For Quick Alerts
ALLOW NOTIFICATIONS  
For Daily Alerts

ಥಂಡಾ ಅಂದರೆ ಹುರಿಹಿಟ್ಟು, ಚಿಕ್ಕು ಷೇಕ್

By Staff
|

ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಸಲು ಕೆಲವು ಶರಬತ್ತು ಪಾನೀಯಗಳನ್ನು ನೀಡುತ್ತಿದ್ದೇನೆ. ನಿಂಬೆ ಹಣ್ಣಿನ ಶರಬತ್ತು ಮಾಡೋದು ಎಲ್ಲರಿಗೂ ತಿಳಿದಿದ್ದೇ. ಕೆಲವರು ಬಿಸಿ ನೀರಿನಲ್ಲೂ ಕೂಡ ಶರಬತ್ತು ಮಾಡಿ ಪ್ರಯೋಗ ನಡೆಸುತ್ತಾರೆ.ನಿಂಬೆ ಶರಬತ್ತಿಗೆ ಸ್ವಲ್ಪ ಕೇಸರಿಯನ್ನು ಬೆರಸಿ ಕುಡಿದು ನೋಡಬಹುದು.ಇನ್ನೊಂದು ಸುಲಭವಾಗಿ ಮಾಡಬಹುದಾದ ಪಾನೀಯ ಹುರಿಹಿಟ್ಟು. ರಾಗಿ ಸರ್ವರೋಗಕ್ಕೂ ಮದ್ದುಎಂಬುದು ಸರ್ವವಿದಿತ. ಬನ್ನಿ ಹುರಿಹಿಟ್ಟು ಮಾಡುವ ವಿಧಾನ ತಿಳಿಯೋಣ.

ಮನಸ್ವಿನಿ, ನಾರಾವಿ.

ಹುರಿಹಿಟ್ಟು
ಬೇಕಾಗುವ ಸಾಮಾಗ್ರಿ: ಅರ್ಧ ಕೆ.ಜಿ ರಾಗಿ, ಒಳ್ಳೆ ತುಪ್ಪ, ಹುಣಸೆ ಹಣ್ಣು

ಮಾಡುವ ವಿಧಾನ:
ರಾಗಿಯನ್ನು ಸಣ್ಣ ಉರಿಯನ್ನು ಚೆನ್ನಾಗಿ ಹುರಿದು ನಯವಾಗಿ ಬೀಸಿ ಜರಡಿ ಹಿಡಿದು, ಹೊಟ್ಟನ್ನು, ಕಸವನ್ನು ತೆಗೆದು ಸ್ವಚ್ಛಗೊಳಿಸಿ ಡಬ್ಬದಲ್ಲಿ ಇರಿಸಿಕೊಳ್ಳಿ.1 ಕಪ್ ನೀರಿನಲ್ಲಿ ಸ್ವಲ್ಪ ಹುಣಸೇ ಹಣ್ಣು ಕಿವುಚಿ ರುಚಿಗೆ ಬೇಕಾದಷ್ಟು ಸಕ್ಕರೆ(ಬೆಲ್ಲ ಹಾಕಿದರೆ ಒಳ್ಳೆಯದು)ಹಾಕಿ, ಅರ್ಧ ಚಮಚ ತುಪ್ಪ ಬೆರಸಿ.ಇದಕ್ಕೆ ಹುರಿದ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಕಿ ಕುಡಿಯಿರಿ. ಇದು ಆರೋಗ್ಯದಾಯಕ ಹಾಗು ಶಕ್ತಿವರ್ಧಕ ಕೂಡ.

***
ಚಿಕ್ಕೂ ಷೇಕ್

ಬೇಕಾಗಿದ್ದು: ಒಳ್ಳೆ ಹಣ್ಣಾದ 2 ಚಿಕ್ಕು(ಸಫೋಟ), ಹಾಲು 1 ಕಪ್, ಸಕ್ಕರೆ 4 ಟೇಬಲ್ ಚಮಚ, ತಣ್ಣಗಿರುವ ನೀರು 2 ಕಪ್

ಮಾಡುವ ವಿಧಾನ:
ಚಿಕ್ಕು ಹಣ್ಣನ್ನು ತೊಳೆಸು ಸಿಪ್ಪೆಯನ್ನು ಹೆಚ್ಚಿ ಬೀಜ ತೆಗೆದು ಸಣ್ಣ ತುಂಡು ಮಾಡಿಕೊಳ್ಳಿರಿ. ಮಿಕ್ಸಿಯಲ್ಲಿ ಹಾಲು ಮತ್ತು ಚಿಕ್ಕುವನ್ನು ಹಾಕಿ ತಿರುಗಿಕೊಳ್ಳಿರಿ. 1ನಿಮಿಷ ಆದ ಮೇಲೆ ಸಕ್ಕರೆ ನೀರು ಹಾಕಿಕೊಂಡು ಇನ್ನೊಮ್ಮೆ ಎಲ್ಲಾ ಮಿಶ್ರವಾಗುವಂತೆ ತಿರುಗಿಸಿರಿ. ಬೇಕಿದ್ದರೆ ಐಸ್ ಚೂರುಗಳನ್ನು ಸೇರಿಸಿ. ಸಕ್ಕರೆ ಅವರವರ ರುಚಿಗೆ ಬೇಕಾದಷ್ಟು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಈಗ ಸಿದ್ಧವಾದ ಷೇಕನ್ನು ಫ್ರಿಜ್ಜಿನಲ್ಲಿಡಿ. ಮಾಡಿದ ತಕ್ಷಣ ಉಪಯೋಗಿಸಿದರೆ ಚೆನ್ನಾಗಿರುತ್ತದೆ. ಬೇಸಿಗೆಗೆ ರುಚಿಕರಪೇಯ.

Story first published: Wednesday, February 27, 2008, 18:37 [IST]
X
Desktop Bottom Promotion