For Quick Alerts
ALLOW NOTIFICATIONS  
For Daily Alerts

ಬಾಣಂತಿಯರ ಎದೆಹಾಲು ಹೆಚ್ಚಿಸುವ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ರೆಸಿಪಿ

|

ಚಟ್ನಿಪುಡಿಗಳಲ್ಲಿ ಸಾಕಷ್ಟು ವಿಧಗಳಿಗೆ. ಒಂದೊಂದು ಊರಿನಲ್ಲಿ ವಿಭಿನ್ನ ಶೈಲಿಯಲ್ಲಿ ಮತ್ತು ವಿಶಿಷ್ಟ ರುಚಿಯಲ್ಲಿ ತಯಾರಿಸುತ್ತಾರೆ. ನಾವು ಸೇವಿಸುವ ಆಹಾರ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳನ್ನು ಸಹ ಹೊಂದಿರುವುದು ಮುಖ್ಯವಾಗುತ್ತದೆ. ರುಚಿ ಬಾಯಿಯನ್ನು ತಣಿಸಿದರೆ ಆಹಾರದಲ್ಲಿನ ಅಂಶಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

 chutney pudi

ನಾವು ಇಂದು ಎಲ್ಲರಿಗೂ ಇಷ್ಟವಾಗುವ ಹಾಗೂ ಪ್ರತ್ಯೇಕವಾಗಿ ಬಾಣಂತಿಯರಿಗೆ ಹೇಳಿಮಾಡಿಸಿದ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ರೆಸಿಪಿಯನ್ನು ಮಾಡುವ ಬಗ್ಗೆ ತಿಳಿಸಲಿದ್ದೇವೆ. ಈ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿಯ ಸೇವನೆಯಿಂದ ಬಾಣಂತಿಯರಿಗೆ ಆರೋಗ್ಯಕರವಾದ ಹಾಗೂ ಎದೆಹಾಲಿನ ಪ್ರಮಾಣವು ಹೆಚ್ಚಾಗುತ್ತದೆ.
ಚಟ್ನಿಪುಡಿ ಮಾಡುವ ವಿಧಾನವನ್ನು ಮುಂದೆ ನೋಡೋಣ:

Sabbasige soppina chutney pudi recipe/ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ
Sabbasige soppina chutney pudi recipe/ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ
Prep Time
20 Mins
Cook Time
50M
Total Time
1 Hours10 Mins

Recipe By: Meghashree Devaraju

Recipe Type: Sides

Serves: 20

Ingredients
  • ಬೇಕಾಗುವ ಪದಾರ್ಥಗಳು

    ಸಬ್ಬಕ್ಕಿ ಸೊಪ್ಪು -3 ಕಪ್‌ ಸಣ್ಣಗೆ ಕತ್ತರಿಸಿದ್ದು

    ಕಡಲೆಕಾಳು - 1ಕಪ್

    ಉದ್ದಿನ ಬೇಳೆ - 1ಕಪ್

    ಮೆಂತ್ಯ -ಅರ್ಧ ಚಮಚ

    ಒಣಮೆಣಸಿನ ಕಾಯಿ - ಒಂದು ಕಪ್‌

    ಕರಿಬೇವು -ಕಾಲು ಕಪ್‌

    ಜೀರಿಗೆ - ಕಾಲು ಚಮಚ

    ಹಿಂಗು - ಅರ್ಧ ಚಮಚ

    ಬೆಲ್ಲ - ಒಂದು ಚಮಚ

    ಬೆಳ್ಳುಳ್ಳಿ - ಎರಡು

    ಉಪ್ಪು ರುಚಿಗೆ

Red Rice Kanda Poha
How to Prepare
  • ಮಾಡುವ ವಿಧಾನ

    ಸಬ್ಬಕ್ಕಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಹೋಗುವಂತೆ ಒಂದು ಬಿಳಿ ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ

    ಸಂಪೂರ್ಣ ನೀರಿನಂಶ ಹೋದ ಮೇಲೆ ಸಣ್ಣಗೆ ಹೆಚ್ಚಿಕೊಂಡು ಬಿಸಿ ಬಾಣಲೆಗೆ ಹಾಕಿ ಸೊಪ್ಪು ಸಂಪೂರ್ಣ ಒಣಗುವವರೆಗೂ ಬಾಡಿಸಿ (ಒಣಗಿನ ಎಲೆಯಂತೆ ಮುಟ್ಟಿದಾಕ್ಷಣ ಪುಡಿ ಆಗುವಂತಿರಬೇಕು)

    ನಂತರ ಬಿಸಿ ಬಾಣಲೆಗೆ ಕಡಲೆಕಾಳು, ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಕನಿಷ್ಠ 15 ನಿಮಿಷ ಕಪ್ಪಾಗದಂತೆ ಬಿಸಿ ಮಾಡಿ.

    ನಂತರ ಮೆಂತ್ಯ, ಕರಿಬೇವು, ಜೀರಿಗೆ, ಬೆಳ್ಳುಳ್ಳಿ ಹಾಗೂ ಒಂಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ಬಿಸಿ ಮಾಡಿ.

    ಅನಂತರ ಬಿಸಿ ಮಾಡಿದ ಸೊಪ್ಪು, ಕಾಳು ಹಾಗೂ ಮಸಾಲೆ ಪದಾರ್ಥಗಳನ್ನು ಒಂದು ತಟ್ಟೆಯಲ್ಲಿ ಹರಡಿ ಅದಕ್ಕೆ ಉಪ್ಪು, ಹಿಂಗು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.

    ಅಂತಿಮವಾಗಿ ಎಲ್ಲವನ್ನು ಜಾರ್‌ಗೆ ಹಾಕಿ ಮಿಕ್ಸಿ ಮಾಡಿ.

    ಈಗ ರುಚಿಕರ ಹಾಗೂ ಆರೋಗ್ಯಕರ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ಸವಿಯಲು ಸಿದ್ಧ.

    ಇದನ್ನು ಬಿಸಿ ಅನ್ನ ತುಪ್ಪದ ಜತೆ, ದೋಸೆ, ರೊಟ್ಟಿಗಳ ಜತೆ ಸವಿಯಲು ರುಚಿಯಾಗಿರುತ್ತದೆ.

Instructions
  • ಬಾಣಂತಿಯರು ಬಿಸಿ ಅನ್ನದ ಜತೆ ತುಪ್ಪ ಹಾಗೂ ಚಟ್ನಿಪುಡಿಯನ್ನು ಸವಿದರೆ ಬಾಯಿಗೆ ರುಚಿಯು ಸಿಗುತ್ತದೆ ಹಾಗೂ ಎದೆಹಾಲಿನ ಪ್ರಮಾಣವು ಹೆಚ್ಚಾಗುತ್ತದೆ.
Nutritional Information
  • ಕ್ಯಾಲೋರಿ - 4 ಗ್ರಾಂ
  • ವಿಟಮಿನ್‌ ಸಿ - 8 ಗ್ರಾಂ
  • ಫೋಲೆಟ್‌ - 3 ಗ್ರಾಂ
[ 4.5 of 5 - 39 Users]
Story first published: Friday, July 9, 2021, 11:51 [IST]
X
Desktop Bottom Promotion