For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ಖರ್ಜೂರ ಕಾಫಿ ಮಿಲ್ಕ್ ಶೇಕ್ ರೆಸಿಪಿ

By Jaya Subramanya
|

ಮಿಲ್ಕ್ ಶೇಕ್‌ಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಹಾಲಿನೊಂದಿಗೆ ಕ್ರೀಮ್ ಅನ್ನು ಬೆರೆಸಿ ಮಾಡುವ ಶೇಕ್‌ಗಳು ಇತರ ಜ್ಯೂಸ್‌ಗಳಿಗಿಂತಲೂ ಆಹ್ಲಾದಮಯವಾಗಿರುತ್ತದೆ ಮತ್ತು ದುಪ್ಪಟ್ಟು ರುಚಿಯನ್ನು ಹೊಂದಿರುತ್ತದೆ. ಬರಿಯ ಹಣ್ಣುಗಳಿಂದ ಮಾತ್ರವಲ್ಲದೆ ಕಾಫಿಯಿಂದ ಕೂಡ ಮಿಲ್ಕ್ ಶೇಕ್ ಅನ್ನು ಹೇಗೆ ಮಾಡುವುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಕಾಫಿ ಮಿಲ್ಕ್ ಶೇಕ್‌ನಲ್ಲಿ ನೀವು ಖರ್ಜೂರದ ಸವಿಯನ್ನು ಸವಿಯಬಹುದಾಗಿದೆ. ಕಾಫಿಯೊಂದಿಗೆ ಖರ್ಜೂರವನ್ನು ಮಿಶ್ರ ಮಾಡಿ ಈ ಮಿಲ್ಕ್ ಶೇಕ್ ಅನ್ನು ನಾವಿಲ್ಲಿ ತಯಾರಿಸುತ್ತಿದ್ದೇವೆ. ಇನ್ನು ಮಕ್ಕಳಿಗೆ ನೀವು ಈ ಮಿಲ್ಕ್ ಶೇಕ್ ಅನ್ನು ತಯಾರಿಸುತ್ತಿದ್ದೀರಿ ಎಂದಾದಲ್ಲಿ ಕಾಫಿ ಪೌಡರ್ ಅನ್ನು ಕಡಿಮೆ ಹಾಕಿ ಮತ್ತು ಹಾಲಿನ ಪ್ರಮಾಣವನ್ನು ಹೆಚ್ಚಿಸಿ. ಇದರಿಂದ ಮಕ್ಕಳೂ ಕೂಡ ಸಂತಸಗೊಳ್ಳುತ್ತಾರೆ. ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....

ಪ್ರಮಾಣ - 2 ಗ್ಲಾಸ್‌ಗಳು
*ಸಿದ್ಧತಾ ಸಮಯ - 5 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 12 ನಿಮಿಷಗಳು

ಸಾಮಾಗ್ರಿಗಳು
*1 ಬೀಜವಿಲ್ಲದ ಖರ್ಜೂರ - 1 ಕಪ್
*2 ತ್ವರಿತ ಕಾಫಿ ಪೌಡರ್ - 10 ಚಮಚ
*3 ಹಾಲು - 6 ಕಪ್ಸ್
*4 ಹಸಿರು ಏಲಕ್ಕಿ - 5-6
*5 ಸಕ್ಕರೆ - 3 ಚಮಚ
*6 ತಾಜಾ ಕ್ರೀಂ - 3/4 ಕಪ್
*7 ಐಸ್ ಕ್ಯೂಬ್ಸ್ ಬೇಕಾದಷ್ಟು ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

ಮಾಡುವ ವಿಧಾನ:
1. ಖರ್ಜೂರದ ಬೀಜವನ್ನು ತೆಗೆದು ಪಕ್ಕದಲ್ಲಿರಿಸಿಕೊಳ್ಳಿ. ಈಗ ಕಾಫಿ ಡಿಕಾಕ್ಶನ್ ಅನ್ನು ಸಿದ್ಧಮಾಡಿ. ಇದಕ್ಕಾಗಿ ಸ್ಟವ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿಕೊಳ್ಳಿ. ನೀರು ಮತ್ತು ಕಾಫಿ ಹುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

2.ಸಕ್ಕರೆ ಮತ್ತು ಹಸಿರು ಏಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ. ಸ್ಟವ್ ಆಫ್ ಮಾಡಿ ಮತ್ತು ಕೊಠಡಿಯ ತಾಪಮಾನಕ್ಕೆ ಅದನ್ನು ತಂದುಕೊಳ್ಳಿ.

3.ಈಗ, ಬೀಜ ರಹಿತ ಖರ್ಜೂರವನ್ನು ಸೇರಿಸಿ, ಬ್ಲೆಂಡರ್‌ಗೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಐಸ್ ಕ್ಯೂಬ್ಸ್, ಕಾಫಿ ಡಿಕಾಕ್ಷನ್, ಇನ್ನಷ್ಟು ಹಾಲು ಮತ್ತು ಸಾಕಷ್ಟು ತಾಜಾ ಕ್ರೀಂ ಅನ್ನು ಸೇರಿಸಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.

4.ಉದ್ದನೆಯ ಗ್ಲಾಸ್‌ಗೆ ಮಿಲ್ಕ್ ಶೇಕ್ ಅನ್ನು ಹಾಕಿ ಮತ್ತು ಕಾಫಿ ಡಿಕಾಕ್ಷನ್‌ನಿಂದ ಅಲಂಕರಿಸಿ. ಖರ್ಜೂರ ಮತ್ತು ಕಾಫಿ ಬೆರೆತ ಮಿಲ್ಕ್ ಶೇಕ್ ಸರ್ವ್ ಮಾಡಲು ಸಿದ್ಧವಾಗಿದೆ.

English summary

Coffee Milkshake Recipe For Parties( Christmas and New year)

When the sweetness of dates mixes with the aroma of freshly roasted coffee, you get a glass of divine. If you have a party tonight, and want to present some exotic welcome drink to your guests, you can try this preparation.You can lessen the amount of coffee and add more milk to it to balance the taste while giving it to your kids. They will love to have it and won't complain to have milk anymore.
X
Desktop Bottom Promotion