For Quick Alerts
ALLOW NOTIFICATIONS  
For Daily Alerts

ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್

By Super
|
Telangana style hotels may comeup in Karnataka
ಆಂಧ್ರಪ್ರದೇಶದಲ್ಲಿ ಉದ್ಭವವಾದ ಪ್ರತ್ಯೇಕ ತೆಲಂಗಾಣ ರಾಜ್ಯದ ಆಂದೋಳನದ ಬಿಸಿ ಬೆಂಗಳೂರಿಗೆ ಮುಟ್ಟಲಿದೆಯೇ? ತಂತ್ರಜ್ಞ ಮತ್ತು ಕನ್ನಡ ಮಿತ್ರ ಬಿ ಪವನಜ ಅವರ ಇಂದಿನ ಒಂದು ಟ್ವೀಟ್ ಸಂದೇಶ ವನ್ನು ಗಂಭೀರವಾಗಿ ಪರಿಗಣಿಸುವುದಾದರೆ ನಮಗೂ ಅಂತಹ ಸಂಶಯ ಮೂಡುತ್ತಿದೆ. ಈ ಪ್ರಶ್ನೆ ನಮ್ಮನ್ನು ಬೆಳಗಿನಿಂದ ಒಂದೇ ಸಮನೆ ಕಾಡುತ್ತಿದೆ.

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಆಂಧ್ರ ಸ್ಟೈಲ್ ಫುಡ್, ಆಂಧ್ರ ಸ್ಟೈಲ್ ರೆಸ್ಟೋರೆಂಟು ಮತ್ತು ಹೋಟೆಲುಗಳಿವೆ. ಇಲ್ಲಿ ವಿಶೇಷವಾಗಿ ನಂದಿನಿ ಹೋಟೆಲುಗಳ ಸಮೂಹನ್ನು ಹೆಸರಿಸಬಹುದಾಗಿದೆ. ಬಾಳೆ ಎಲೆ ಮೇಲೆ ಫುಲ್ ಮೀಲ್ಸ್ ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿಗಳನ್ನು ಬಡಿಸುವ ಪದ್ದತಿ ಆರಂಭಿಸಿದ್ದು ಇವೇ ಹೋಟೆಲುಗಳು.

ಈ ಹೋಟೆಲುಗಳು ಮೊದಮೊದಲು ಜನತೆಯನ್ನು ಆಕರ್ಷಿಸಿದರೂ ಈಚೆಗೆ ಅರ್ಧ ಬೆಂದ ಅನ್ನ ಮತ್ತು ಚಪ್ಪೆಚಪ್ಪೆ ಬಿರಿಯಾನಿ ಊಟ ಹಾಕುತ್ತಿರುವುದರಿಂದ ಜನ ಬೇಸತ್ತಿದ್ದಾರೆ. ಸದ್ಯಕ್ಕೆ ವಿಷಯ ಅದಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ವಿದ್ಯುಕ್ತವಾಗಿ ಅನಾವರಣಗೊಂಡರೆ ಬೆಂಗಳೂರಿನಲ್ಲಿ ತೆಲಂಗಾಣ ಹೋಟೆಲುಗಳು ಕಾಣಿಸುಕೊಳ್ಳುತ್ತವೆಯೇ ಎಂಬುದು ನಮ್ಮ ಕುತೂಹಲ. ಹಾಗೊಮ್ಮೆ ತೆಲಂಗಾಣ ರೆಸ್ಟೋರೆಂಟುಗಳು ಆರಂಭಗೊಂಡರೆ ಆಂಧ್ರ ಸ್ಟ್ಯೈಲ್ ಹೋಟೆಲುಗಳಿಗೆ ಸಖತ್ ಕಾಂಪಿಟಿಷನ್ ಒಡ್ಡುವುದು ಖಂಡಿತ.

ಕುತೂಹಲ ತಣಿಸಿಕೊಳ್ಳಲು ನಮ್ಮ ದಟ್ಸ್ ತೆಲುಗು ಡಾಟ್ ಕಾಂನ ಸಂಪಾದಕ ಶಾಂತಾರಾಂ ಅವರನ್ನು ಸಂಪರ್ಕಿಸಲಾಯಿತು. ಈ ಬಗ್ಗೆ ಅಧಿಕೃತವಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಇಂದು ಬೆಳಗಿನ ಜಾವವಷ್ಟೇ ಚಂದ್ರಶೇಖರರಾವ್ ಅವರು ಎಳನೀರು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಆನಂತರ ಈಮೇಲಿನಲ್ಲಿ ಕಳಿಸಲಾಗುವುದು ಎಂದಷ್ಟೇ ಹೇಳಿ ಅವರು ಫೋನ್ ಅಫ್ ಮಾಡಿದರು.

English summary

Telangana Style|Food and Dining|Nandini Restaurents|Bangalore Food And Dining| AP crisis| ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್

Karnataka can now look forward to Telangana style hotels and restaurents. It may pose tough competition to Andhra Style hoteles in Bangalore
X
Desktop Bottom Promotion