For Quick Alerts
ALLOW NOTIFICATIONS  
For Daily Alerts

ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....

By Arshad
|

ಬಿಸಿಲಿನಲ್ಲಿ ಬಸವಳಿದಾಗ, ಸೆಖೆ ತಾಳದಾದಾಗ, ಆಟ ಅಥವಾ ಇತರ ಚಟುವಟಿಕೆಯಿಂದ ಶರೀರ ಬಸವಳಿದ ಬಳಿಕ ಕುಡಿಯಲು ಅತ್ಯುತ್ತಮವಾದ ಪೇಯವೆಂದರೆ ಮಿಲ್ಕ್ ಶೇಕ್‌. ಸಾಮಾನ್ಯವಾಗಿ ಮಿಲ್ಕ್ ಶೇಕ್ ತಯಾರಿಸಲು ಹಾಲಿನ ಜೊತೆಗೇ ಐಸ್ ಕ್ರೀಮ್ ಸಹಾ ಬಳಸುವ ಕಾರಣ ಇದು ಅತಿ ಶಕ್ತಿದಾಯಕ ಪೇಯವಾಗಿದೆ. ಸುಸ್ತಾದ ದೇಹಕ್ಕೆ ತಕ್ಷಣವೇ ಕ್ಯಾಲೋರಿಗಳನ್ನು ಒದಗಿಸಿ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಸಾಮಾನ್ಯವಾಗಿ ಈ ಪೇಯವನ್ನು ತಯಾರಿಸಲು ಕೊಂಚ ಹೆಚ್ಚಿನ ಸಮಯ ಮತ್ತು ಶ್ರಮದ ಅಗತ್ಯವಿದೆ. ಆದರೆ ಇದನ್ನು ತಯಾರಿಸಲು ಇನ್ನೊಂದು ಸುಲಭ ವಿಧಾನವಿದೆ. ಇಂದು ಕಡಿಮೆ ಸಮಯದಲ್ಲಿ ರುಚಿಕರವಾದ ವೆನಿಲ್ಲಾ ಎಸೆನ್ಸ್ ಸೇರಿಸಿದ ರುಚಿಕರ ಮಿಲ್ಕ್ ಶೇಕ್ ತಯಾರಿಸುವ ಬಗೆಯನ್ನು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ. ಐಸ್ ಕ್ರೀಮ್ ಲೆಸ್ ಚಾಕಲೇಟ್ ಮಿಲ್ಕ್ ಶೇಕ್!

ಕೆಲವರಿಗೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಇವರಿಗೆ ಹಾಲಿನ ಬದಲು ವೆನಿಲ್ಲಾ ಮಿಲ್ಕ್ ಶೇಕ್ ಒಂದು ಉತ್ತಮ ಪರ್ಯಾಯವಾಗಬಲ್ಲುದು. ಊಟದ ಬಳಿಕ ಕುಡಿಯಲೂ ಈ ಪೇಯ ಯೋಗ್ಯವಾಗಿದೆ. ವೆನಿಲ್ಲಾ ಬದಲಿಗೆ ಸ್ಟ್ರಾಬೆರಿ, ಬಾಳೆಹಣ್ಣು ಅಥವಾ ಯಾವುದೇ ಋತುಮಾನಕ್ಕೆ ಅನುಗುಣವಾದ ಹಣ್ಣು ಅಥವಾ ಫಲವನ್ನು ಬಳಸಿ ವೈವಿಧ್ಯತೆಯನ್ನು ಹೆಚ್ಚಿಸಬಹುದು. ಮಕ್ಕಳು ವಿಶೇಷವಾಗಿ ಮಾವಿನ ಹಣ್ಣಿನ, ಕಲ್ಲಂಗಡಿ ಹಣ್ಣಿನ, ಸ್ಟ್ರಾಬೆರಿ ಮಿಲ್ಕ್ ಶೇಕ್ ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

Easy And Tasty Vanilla Milkshake Recipe

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ವೆನಿಲ್ಲಾ ಎಸೆನ್ಸ್:ಅಗತ್ಯಕ್ಕೆ ತಕ್ಕಂತೆ (ಅಥವಾ ನಿಮ್ಮ ಇಷ್ಟದ ಹಣ್ಣುಗಳ ತಿರುಳು) - ಮೂರು ದೊಡ್ಡ ಚಮಚ
*ಸಕ್ಕರೆ: ನಾಲ್ಕು ಕಪ್
*ಹಾಲು : ಕಾಲು ಲೀಟರ್
*ವೆನಿಲ್ಲಾ ಐಸ್ ಕ್ರೀಂ-ಎರಡು ಕಪ್ (ಬೇರೆ ಹಣ್ಣನ್ನು ಉಪಯೋಗಿಸುವುದಾದರೆ ಸಾದಾ ಐಸ್ ಕ್ರೀಂ)
*ದಾಲ್ಚಿನ್ನಿ - ಒಂದು ಚಿಕ್ಕ ತುಂಡು
*ಏಲಕ್ಕಿ - ಎರಡು
*ಐಸ್ ಕ್ಯೂಬ್ - ಐದರಿಂದ ಆರು (ಅಗತ್ಯವಿದ್ದರೆ ಮಾತ್ರ)

ವಿಧಾನ:
1) ಮಿಕ್ಸಿಯ ದೊಡ್ಡ ಜಾರ್ ನಲ್ಲಿ ಹಾಲು, ವನಿಲ್ಲಾ ಐಸ್ ಕ್ರೀಂ, ಸಕ್ಕರೆ ಹಾಕಿ ಗೊಟಾಯಿಸಿ.
2) ಬಳಿಕ ದಾಲ್ಚಿನ್ನಿ, ಏಲಕ್ಕಿ, ವೆನಿಲ್ಲಾ ಎಸೆನ್ಸ್ ಅಥವಾ ಹಣ್ಣಿನ ತಿರುಳು, ಐಸ್ ಕ್ಯೂಬ್ ಗಳನ್ನು ಹಾಕಿ ಗೊಟಾಯಿಸಿ. (ಐಸ್ ಬೇಡವೆನಿಸಿದರೆ ಅಗತ್ಯವಿಲ್ಲ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಬಹುದು)
3) ಬಳಿಕ ಲೋಟಗಳಲ್ಲಿ ಸುರಿದು ಮಕ್ಕಳಿಗೆ ಕುಡಿಯಲು ನೀಡಿ. ಬಳಿಕ ಕುಡಿಯುವುದಾದರೆ ಫ್ರಿಜ್ಜಿನಲ್ಲಿಟ್ಟು ತಣ್ಣಗಾಗಿಸಿಯೂ ಕುಡಿಯಬಹುದು. ಈ ವಿಧಾನ ಹೇಗೆನಿಸಿತು ಎಂದು ನಮಗೆ ಖಂಡಿತಾ ತಿಳಿಸಿ.

English summary

Easy And Tasty Vanilla Milkshake Recipe

When you want to stay refreshed and relaxed, the best thing is to have a milkshake. Milkshake that is generally prepared with ice creams or milk cream is rich in calories and also gives you an instant energy. So, today at Boldsky we shall share with you an easy vanilla milkshake recipe
Story first published: Tuesday, January 5, 2016, 19:31 [IST]
X
Desktop Bottom Promotion