For Quick Alerts
ALLOW NOTIFICATIONS  
For Daily Alerts

ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

By Prasad
|
Puttaraju with his delicious recipes
ಒಂದು ರುಪಾಯಿಗೆ ಬೆಂಗಳೂರಿನಲ್ಲಿ ಏನು ಸಿಗುತ್ತದೆ ಹೇಳಿ? ಒಂದು ಪೆಪ್ಪರ್‌ಮಿಂಟ್ ಕೂಡ ಸಿಗಲಾರದು. ಪರಿಸ್ಥಿತಿ ಹೀಗಿರುವಾಗ ರೊಟ್ಟಿ, ಕುಲ್ಚಾ, ಚಪಾತಿ, ನಾನ್, ಪರೋಟಾ ಕೇವಲ ಒಂದು ರುಪಾಯಿಗೆ ಸಿಕ್ಕರೆ ಹೇಗೆ? ನಂಬಬೇಕಾದರೆ ಒಮ್ಮೆ ನಿಮ್ಮನ್ನು ನೀವೇ ಜಿಗುಟಿಕೊಳ್ಳಿ. ಹೌದು, ಈ ಐಟಂಗಳೆಲ್ಲ ಕೇವಲ ಒಂದೇ ರುಪಾಯಿಗೆ ಸಿಗುತ್ತಿವೆ. ಅದೂ ಬೆಂಗಳೂರಿನಲ್ಲಿ.

ಏನಾದರು ಮಾಡುತಿರು ಮಂಕುತಿಮ್ಮ ಎಂಬಂತೆ, ಜೆಪಿ ನಗರದ ರಂಗ ಶಂಕರದ ಬಳಿಯಿರುವ 'ಕಡಾಯಿ ಕಾ ಖಾನಾ' ಖಾನಾವಳಿಯ ಮಾಲಿಕ ಪುಟ್ಟರಾಜು ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ, ಈ ಆಫರು ಕೇವಲ 100 ದಿನಗಳ ಕಾಲ ಮಾತ್ರ ಲಭ್ಯವಿರಲಿದೆ. ನಂತರ ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

ಗ್ರಾಹಕರನ್ನು ಸೆಳೆಯಲು ಏನಾದರೂ ಮಾಡಿತಿರಬೇಕಲ್ಲ? ಕಳೆದ ವರ್ಷ ಇದೇ ಪುಟ್ಟರಾಜು ಅವರು ಕಬ್ಬನ್ ಪೇಟೆಯಲ್ಲಿರುವ ತಮ್ಮ ಹೋಟೆಲ್ 'ಬಿರಿಯಾನಿ ಬಜಾರ್'ನಲ್ಲಿ ಒಂದು ರುಪಾಯಿಗೆ ದೋಸೆ ಮತ್ತು ಇಡ್ಲಿಯನ್ನು ಸುಮಾರು ಆರು ತಿಂಗಳ ಕಾಲ ನೀಡಿದ್ದರು. ಗ್ರಾಹಕರ ಸಂತೃಪ್ತಿಯೇ ನಮ್ಮ ತೃಪ್ತಿ ಎಂಬ ಸಿದ್ಧಾಂತಕ್ಕೆ ಪುಟ್ಟರಾಜು ಜೋತು ಬಿದ್ದಿದ್ದಾರೆ.

ಗ್ರಾಹಕರ ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ಪುಟ್ಟರಾಜು ಅವರು ಈಗ ರೋಟಿ, ಚಪಾತಿ, ಕುಲ್ಚಾ, ಪರೋಟಾಗಳನ್ನು 1 ರುಪಾಯಿಗೆ ನೀಡಲು ಮುಂದಾಗಿದ್ದಾರೆ. ಗಮನಿಸಿ, ಇಡ್ಲಿ ಜೊತೆಗೆ ಚಟ್ನಿ ಉಚಿತವಾಗಿ ಸಿಗುವಂತೆ ಇವುಗಳೊಂದಿಗೆ ಪಲ್ಯ ಉಚಿತವಾಗಿ ಸಿಗುವುದಿಲ್ಲ. ಚಪಾತಿಗೆ 1 ರುಪಾಯಿ ಕೊಟ್ಟರೂ ಪಲ್ಯಕ್ಕೆ ಮಾಮೂಲಿ ಬೆಲೆ ತೆತ್ತು ಪಡೆಯಬೇಕು. ಬೆಲೆ ಕಡಿಮೆಯಿದ್ದರೂ ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಿಳಾಸ : ಕಡಾಯಿ ಕಾ ಖಜಾನಾ, ನಂ. 40, 2ನೇ ಹಂತ, ಜೆ.ಪಿ. ನಗರ, ಆರ್. ವಿಸಿಟ್ ಡೆಂಟಲ್ ಕಾಲೇಜು ಎದಿರು, ರಂಗ ಶಂಕರದ ಬಳಿ, ಬೆಂಗಳೂರು. ಪುಟ್ಟರಾಜು ಅವರ ಮೊಬೈಲ್ ಸಂಖ್ಯೆ : 99801 54451.

English summary

Roti, naan, kulcha, chapati just for 1 rupee | Innovative idea by Puttaraju | ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

Believe it or not. Roti, naan, chapati, kulcha are sold for just Rs. 1. Puttaraju, owner of Kadai Ka Khajana has come out with another innovative idea to attract customers in Bangalore. The hotel is situated near Ranga Shankara in JP Nagar.
Story first published: Tuesday, February 28, 2012, 18:57 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X