For Quick Alerts
ALLOW NOTIFICATIONS  
For Daily Alerts

ಬಿಸಿಲಿನ ದಾಹಕ್ಕೆ-ತಂಪು ತಂಪು ಪುದೀನಾ ಮಸಾಲ ಮಜ್ಜಿಗೆ

By
|

ಬೇಸಿಗೆಯ ಜೊತೆಗೇ ಮಕ್ಕಳ ಪರೀಕ್ಷೆ ಮತ್ತು ರಜೆಗಳೂ ಸಾಲಾಗಿ ಬಂದಿವೆ. ನಿಧಾನಕ್ಕೆ ಕೆಲವು ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಹೊತ್ತಿನಲ್ಲಿ ಹೊರಹೋಗದೇ ಮಳೆ ಬಂದಾಗ ಹೋಗಲಿಕ್ಕಾಗುತ್ತದೆಯೇ? ಆದರೆ ಸೆಖೆಗೆ ಏನು ಮಾಡುವುದು? ಇದಕ್ಕೆ ಏಸಿಯಲ್ಲಿ ಕುಳಿತುಕೊಳ್ಳುವುದು. ಆದರೆ ಇದರಿಂದ ಹೊರ ಹೋದಂತಾಗುವುದಿಲ್ಲವಲ್ಲ! ಇನ್ನೊಂದು ಪರ್ಯಾಯವೆಂದರೆ ಐಸ್ ಕ್ರೀಂ ತಿನ್ನುವುದು, ಇದರಿಂದ ತೂಕ ಹೆಚ್ಚಾಗುತ್ತದಲ್ಲ! ಎಲ್ಲವೂ ನೋಡಬೇಕೆಂದರೆ ತಣ್ಣನೆಯ ಮಜ್ಜಿಗೆ ಕುಡಿಯುವುದೇ ಉತ್ತಮ. ಆದರೆ ಇದಕ್ಕಿಂತಲೂ ಉತ್ತಮವಾದ ಪೇಯವೊಂದಿದೆ. ಇದೇ ಪುದೀನಾ ಮಸಾಲಾ ಮಜ್ಜಿಗೆ.

ಬಿಸಿಲಿಗೆ ಏರಿದ್ದ ತಾಪವನ್ನು ತಣಿಸಿ ದೇಹವನ್ನು ಬಿಸಿಲಿನಲ್ಲಿಯೂ ಲವವಲಿಕೆಯಿಂಡುವ ಕ್ಷಮತೆಯೇ ಇದರ ನಿಜವಾದ ಶಕ್ತಿ. ಇದಕ್ಕೆ ಹೆಚ್ಚೇನೂ ಅಗತ್ಯವಿಲ್ಲ, ಕೊಂಚ ಮೊಸರು, ಕೊಂಚ ಪುದಿನಾ ಎಲೆಗಳು ಮತ್ತು ಕೊಂಚ ಕೊತ್ತಂಬರಿ ಸೊಪ್ಪು, ಉಪ್ಪು, ಆಮ್ಚೂರ್, ಹಸಿಮೆಣಸು, ಕಾಳುಮೆಣಸು ಅಷ್ಟೇ. ಪೋಷಕಾಂಶಗಳ ಆಗರವಾಗಿರುವ ಪುದೀನಾ ಮತ್ತು ಮೊಸರಿನ ಮೂಲಕ ಈ ಪೇಯವೂ ಅತಿ ಸಮೃದ್ಧ ಪೋಷಕಾಂಶಭರಿತ ಪೇಯವಾಗುತ್ತದೆ. ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ

ವಿಶೇಷವಾಗಿ ಬೇಸಿಗೆಗೆ ಈ ಪೇಯ ಹೇಳಿ ಮಾಡಿಸಿದಂತಿದ್ದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಹೆಚ್ಚು ಕಾಲ ಬಿಸಿಲಿನಲ್ಲಿರುವ ವೇಳೆ ಇದನ್ನು ಸೇವಿಸಿ ಹೊರಡುವ ಮೂಲಕ, ಸಾಧ್ಯವಾದರೆ ಫ್ಲಾಸ್ಕ್ ನಲ್ಲಿ ಕೊಂಡು ಹೋಗಿ ಆಗಾಗ ಕುಡಿಯುವ ಮೂಲಕ ಬಿಸಿಲಿನ ಝಳಕ್ಕೆ ತಲೆತಿರುಗಿ ಬೀಳುವ ಸಂಭವ ಅಪಾರವಾಗಿ ಕಡಿಮೆಯಾಗುತ್ತದೆ.

The Coolest Drink Ever! Pudina And Masala Chaas

ಅಷ್ಟೇ ಅಲ್ಲ, ಇದರಲ್ಲಿರುವ ಪುದೀನಾ ರುಚಿಯನ್ನು ಹೆಚ್ಚಿಸುವ ಜೊತೆಗೇ ಜೀರ್ಣಕ್ರಿಯೆಯಲ್ಲಿಯೂ ಸಹಕರಿಸುತ್ತದೆ. ಅಲ್ಲದೇ ಬಿಸಿಲಿನ ತಾಪಕ್ಕೆ ದಣಿದ ದೇಹದ ಕಾರಣ ನೋವು ಕಾಣಿಸಿಕೊಳ್ಳುವ ಸಂಭವವೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಕೆಲವು ಪೋಷಕಾಂಶಗಳು ಮೆದುಳಿಗೆ ಆಹ್ಲಾದಕರ ಅನುಭವ ನೀಡುವ ಮೂಲಕ ದಿನವಿಡೀ ಉಲ್ಲಾಸಕರವಾಗಿರಲು ನೆರವಾಗುತ್ತದೆ. ಬರೆಯ ಬೇಸಿಗೆಗೆ ಮಾತ್ರವಲ್ಲ, ಇಡಿಯ ವರ್ಷವೂ ಈ ಪೇಯವನ್ನು ನಿತ್ಯವೂ ಸೇವಿಸಿದರೆ ಆರೋಗ್ಯವೂ ವೃದ್ಧಿಸುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ಮಾಡುವುದು ಹೇಗೆ ಎಂದು ನೋಡೋಣ:

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹತ್ತು ನಿಮಿಷಗಳು

*ತಯಾರಿಕೆಗೆ ಸಮಯ: ಹತ್ತು ನಿಮಿಷಗಳು ವಾವ್..ದೇಹಕ್ಕೆ ತಂಪುಣಿಸುವ ಮಜ್ಜಿಗೆ ಸಾ೦ಬಾರ್ ರೆಸಿಪಿ!

ಅಗತ್ಯವಿರುವ ಸಾಮಾಗ್ರಿಗಳು:

*ಪುದೀನಾ ಎಲೆಗಳು: ಒಂದು ಕಪ್

*ಮೊಸರು: ಕಾಲು ಲೀಟರ್

*ಕೊತ್ತಂಬರಿ ಸೊಪ್ಪು - 1/2 ಕಪ್ (ಬರೆಯ ಎಲೆಗಳಾದರೆ ಉತ್ತಮ. ಸಮಯವಿಲ್ಲದಿದ್ದಲ್ಲಿ ಮಾತ್ರ ದಂಟಿನೊಂದಿಗೇ ಕತ್ತರಿಸಬಹುದು)

ಹಸಿಮೆಣಸು - 2

*ಮಾವಿನ ಪುಡಿ (ಅಥವಾ ಆಮ್ ಚೂರ್ ಪುಡಿ ) - 1/4ಚಿಕ್ಕ ಚಮಚ

*ಕಾಳುಮೆಣಸಿನ ಪುಡಿ - 1/4ಚಿಕ್ಕ ಚಮಚ

*ಉಪ್ಪು ರುಚಿಗನುಸಾರ

ವಿಧಾನ:

1) ಮೊದಲು ಪುದೀನಾ ಮತ್ತು ಕೊತ್ತಂಬರಿ ಎಲೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯ ದೊಡ್ಡ ಜಾರಿನಲ್ಲಿ ಹಾಕಿ.

2) ಇದಕ್ಕೆ ಮೊಸರು ಸೇರಿಸಿ, ಹಸಿಮೆಣಸು, ಆಮ್ಚೂರ್ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ.

3) ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ಈಗ ಟೀ ಸೋಸುವ ಸೋಸುಕ ಬಳಸಿ ಸೋಸಿ.

4) ಜಗ್ ಒಂದರಲ್ಲಿ ದ್ರವವನ್ನು ಸಂಗ್ರಹಿಸಿ. ತಕ್ಷಣವೇ ಸೇವಿಸಬೇಕಾದರೆ ಐಸ್ ತುಂಡುಗಳನ್ನು ಸೇರಿಸಬಹುದು, ಆದರೆ ಐಸ್ ಇಲ್ಲದೇ ಕುಡಿಯುವುದೇ ಹೆಚ್ಚು ರುಚಿಕರ ಎಂದು ಹೆಚ್ಚಿನವರು ಭಾವಿಸುತ್ತಾರೆ.

4) ಬಳಿಕ ಸೇವಿಸುವುದಾದರೆ ಫ್ರಿಜ್ಜಿನಲ್ಲಿಟ್ಟು ಬಿಸಿಲಿನಿಂದ ಬಂದ ಬಳಿಕ ಕುಡಿಯಬಹುದು. ಈ ಪೇಯ ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕೆ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

English summary

The Coolest Drink Ever! Pudina And Masala Chaas

The temperature is getting worse these days. The air conditioners or the cold water is just not enough to cool down your body. So, the only way to beat the heat this summer is through the consumption of some masala curd and pudina drink. This is one amazing drink that helps to decrease the body heat and keeps your body cool. So, read on to know the best summer drink, the Pudina Masala Curd drink.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X