬೌಲ್

    *ಉದ್ದಿನ ಬೇಳೆ- 1/2 ಟೇಬಲ್ ಚಮಚ

    *ಕಡ್ಲೆ ಬೇಳೆ - 1/2 ಟೇಬಲ್ ಚಮಚ

    *ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- ಒಂದು ಹಿಡಿ.

    *ಹೆಚ್ಚಿಕೊಂಡ ಟೊಮೆಟೋ- 1/2

    *ತೆಂಗಿನ ತುರಿ- 1/2 ಕಪ್

    *ಹಸಿ ಮೆಣಸು - 4-5

    *ನೀರು - 1 ಕಪ್

    *ಒಗ್ಗರಣೆಗೆ - ಎಣ್ಣೆ

    *ನಿಂಬೆ ರಸ - 1/2 ನಿಂಬೆ ಹಣ್ಣು

    *ಕರಿಬೇವು - 2 ಎಳೆಗಳು.

    *ಜೀರಿಗೆ - 1/2 ಟೇಬಲ್ ಚಮಚ

    *ಕರಿಮೆಣಸಿನ ಪುಡಿ -1/2 ಟೇಬಲ್ ಚಮಚ

    *ಸಾಸಿವೆ - 1/2 ಟೇಬಲ್ ಚಮಚ

    *ಅರಿಶಿನ -1/4 ಟೇಬಲ್ ಚಮಚ.

Red Rice Kanda Poha
How to Prepare
  • 1. ಕುಕ್ಕರ್ ತೆಗೆದುಕೊಳ್ಳಿ.

    2. 1/2 ಬೌಲ್ ಅವರೆಕಾಳನ್ನು ಸೇರಿಸಿ.

    3. 1 ಕಪ್ ನೀರನ್ನು ಸೇರಿಸಿ.

    4. 1/4 ಟೇಬಲ್ ಚಮಚ ನೀರನ್ನು ಸೇರಿಸಿ.

    5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ (3-4 ಸೀಟಿ) ಕಾಲ ಬೇಯಿಸಿ.

    6. ಮುಚ್ಚಳವನ್ನು ತೆರೆದು ನೀರನ್ನು ಬಾಗಿಸಿ ತೆಗೆಯಿರಿ.

    7. ಕಾಳನ್ನು ಒಂದು ಬೌಲ್‍ಗೆ ವರ್ಗಾಯಿಸಿ, ಸ್ವಲ್ಪ ಆರಲು ಬಿಡಿ.

    8. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.

    9. 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.

    10. ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಸಾಸಿವೆ ಕಾಳನ್ನು ಸೇರಿಸಿ, ಹುರಿಯಿರಿ.

    11. 1/2 ಟೇಬಲ್ ಚಮಚ ಜೀರಿಗೆ, ಕರಿಬೇವಿನ ಎಲೆ, ಹಸಿಮೆಣಸು, ಅರಿಶಿನ ಮತ್ತು ಟೊಮೆಟೋ ಸೇರಿಸಿ.

    12. ಮೆಣಸಿನ ಪುಡಿಯನ್ನು ಸೇರಿಸಿ.

    13. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತ, ಚೆನ್ನಾಗಿ ಮಿಶ್ರಣ ಮಾಡಿ.

    14. ಬೆಂದ ಅವರೆಕಾಯಿಯನ್ನು ಸೇರಿಸಿ.

    15. 1/2 ಕಪ್ ತೆಂಗಿನ ತುರಿಯನ್ನು ಸೇರಿಸಿ.

    16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

    17. ಕರಿಮೆಣಸಿನ ಪುಡಿಯನ್ನು ಸೇರಿಸಿ.

    18. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

    19. ನಿಂಬೆ ಹಣ್ಣಿನ ರಸವನ್ನು ಸೇರಿಸಿ.

    20. ಎಲ್ಲವನ್ನು ಸರಿಯಾಗಿ ಮಿಶ್ರಗೊಳಿಸಿ.

    21. ಬಿಸಿ ಇರುವಾಗಲೇ ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಲು ನೀಡಿ.

Instructions
  • 1. ಕೆಲವರಿಗೆ ಅತಿಯಾಗಿ ಅವರೆಕಾಯಿ ಬೇಯುವುದು ಇಷ್ಟವಾಗದು. ಹಾಗಾಗಿ ಕುಕ್ಕರ್ ಅಲ್ಲಿ ಬೇಯಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು.
  • 2. ನಿಮ್ಮ ರುಚಿಗೆ ತಕ್ಕಷ್ಟು ಮೆಣಸಿನ ಪುಡಿಯನ್ನು ಸೇರಿಸಿ. ಹೆಚ್ಚು ಖಾರ ಬೇಕಿದ್ದರೆ ಚಿಟಕಿ ಮೆಣಸಿನ ಪುಡಿಯನ್ನು ಸೇರಿಸಿ, ರುಚಿಯನ್ನು ದ್ವಿಗುಣಗೊಳಿಸಿ.
Nutritional Information
  • ಬಡಿಸುವ ಪ್ರಮಾಣ - 1 ಬೌಲ್
  • ಕ್ಯಾಲೋರಿ - 950 ಕ್ಯಾಲ್
  • ಕೊಬ್ಬು - 28 ಗ್ರಾಂ.
  • ಪ್ರೋಟೀನ್ - 31 ಗ್ರಾಂ.
  • ಕಾರ್ಬೋಹೈಡ್ರೇಟ್ - 145 ಗ್ರಾಂ
  • ಸಕ್ಕರೆ - 15 ಗ್ರಾಂ
  • ಫೈಬರ್ - 5 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ:

1. ಕುಕ್ಕರ್ ತೆಗೆದುಕೊಳ್ಳಿ.

Avarekai palya recipe

2. 1/2 ಬೌಲ್ ಅವರೆಕಾಳನ್ನು ಸೇರಿಸಿ.

Avarekai palya recipe

3. 1 ಕಪ್ ನೀರನ್ನು ಸೇರಿಸಿ.

Avarekai palya recipe

4. 1/4 ಟೇಬಲ್ ಚಮಚ ನೀರನ್ನು ಸೇರಿಸಿ.

Avarekai palya recipe

5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ (3-4 ಸೀಟಿ) ಕಾಲ ಬೇಯಿಸಿ.

Avarekai palya recipe
Avarekai palya recipe

6. ಮುಚ್ಚಳವನ್ನು ತೆರೆದು ನೀರನ್ನು ಬಾಗಿಸಿ ತೆಗೆಯಿರಿ.

Avarekai palya recipe
Avarekai palya recipe

7. ಕಾಳನ್ನು ಒಂದು ಬೌಲ್‍ಗೆ ವರ್ಗಾಯಿಸಿ, ಸ್ವಲ್ಪ ಆರಲು ಬಿಡಿ.

Avarekai palya recipe

8. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.

Avarekai palya recipe

9. 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.

Avarekai palya recipe

10. ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಸಾಸಿವೆ ಕಾಳನ್ನು ಸೇರಿಸಿ, ಹುರಿಯಿರಿ.

Avarekai palya recipe
Avarekai palya recipe
Avarekai palya recipe

11. 1/2 ಟೇಬಲ್ ಚಮಚ ಜೀರಿಗೆ, ಕರಿಬೇವಿನ ಎಲೆ, ಹಸಿಮೆಣಸು, ಅರಿಶಿನ ಮತ್ತು ಟೊಮೆಟೋ ಸೇರಿಸಿ.

Avarekai palya recipe
Avarekai palya recipe
Avarekai palya recipe
Avarekai palya recipe
Avarekai palya recipe

12. ಮೆಣಸಿನ ಪುಡಿಯನ್ನು ಸೇರಿಸಿ.

Avarekai palya recipe

13. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತ, ಚೆನ್ನಾಗಿ ಮಿಶ್ರಣ ಮಾಡಿ.

Avarekai palya recipe
Avarekai palya recipe

14. ಬೆಂದ ಅವರೆಕಾಯಿಯನ್ನು ಸೇರಿಸಿ.

Avarekai palya recipe

15. 1/2 ಕಪ್ ತೆಂಗಿನ ತುರಿಯನ್ನು ಸೇರಿಸಿ.

Avarekai palya recipe

16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

Avarekai palya recipe

17. ಕರಿಮೆಣಸಿನ ಪುಡಿಯನ್ನು ಸೇರಿಸಿ.

Avarekai palya recipe

18. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

Avarekai palya recipe

19. ನಿಂಬೆ ಹಣ್ಣಿನ ರಸವನ್ನು ಸೇರಿಸಿ.

Avarekai palya recipe

20. ಎಲ್ಲವನ್ನು ಸರಿಯಾಗಿ ಮಿಶ್ರಗೊಳಿಸಿ.

Avarekai palya recipe

21. ಬಿಸಿ ಇರುವಾಗಲೇ ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಲು ನೀಡಿ.

Avarekai palya recipe
Avarekai palya recipe
Avarekai palya recipe
Avarekai palya recipe
[ 5 of 5 - 107 Users]
X
Desktop Bottom Promotion