For Quick Alerts
ALLOW NOTIFICATIONS  
For Daily Alerts

ಮಸಾಲೆ ದೋಸೆ, ಆಲೂಗೆಡ್ಡೆ ಚಿಪ್ಸು, ಫ್ರೆಂಚ್ ಫ್ರೈಗೆ ಗುಡ್ ಬೈ

|
ಮಸಾಲೆ ದೋಸೆ ನಿಮ್ಮ ಫೇವರಿಟ್. ಆಲೂಗಡ್ಡೆ ಚಿಪ್ಸ್ ಎಷ್ಟು ತಿಂದರೂ ಸಾಲದು. ಫ್ರೆಂಚ್ ಫ್ರೈ ತಿಂತೀರಾ ಗೊತ್ತಿಲ್ಲ. ಆದರೆ ಈ ಮೂರು ಆಹಾರಕ್ಕೆ ನೀವು ಗುಡ್ ಬೈ ಹೇಳಲೇ ಬೇಕು. ಇಲ್ಲವಾದಲ್ಲಿ ನಿಮಗೆ ಬೊಜ್ಜು ಬರೋದು ಗ್ಯಾರಂಟಿ. ಹಾಗಂತ ಹೇಳಿದ್ದು ಹಾರ್ವಡ್ ನಲ್ಲಿ ನಡೆಸಿದ ಒಂದು ಸಮೀಕ್ಷೆ.

ಆಲೂ ಚಿಪ್ಸ್, ಫ್ರೆಂಚ್ ಪ್ರೈ ಸೇರಿದಂತೆ ಆಲೂ ಉತ್ಪನ್ನಗಳೆಲ್ಲ ಬೊಜ್ಜು ಉಂಟುಮಾಡುತ್ತವೆ ಎಂದು ಹಾರ್ವೆಡ್ ನ ಇತ್ತೀಚಿನ ಸಮೀಕ್ಷೆ ಹೇಳಿದೆ. ಅದನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಪ್ರಕಟಿಸಿದೆ. ಹೀಗಾಗಿ ಆಲೂ ಗಸಿಯೊಂದಿಗೆ ಮಸಾಲೆ ದೋಸೆ ತಿನ್ನುವರಿಗೂ ಮಾಫಿಯಿಲ್ಲ.

ಇದು ಅರ್ಜೆಂಟಿನಲ್ಲಿ ಮಾಡಿದ ಸಮೀಕ್ಷೆಯಲ್ಲ. ಈ ಅಧ್ಯಯನಕ್ಕೆ ಸುಮಾರು 20 ವರ್ಷ ಹಿಡಿದಿದೆ. ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಇವರೆಲ್ಲರೂ ಇಂತಹ ಉತ್ಪನ್ನಗಳನ್ನು ತಿಂದಿರುವುದರಿಂದ 20 ವರ್ಷಗಳಲ್ಲಿ ಸರಾಸರಿ 17 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದಾರೆ.

ಸಮೀಕ್ಷೆಯಲ್ಲಿ ಹೆಚ್ಚು ದೋಷಿಯಾಗಿ ಕಂಡದ್ದು ಆಲೂ. ಆಲೂ ಚಿಪ್ಸ್ ತಿಂದವರೆಲ್ಲ 1.69 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದರು. ಫ್ರೆಂಚ್ ಫ್ರೈ ತಿಂದವರು 1.28 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದರು.

"ಆಲೂ ಉತ್ಪನ್ನಗಳು ಅತ್ಯಧಿಕ ಬೊಜ್ಜುಕಾರಕ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಉತ್ತಮ ಡಯೆಟ್ ಕಾಪಾಡಿಕೊಳ್ಳಬೇಕೆಂದು ಬಯಸುವರು ಇಂತಹ ಉತ್ಪನ್ನಗಳಿಗೆ ಗುಡ್ ಬಾಯ್ ಹೇಳಿದರೆ ಒಳ್ಳೆಯದು" ಎಂದು ಸಮೀಕ್ಷೆ ಕೊನೆಗೆ ಷರಾ ಬರೆದಿದೆ. ಆಲೂ ಚಿಪ್ಸ್ ಮತ್ತು ಮಸಾಲೆ ದೋಸೆ ತಿನ್ನುವ ಮೊದಲು ಯೋಚಿಸಿದರೆ ಒಳಿತು.

;

ಹಿಂದೆ ಮುಂದೆ ಗೊತ್ತಿಲ್ಲದೆ ಹಾಗೆ ಸುಮ್ಮನೆ ಸಮೀಕ್ಷೆ ಮಾಡುವವರ ವರದಿಯಾಗಿದ್ದರೆ " ಇದು ಆಲೂಗೆಡ್ಡೆ ಬೆಳೆಗಾರರ ವಿರುದ್ಧ, ವಿದ್ಯಾರ್ಥಿ ಭವನ್ ವಿರುದ್ದ, ಮೈಯಾಗಳ ವಿರುದ್ಧ , ಹಾಟ್ ಚಿಪ್ಸ್ ಉದ್ಯಮದ ವಿರುದ್ದ ಮಾಡಿದ ವ್ಯವಸ್ಥಿತ ಪಿತೂರಿ" ಎಂದು ಅಲ್ಲಗೆಳೆಯಬಹುದಾಗಿತ್ತು. ಆದರೆ, ಸರ್ವೇ ಕೈಗೊಂಡಿದ್ದು The New England Journal of Medicine

;

English summary

Biggest weight gain Foods | Potato Recipe | French fry | ಬೊಜ್ಜು ಹೆಚ್ಚಿಸುವ ಆಲೂ ಚಿಪ್ಸ್

Finally its confirmed : Potato chips, French fries, Masala dosa, aloo samosa and generally any potato products contribute to the biggest weight gain over time, according to a survey by the The New England Journal of Medicine.
Story first published: Friday, June 24, 2011, 11:51 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more