For Quick Alerts
ALLOW NOTIFICATIONS  
For Daily Alerts

ಬಿಸಿಲಿನ ದಾಹ ತಣಿಸುವ- ತಂಪು ತಂಪು ಮಜ್ಜಿಗೆ...

By Arshad
|

ಮಾರ್ಚ್ ಬಂತೆಂದರೆ ಮಕ್ಕಳ ಪರೀಕ್ಷೆಯ ಜೊತೆಗೇ ಬೇಸಿಗೆಯೂ ಕಾಲಿಡುತ್ತದೆ. ಇದುವರೆಗೆ ತಂಪಾಗಿದ್ದು ಚಳಿ ಅನ್ನಿಸುತ್ತಿದ್ದ ದಿನಗಳೆಲ್ಲಾ ಭಗ ಭಗ ಎನಿಸಲಿವೆ. ಹಗಲಿನ ತಾಪಮಾನ ಏರುತ್ತಿದ್ದಂತೆಯೇ ಸುಡುವ ಬಿಸಿಲು, ಬೆವರು, ಧೂಳು ಎಲ್ಲವೂ ಬಿಸಿಲಿನಲ್ಲಿ ಹೊರಗೆ ನಡೆಯುವುದನ್ನು ತ್ರಾಸದಾಯಕವಾಗಿಸುತ್ತವೆ. ಈ ಕ್ಷಣಕ್ಕೆ ತಂಪಾದ ಐಸ್ ಕ್ರೀಂ, ಲಸ್ಸಿ, ಬುರುಗು ಬರುವ ತಂಪುಪಾನೀಯ ಮೊದಲಾದವುಗಳ ಮಾರಾಟ ಗಗನಕ್ಕೇರುತ್ತದೆ.

ಅದರಲ್ಲೂ ಫ್ರಿಜ್ಜಿನಲ್ಲಿಟ್ಟಿದ್ದ ಅತಿ ತಂಪಾದ ಅಂದರೆ ಚಿಲ್ಡ್ ಎಂದು ಸರಿಸುಮಾರು ಮಂಜುಗಡ್ಡೆಯಾಗುವಷ್ಟು ತಣ್ಣಗಾಗಿಸಿದ ಸೋಡಾ ಆಧಾರಿತ ಲಘು ಪಾನೀಯಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ ಐಸ್ ಕ್ರೀಂ ಲಸ್ಸಿಗಳು ಅಗತ್ಯಕ್ಕೂ ಹೆಚ್ಚಿನ ಕ್ಯಾಲೋರಿ, ಕೊಬ್ಬುಗಳನ್ನು ನೀಡುವ ಮೂಲಕ ಆರೋಗ್ಯ ಕೆಡಿಸಿದರೆ ಈ ಬುರುಗು ಬರುವ ತಂಪು ಪಾನೀಯಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ಕೆಡಿಸುತ್ತವೆ.

Buttermilk recipes you must try this summer!

ಹಾಗಾಗಿ ಹಣ ಕೊಟ್ಟು, ಕಾಯಿಲೆಯನ್ನು ಮೈಮೇಲೆ ಎಳೆದುಕೊಳ್ಳುದಕ್ಕಿಂತ, ಬಿರುಬಿಸಿಲಿನ ಬೇಗೆಯನ್ನು ತಣಿಸಲು, ಒಂದು ದೊಡ್ಡ ಲೋಟ ತಣ್ಣನೆಯ ಮಜ್ಜಿಗೆ ಕುಡಿದರೆ ಸಾಕು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವ ಜೊತೆಗೇ ದೇಹ ತಂಪಾಗಿರಲು ನೆರವಾಗುತ್ತದೆ. ಅಂತೆಯೇ ಮಜ್ಜಿಗೆಯ ಜೊತೆಗೆ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸುವ ಮೂಲಕ ಈ ಪೇಯವನ್ನು ವೈವಿಧ್ಯಮಯ ಹಾಗೂ ಇನ್ನಷ್ಟು ರುಚಿಕರವಾಗಿಸಬಹುದು, ಬನ್ನಿ ಅದು ಹೇಗೆ ಎಂಬುದನ್ನು ಮುಂದೆ ಓದಿ...

ಲಿಂಬೆಯ ಛಾಸ್ ಅಥವಾ ಮಜ್ಜಿಗೆ
ಒಂದು ಲೋಟ ನೀರಿನಲ್ಲಿ ಎರಡು ದೊಡ್ಡಚಮಚ ತಾಜಾ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಮತ್ತು ಅರ್ಧ ಲಿಂಬೆಯನ್ನು ಸೇರಿಸಿ ಕಲಕಿ. ಬೇಸಿಗೆಯ ಬೇಗೆಯನ್ನು ತಣಿಸಲು ಈ ಮಜ್ಜಿಗೆ ಅತ್ಯುತ್ತಮವಾಗಿದೆ.

ಮೆಣಸಿನ ಮಜ್ಜಿಗೆ
ಮಿಕ್ಸಿಯ ಬ್ಲೆಂಡರ್ ನಲ್ಲಿ ಕೊಂಚ ನೀರು ಹಾಕಿ, ಒಂದು ಲೋಟಕ್ಕೆ ಒಂದರಂತೆ ಹಸಿಮೆಣಸನ್ನು ಅಡ್ಡಸೀಳಿ ಸೇರಿಸಿ. ಇದಕ್ಕೆ ಕೊಂಚ ಬೇವಿನ ಎಲೆಗಳನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಬಳಿಕ ಕೊಂಚವೇ ಕೊತ್ತಂಬರಿ ಸೊಪ್ಪು ಮತ್ತು ಕೊಂಚ ಉಪ್ಪು ಸೇರಿಸಿ ಕಲಕಿ ಕುಡಿಯಿರಿ. ಇದು ದಕ್ಷಿಣ ಭಾರತದ ನೆಚ್ಚಿನ ಪೇಯವಾಗಿದ್ದು ಖಾರದ ರುಚಿ ಎಲ್ಲರ ಮನ ಗೆಲ್ಲುತ್ತದೆ.

ಮಸಾಲಾ ಮಜ್ಜಿಗೆ
ಖಾರ ಹೆಚ್ಚು ಇಷ್ಟಪಡದವರಿಗೆ ಮಸಾಲೆ ಮಜ್ಜಿಗೆ ಹೆಚ್ಚು ಸೂಕ್ತವಾಗಿದೆ. ಇದಕ್ಕಾಗಿ ಒಂದು ದೊಡ್ಡ ಲೋಟ ನೀರಿನಲ್ಲಿ ಅರ್ಧ ಕಪ್ ಮೊಸರು, ಅರ್ಧ ಚಿಕ್ಕ ಚಮಚ ಜೀರಿಗೆ ಪುಡಿ ಮತ್ತು ಚಿಟಿಕೆಯಷ್ಟು ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಬ್ಲೆಂಡರ್‌ನಲ್ಲಿ ಗೊಟಾಯಿಸಿ. ಬಳಿಕ ಕೆಲವು ಪುದಿನಾ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ತಣ್ಣಗೆ ಮಾಡಲು ಕೆಲವು ಐಸ್ ತುಂಡುಗಳನ್ನು ಹಾಕಿ ಬಿಸಿಲಿನ ದಿನದಲ್ಲಿ ಕುಡಿಯಿರಿ.

ಜೀರಿಗೆ ಮಜ್ಜಿಗೆ
ಬ್ಲೆಂಡರಿನಲ್ಲಿ ಕೊಂಚ ನೀರು ಮತ್ತು ಮೊಸರು ಹಾಕಿ ಮಿಶ್ರಣ ಮಾಡಿ. ಮಜ್ಜಿಗೆಯಲ್ಲಿ ನೀರಿನ ಪ್ರಮಾಣ ಕೊಂಚ ಹೆಚ್ಚಿರಲಿ. ಇದಕ್ಕೆ ಕೆಲವು ಪುದೀನಾ ಎಲೆಗಳು, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ ಕುಡಿಯಿರಿ.

ಪುದೀನಾ ಮಜ್ಜಿಗೆ
ಗುಜರಾತ್ ರಾಜ್ಯದ ಮೂಲದ ಈ ಮಜ್ಜಿಗೆಯಲ್ಲಿ ಪುದಿನಾ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಒಂದು ಕಪ್ ಮೊಸರಿಗೆ ಒಂದು ಕಪ್ ಪುದೀನಾ ಎಲೆಗಳನ್ನು ಸುಮಾರು ಮುನ್ನೂರು ಮಿ.ಲೀ ನೀರಿನಲ್ಲಿ ಸೇರಿಸಿ ಬ್ಲೆಂಡರಿನಲ್ಲಿ ಗೊಟಾಯಿಸಿ. ಇದಕ್ಕೆ ಕೊಂಚ ತಾಜಾ ಹಸಿಶುಂಠಿಯ ತುರಿದ ಭಾಗಗಳನ್ನು ಸೇರಿಸಿ. ಬಳಿಕ ಕೊಂಚ ಜೀರಿಗೆ ಪುಡಿ, ಉಪ್ಪು ಸೇರಿಸಿ ಮತ್ತೊಮ್ಮೆ ಗೊಟಾಯಿಸಿ. ಇದನ್ನು ಸೋಸಿ ಫ್ರಿಜ್ಜಿನಲ್ಲಿ ಇಪ್ಪತ್ತು ನಿಮಿಷ ಫ್ರಿಜ್ಜಿನಲ್ಲಿಡಿ. ಬಿಸಿಲಿನ ಬೇಗೆಗೆ ಇದಕ್ಕಿಂತ ಉತ್ತಮ ಪೇಯ ಇನ್ನೊಂದಿರಲಾರದು.

English summary

Buttermilk recipes you must try this summer!

Be it after a long day in the sun or a spicy meal, drinking a glass of buttermilk is all you need. But this summer, instead of going the routine way, try these simple and tasty buttermilk recipes to entice your taste buds with a refreshing twist.
Story first published: Saturday, March 19, 2016, 13:31 [IST]
X
Desktop Bottom Promotion