For Quick Alerts
ALLOW NOTIFICATIONS  
For Daily Alerts

ದಹಿ ಬೆಂಡೆಯ ಪಾಕ ವಿಧಾನ

Posted By: Divya pandit Pandit
|

ಬೆಂಡೆ, ಓಕ್ರಾ, ಲೇಡೀ ಫಿಂಗರ್ ಎಂದೆಲ್ಲಾ ಕರೆಯುವ ಈ ತರಕಾರಿ ಸಮೃದ್ಧವಾದ ಕಬ್ಬಿಣಾಂಶವನ್ನು ಹೊಂದಿದೆ. ಇದರಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾದ ತರಕಾರಿ. ಇದರಲ್ಲಿ ಕ್ಯಾಲೋರಿ ಗುಣವು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಸಹ ಇದು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಬೆಂಡೆಕಾಯಿ ಸೇರಿಸಿ ಮಾಡುವ ಆಹಾರ ಪದಾರ್ಥವು ಅತ್ಯುತ್ತಮವಾದ ಆಹಾರ ಪದಾರ್ಥ ಎನ್ನಬಹುದು.

ಮೊಸರಿನೊಂದಿಗೆ ಬೆಂಡೆಯನ್ನು ಬೆರೆಸಿ ತಯಾರಿಸುವ ವಿಶೇಷ ಪದಾರ್ಥವನ್ನು ಅನ್ನ ಮತ್ತು ಚಪಾತಿಯೊಂದಿಗೆ ಸಹ ಸವಿಯಬಹುದು. ಮೊಸರು, ವಿಶೇಷ ಬಗೆಯ ಮಸಾಲ ಪದಾರ್ಥಗಳು ಹಾಗೂ ಬೆಂಡೆಯ ಮಿಶ್ರಣದಿಂದ ತಯಾರಾಗುವ ದಹಿ ಬೆಂಡೆ ವಿಭಿನ್ನವಾದ ರುಚಿಯೊಂದಿಗೆ ನಾಲಿಗೆ ಚಪ್ಪರಿಸುವಂತೆ ಮಾಡುವುದು. ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಮಸಾಲೆ ಭರಿತ ಪಾಕವಿಧಾನವನ್ನು ಬಯಸುವವರಿಗೆ ಇದು ಅತ್ಯುತ್ತಮವಾದ ಪಾಕವಿಧಾನ ಆಗುವುದು.

ಸಾಮಾನ್ಯವಾಗಿ ಭಾರತದೆಲ್ಲೆಡೆ ತಯಾರಿಸುವ ಈ ಪಾಕವಿಧಾನವನ್ನು ಬಹಳ ಕಡಿಮೆ ಸಮಯದಲ್ಲಿ, ಸರಳ ವಿಧಾನದ ಮೂಲಕ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನವನ್ನು ತಯಾರಿಸಬೇಕು ಹಂಬಲವಾಗುತ್ತಿದ್ದರೆ ಈ ಮುಂದೆ ನೀಡಲಾಗಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವಿವರಿಸಿ.

dahi bhindi recipe
ದಹಿ ಬೆಂಡೆ ರೆಸಿಪಿ| ದಹಿ ಬೆಂಡೆ ಮಾಡುವುದು ಹೇಗೆ| ದಹಿ ಬೆಂಡೆ ರೆಸಿಪಿ ತಯಾರಿಸಸುವುದು ಹೇಗೆ| ಕಡಿಮೆ ಕ್ಯಾಲೋರಿ ರೆಸಿಪಿ| ಸ್ಟೆಪ್ ಬೈ ಸ್ಟೆಪ್ ದಹಿ ಬೆಂಡೆ| ದಹಿ ಬೆಂಡೆ ವಿಡಿಯೋ
ದಹಿ ಬೆಂಡೆ ರೆಸಿಪಿ| ದಹಿ ಬೆಂಡೆ ಮಾಡುವುದು ಹೇಗೆ| ದಹಿ ಬೆಂಡೆ ರೆಸಿಪಿ ತಯಾರಿಸಸುವುದು ಹೇಗೆ| ಕಡಿಮೆ ಕ್ಯಾಲೋರಿ ರೆಸಿಪಿ| ಸ್ಟೆಪ್ ಬೈ ಸ್ಟೆಪ್ ದಹಿ ಬೆಂಡೆ| ದಹಿ ಬೆಂಡೆ ವಿಡಿಯೋ
Prep Time
10 Mins
Cook Time
15M
Total Time
25 Mins

Recipe By: ಮೀನಾ ಭಂಡಾರಿ.

Recipe Type: ಪ್ರಮುಖ ಖಾದ್ಯ

Serves: 2

Ingredients
  • ಹೆಚ್ಚಿಕೊಂಡ ಬೆಂಡೆಕಾಯಿ -2 ಕಪ್

    ಉಪ್ಪು - 1 ಟೀ ಚಮಚ

    ಖಾರದ ಪುಡಿ/ಮೆಣಸಿನ ಪುಡಿ -1 ಟೀಚಮಚ

    ಮೊಸರು -1 ಕಪ್

    ದನಿಯಾ ಪುಡಿ- 2 ಟೇಬಲ್ ಚಮಚ

    ಕಡ್ಲೇ ಹಿಟ್ಟು -1 ಟೀಚಮಚ

    ಸೋಂಪು - 1 ಟೀಚಮಚ

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು -ಅಲಂಕಾರಕ್ಕೆ

    ಜೀರಿಗೆ - 1 ಟೀಚಮಚ

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ ಮೂರು ಗ್ಲಾಸ್ ನೀರನ್ನು ಸೇರಿಸಿ, ಕುದಿಯಲು ಬಿಡಿ.

    2. ಕುದಿ ಬರುವವರೆಗೆ ಮುಚ್ಚಳವನ್ನು ಮುಚ್ಚಿ.

    3. ಕುದಿ ಬಂದ ನಂತರ ಮುಚ್ಚಳವನ್ನು ತೆರೆಯಿರಿ.

    4. ಸ್ಟಟೀಮರ್ ಅನ್ನು ಜೋಡಿಸಿ.

    5. ಸ್ಟೀಮರ್ ಮೇಲೆ ಹೆಚ್ಚಿಕೊಂಡ ಬೆಂಡೆಕಾಯನ್ನು ಹಾಕಿ, ಮುಚ್ಚಳವನ್ನು ಮುಚ್ಚಿ.

    6. 5 ನಿಮಿಷ ಹಬೆಯಲ್ಲಿ ಬೇಯಲು ಬಿಡಿ.

    7. ಇನ್ನೊಂದು ಬೌಲ್ ತೆಗೆದುಕೊಂಡು, ಮೊಸರನ್ನು ಸೇರಿಸಿ.

    8. ಅದಕ್ಕೆ ಉಪ್ಪು, ಕಡ್ಲೇ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ.

    9. ಖಾರದ ಪುಡಿ ಮತ್ತು ದನಿಯಾ ಪುಡಿಯನ್ನು ಸೇರಿಸಿ.

    10. ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕೆ ಇಡಿ.

    11. ಬೆಂಡೆಕಾಯಿ ಬೆಂದಿದೆಯೇ ಎಂದು ಪರೀಕ್ಷಿಸಿ, ಹಬೆಯಿಂದ ತೆಗೆಯಿರಿ.

    12. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ.

    13. ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ.

    14. ಸೋಂಪು ಮತ್ತು ಜೀರಿಗೆಯನ್ನು ಸೇರಿಸಿ.

    15. ಚೆನ್ನಾಗಿ ಹುರಿಯಿರಿ.

    16. ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.

    17. ಒಂದು ಕಪ್ ನೀರನ್ನು ಸೇರಿಸಿ.

    18. ಇದನ್ನು ಕುದಿಯಲು ಬಿಡಿ.

    19. ಹಬೆಯಲ್ಲಿ ಬೆಂದ ಬೆಂಡೆಕಾಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 3-4 ನಿಮಿಷಗಳ ಕಾಲ ಕುದಿಯಲು ಬಿಡಿ.

    20. ಮುಚ್ಚಳವನ್ನು ತೆರೆದು ಒಮ್ಮೆ ಚೆನ್ನಾಗಿ ತಿರುವಿ.

    21. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.

Instructions
  • 1. ಈ ಪಾಕವಿಧಾನವನ್ನು ಬಿಸಿ ಇರುವಾಗಲೇ ಸವಿಯಲು ನೀಡಿ. ಬೆಂಡೆಕಾಯನ್ನು ಹುರಿಯ ಬಾರದು. ಹಬೆಯಲ್ಲಿಯೇ ಬೇಯಿಸಿಕೊಳ್ಳಬೇಕು.
  • 2. ಹುರಿಯದೇ ಹಬೆಯಲ್ಲಿಯೇ ಬೇಯಿಸಿ ತಯಾರಿಸುವ ಈ ಪಾಕವಿಧಾನ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ.
Nutritional Information
  • ಬಡಿಸುವ ಪ್ರಮಾಣ - 2 ಬೌಲ್
  • ಕ್ಯಾಲೋರಿ - 235 ಕ್ಯಾಲ್
  • ಕೊಬ್ಬು - 16.4 ಗ್ರಾಂ.
  • ಪ್ರೋಟೀನ್ - 6.9 ಗ್ರಾಂ.
  • ಕಾರ್ಬೋಹೈಡ್ರೇಟ್ - 21.7 ಗ್ರಾಂ.
  • ಫೈಬರ್ - 8.5 ಗ್ರಾಂ.

ಚಿತ್ರ ಬರಹ:

1. ಒಂದು ಪಾತ್ರೆಯಲ್ಲಿ ಮೂರು ಗ್ಲಾಸ್ ನೀರನ್ನು ಸೇರಿಸಿ, ಕುದಿಯಲು ಬಿಡಿ.

dahi bhindi recipe
dahi bhindi recipe

2. ಕುದಿ ಬರುವವರೆಗೆ ಮುಚ್ಚಳವನ್ನು ಮುಚ್ಚಿ.

dahi bhindi recipe
dahi bhindi recipe

3. ಕುದಿ ಬಂದ ನಂತರ ಮುಚ್ಚಳವನ್ನು ತೆರೆಯಿರಿ.

dahi bhindi recipe

4. ಸ್ಟಟೀಮರ್ ಅನ್ನು ಜೋಡಿಸಿ.

dahi bhindi recipe

5. ಸ್ಟೀಮರ್ ಮೇಲೆ ಹೆಚ್ಚಿಕೊಂಡ ಬೆಂಡೆಕಾಯನ್ನು ಹಾಕಿ, ಮುಚ್ಚಳವನ್ನು ಮುಚ್ಚಿ.

dahi bhindi recipe
dahi bhindi recipe

6. 5 ನಿಮಿಷ ಹಬೆಯಲ್ಲಿ ಬೇಯಲು ಬಿಡಿ.

dahi bhindi recipe

7. ಇನ್ನೊಂದು ಬೌಲ್ ತೆಗೆದುಕೊಂಡು, ಮೊಸರನ್ನು ಸೇರಿಸಿ.

dahi bhindi recipe

8. ಅದಕ್ಕೆ ಉಪ್ಪು, ಕಡ್ಲೇ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ.

dahi bhindi recipe
dahi bhindi recipe
dahi bhindi recipe

9. ಖಾರದ ಪುಡಿ ಮತ್ತು ದನಿಯಾ ಪುಡಿಯನ್ನು ಸೇರಿಸಿ.

dahi bhindi recipe
dahi bhindi recipe

10. ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕೆ ಇಡಿ.

dahi bhindi recipe
dahi bhindi recipe

11. ಬೆಂಡೆಕಾಯಿ ಬೆಂದಿದೆಯೇ ಎಂದು ಪರೀಕ್ಷಿಸಿ, ಹಬೆಯಿಂದ ತೆಗೆಯಿರಿ.

dahi bhindi recipe
dahi bhindi recipe

12. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ.

dahi bhindi recipe

13. ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ.

dahi bhindi recipe

14. ಸೋಂಪು ಮತ್ತು ಜೀರಿಗೆಯನ್ನು ಸೇರಿಸಿ.

dahi bhindi recipe
dahi bhindi recipe

15. ಚೆನ್ನಾಗಿ ಹುರಿಯಿರಿ.

dahi bhindi recipe

16. ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.

dahi bhindi recipe

17. ಒಂದು ಕಪ್ ನೀರನ್ನು ಸೇರಿಸಿ.

dahi bhindi recipe

18. ಇದನ್ನು ಕುದಿಯಲು ಬಿಡಿ.

dahi bhindi recipe

19. ಹಬೆಯಲ್ಲಿ ಬೆಂದ ಬೆಂಡೆಕಾಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 3-4 ನಿಮಿಷಗಳ ಕಾಲ ಕುದಿಯಲು ಬಿಡಿ.

dahi bhindi recipe
dahi bhindi recipe
dahi bhindi recipe

20. ಮುಚ್ಚಳವನ್ನು ತೆರೆದು ಒಮ್ಮೆ ಚೆನ್ನಾಗಿ ತಿರುವಿ.

dahi bhindi recipe
dahi bhindi recipe

21. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.

dahi bhindi recipe
dahi bhindi recipe
[ 3.5 of 5 - 20 Users]
X
Desktop Bottom Promotion