For Quick Alerts
ALLOW NOTIFICATIONS  
For Daily Alerts

ಎಲೆ ಅಡಾ-ಓಣಂ ಸ್ಪೆಷಲ್

|

ಎಲೆ ಅಡಾ ಕೇರಳ ಶೈಲಿಯ ಸಿಹಿ ತಿಂಡಿಯಾಗಿದೆ. ನಮ್ಮಲ್ಲಿ ಹಬ್ಬ ಹರಿದಿನಗಳಲ್ಲಿ ಕರ್ಜಿ ಕಾಯಿ, ಹೋಳಿಗೆ ಮಾಡುವಂತೆ ಕೇರಳದ ಹಬ್ಬಗಳಲ್ಲಿ ಈ ಎಲೆ ಅಡಾ ಇದ್ದೇ ಇರುತ್ತದೆ. ಈ ಎಲೆ ಅಡಾ ಸಿಹಿಯಾಗಿದ್ದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುವುದು.

ಇದನ್ನು ಕಡುಬಿನಷ್ಟೇ ಸರಳವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

Ela AdA Recipe-Kerala special

ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು 1 ಕಪ್
ಬಿಸಿ ನೀರು(ಹಿಟ್ಟು ಕಲೆಸಲು)
ರುಚಿಗೆ ತಕ್ಕ ಉಪ್ಪು
ಏಲಕ್ಕಿ ಪುಡಿ ಅರ್ಧ ಚಮಚ
ಬಾಳೆ ಎಲೆ 4 ಪೀಸ್

ಒಳಗೆ ತುಂಬಲು
ತೆಂಗಿನ ತುರಿ 1 ಕಪ್
ಬೆಲ್ಲ ಅರ್ಧ ಕಪ್
ಚಿಟಿಕೆಯಷ್ಟು ಉಪ್ಪು

ತಯಾರಿಸುವ ವಿಧಾನ:

* ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ.

* ಅಕ್ಕಿ ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಬಿಸಿ ನೀರು ಹಾಕಿ ರೊಟ್ಟಿಯ ಹದಕ್ಕೆ ಕಲೆಸಿ.

* ಈಗ ಬಾಳೆ ಎಲೆಯನ್ನು ತೊಳೆದು ಗ್ಯಾಸ್ ಗೆ ಹಿಡಿದು ಸ್ವಲ್ಪ ಬಿಸಿ ಮಾಡಿ. ನಂತರ ಚಿಕ್ಕ ತಟ್ಟೆ ಅಗಲಕ್ಕೆ ಆಯಾತಾಕಾರದಲ್ಲಿ ಕತ್ತರಿಸಿ.

* ಈಗ ಬಾಳೆ ಎಲೆಗೆ ಎಣ್ಣೆ ಸವರಿ ಅದರಲ್ಲಿ ಸ್ವಲ್ಪ ಕಲೆಸಿದ ಅಕ್ಕಿ ಹಿಟ್ಟು ಹಾಕಿ ಆಯಾತಾಕಾರದಲ್ಲಿ ತಟ್ಟಿ ಅದರಲ್ಲಿ ಸ್ವಲ್ಪ ತೆಂಗಿನ ತುರಿ ಮಿಶ್ರಣವನ್ನು ತುಂಬಿ ಎಲೆಯನ್ನು ಮಡಚಿ. ಈ ರೀತಿ ಉಳಿದ ಹಿಟ್ಟಿನಿಂದ ಮಾಡಿ.

* ಈಗ ಇಡ್ಲಿ ಪಾತ್ರೆಗೆ ನೀರು ಹಾಕಿ ಕುದಿಸಿ, ಅದರ ಮೇಲೆ ಒಂದು ಇಡ್ಲಿ ತಟ್ಟೆ ಇಟ್ಟು ಅದರ ಮೇಲೆ ಹಿಟ್ಟು ಹಾಕಿದ ಬಾಳೆ ಎಲೆಗಳನ್ನು ಇಟ್ಟು ಪಾತ್ರೆಯ ಬಾಯಿ ಮುಚ್ಚಿ ಆವಿಯಲ್ಲಿ 30 ನಿಮಿಷ ಬೇಯಿಸಿದರೆ ಎಲೆ ಅಡಾ ರೆಡಿ.

English summary

Ela AdA Recipe-Kerala special

Ela ada is a traditional Kerala delicacy. It is made of coconut and jaggery, which is layered inside the the rice paste in banana leaf.
X
Desktop Bottom Promotion