For Quick Alerts
ALLOW NOTIFICATIONS  
For Daily Alerts

ಓಣಂಗೆ ಕೇರಳ ಸ್ಪೆಷಲ್ ರೆಸಿಪಿ

|

ಓಣಂಗೆ ಓಣಸದ್ಯ ಅಂತ ಹೇಳಿ 15-20 ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಸಿಹಿ ತಿಂಡಿ, ಚಿಪ್ಸ್, ಪಾಯಸ, 6-7 ಬಗೆಯ ಪಲ್ಯ 2-3 ಬಗೆಯ ಹುಳಿ , ಉಪ್ಪಿನಕಾಯಿ, ಸಂಡಿಗೆ ಹೀಗೆ ವಿಧ-ವಿಧದ ಭಕ್ಷ್ಯಗಳು ಎಲೆಯನ್ನು ತುಂಬಿ ಬಿಡುತ್ತದೆ.

ಇಲ್ಲಿ ನಾವು ಓಣಂ ವಿಶೇಷವಾಗಿ ಓಣ ಹಬ್ಬದಲ್ಲಿ ತಪ್ಪದೇ ಮಾಡುವಂತಹ ವಿಶೇಷ ಖಾದ್ಯಗಳ ಪಟ್ಟಿ ನೀಡಿದ್ದೇವೆ ನೋಡಿ:

ಎಲೆ ಅಡಾ

ಎಲೆ ಅಡಾ

ಎಲೆ ಅಡಾ ಕೇರಳ ಶೈಲಿಯ ಸಿಹಿ ತಿಂಡಿಯಾಗಿದೆ. ನಮ್ಮಲ್ಲಿ ಹಬ್ಬ ಹರಿದಿನಗಳಲ್ಲಿ ಕರ್ಜಿ ಕಾಯಿ, ಹೋಳಿಗೆ ಮಾಡುವಂತೆ ಕೇರಳದ ಹಬ್ಬಗಳಲ್ಲಿ ಈ ಎಲೆ ಅಡಾ ಇದ್ದೇ ಇರುತ್ತದೆ. ಈ ಎಲೆ ಅಡಾ ಸಿಹಿಯಾಗಿದ್ದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುವುದು. ಇದನ್ನು ಕಡುಬಿನಷ್ಟೇ ಸರಳವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಅಡಾ ಪಾಯಸ

ಅಡಾ ಪಾಯಸ

ಅಡಾ ಪಾಯಸ ಕೇರಳದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಕೇರಳದ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಾಡಲಾಗುವುದು. ಕೇರಳದ ಸ್ಪೆಷೆಲ್ ಅಡಾ ಪಾಯಸ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಕೂಟುಕರಿ

ಕೂಟುಕರಿ

ಮಲಯಾಳಿಗಳ ಹಬ್ಬವಾದ ಓಣಂಗೆ ಅವೆಲ್, ಕೂಟುಕರಿ, ಎರಿಷೇರಿ ಈ ರೀತಿಯ ಅಡುಗೆಗಳನ್ನು ಮಾಡಿದರೆ ಮಾತ್ರ 'ಓಣಂ ಸದ್ಯ' ಅಂದರೆ ಓಣಂ ಸ್ಪೆಷೆಲ್ ಅಡುಗೆ ಎಂದು ಹೇಳಲು ಸಾಧ್ಯ. ಓಣಂಗೆ ತಯಾರಿಸುವ ಪ್ರಮುಖ ಅಡುಗೆಗಳಲ್ಲಿ ಒಂದಾದ ಕೂಟುಕರಿಯ ರುಚಿ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

 ಉನ್ನಿ ಅಪ್ಪಂ

ಉನ್ನಿ ಅಪ್ಪಂ

ಕೇರಳದ ಈ ವಿಶೇಷ ಸಿಹಿ ತಿನಿಸು ಓಣಂ ದಿನ ಪ್ರತಿ ಮನೆಯಲ್ಲೂ ಇದ್ದೇ ಇರುತ್ತೆ. ಕೆಲಸಕ್ಕೆ ಹೋಗುವ ಅಥವಾ ಮೊದಲ ಬಾರಿ ಉನ್ನಿ ಅಪ್ಪಂ ಮಾಡಬೇಕೆಂದಿರುವ ಮಹಿಳೆಯರಿಗೆ ಉನ್ನಿ ಅಪ್ಪಂ ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಬಾಳೆಕಾಯಿ ಚಿಪ್ಸ್

ಬಾಳೆಕಾಯಿ ಚಿಪ್ಸ್

ಓಣಂಗೆ ಬಾಳೆಕಾಯಿ ಚಿಪ್ಸ್ ಅನ್ನು ಸುಲಭವಾಗಿ ತಯಾರಿಸುವ ವಿಧಾನವೊಂದು ಇಲ್ಲಿದೆ. ಅಂಗಡಿಯಿಂದ ತರುವ ಬದಲು ನೀವೇ ಮನೆಯಲ್ಲಿ ಮಾಡಿಕೊಂಡು ತಿನ್ನಬಹುದು.

ಹಲಸಿನಕಾಯಿ ಚಿಪ್ಸ್

ಹಲಸಿನಕಾಯಿ ಚಿಪ್ಸ್

ಕೆಲವರು ಮನೆಯಲ್ಲಿ ಮಾಡಿ ಇಟ್ಟಿರುತ್ತಾರೆ. ಮತ್ತೆ ಕೆಲವರು ಅಂಗಡಿಯಿಂದ ಕೊಂಡು ತರುತ್ತಾರೆ. ಒಟ್ಟಿನಲ್ಲಿ ಈ ಚಿಪ್ಸ್ ಕೂಡ ಓಣಸದ್ಯ ಜೊತೆ ಇರುತ್ತದೆ.

English summary

Special Recipes For Onam

The Onasadya consists of so many different food items starting from the banana chips, avial, p erissery to the special pal payasam and the ela ada.We, at Boldsky have listed few of the onam recipe, take a look.
Story first published: Saturday, September 14, 2013, 12:43 [IST]
X
Desktop Bottom Promotion