For Quick Alerts
ALLOW NOTIFICATIONS  
For Daily Alerts

ಸಮುದ್ರದಲ್ಲಿ ಸಿಗೋ ಏಡಿಗಿಂತ ಈ ನಾಟಿ ಏಡಿಯ ಗೀ ರೋಸ್ಟ್ ಎಷ್ಟು ಟೇಸ್ಟ್ ಗೊತ್ತಾ?

Posted By:
|

ಮಳೆಗಾಲ ಶುರು ಆಯ್ತು ಅಂದ್ರೆ ನಮ್ಮ ಕರಾವಳಿ ಮಂದಿಗೆ ಏನೋ ಖುಷಿ, ಯಾಕೆ ಗೊತ್ತಾ? ಅದೊಂಥರ ಸ್ಪೆಷಲ್ ಫುಡ್ ಗಳ ಸೀಸನ್. ಒಂದ್ ಕಡೆ ಮಾವು-ಹಲಸು ಆದ್ರೆ, ಮತ್ತೊಂದು ಕಡೆ ಏಡಿ-ಅಣಬೆ. ಇವತ್ತು ನಾವು ಹೊಳೆ-ತೊರೆಗಳಲ್ಲಿ ರಾತ್ರಿ ಹೋಗಿ ಬೇಟೆಯಾಡಿದಾಗ ಸಿಗೋ ನಾಟಿ ಏಡಿಯ ಗೀ ರೋಸ್ಟ್ ಮಾಡೋದು ಹೇಗೆ ಅಂತ ಹೇಳ್ತಾ ಇದೀನಿ.

Crab Ghee Roast Masala Recipe in Kannada
ಸಮುದ್ರದಲ್ಲಿ ಸಿಗೋ ಏಡಿಗಿಂತ ಈ ನಾಟಿ ಏಡಿಯ ಗೀ ರೋಸ್ಟ್ ಎಷ್ಟು ಟೇಸ್ಟ್ ಗೊತ್ತಾ?
ಸಮುದ್ರದಲ್ಲಿ ಸಿಗೋ ಏಡಿಗಿಂತ ಈ ನಾಟಿ ಏಡಿಯ ಗೀ ರೋಸ್ಟ್ ಎಷ್ಟು ಟೇಸ್ಟ್ ಗೊತ್ತಾ?
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Non Vegetarian

Serves: 3

Ingredients
  • ಬೇಕಾಗುವ ಸಾಮಗ್ರಿಗಳು:

    ಏಡಿ - 6,

    ತುಪ್ಪ - 2 ಚಮಚ,

    ತೆಂಗಿನೆಣ್ಣೆ - 5 ಚಮಚ

    ನೆನೆಸಿಡಲು: ಮೊಸರು - 1/4 ಕಪ್‌, ಅರಿಸಿನ ಪುಡಿ - 1/4 ಚಮಚ, ಮೆಣಸಿನಪುಡಿ - 1 ಚಮಚ, ಉಪ್ಪು - 1/2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಜೋಳದ ಹಿಟ್ಟು - 1 ಚಮಚ, ನಿಂಬೆರಸ - 1 ಚಮಚ

    ರುಬ್ಬಿಕೊಳ್ಳಲು: ಈರುಳ್ಳಿ - 1 ಚಿಕ್ಕದು, ಕೊತ್ತಂಬರಿ - 1 ಚಮಚ, ಕೆಂಪುಮೆಣಸು - 8, ಬೆಳ್ಳುಳ್ಳಿ - 6 ಎಸಳು, ಜೀರಿಗೆ - 1/2 ಟೀ ಚಮಚ, ಹುಣಸೆರಸ - ಸ್ವಲ್ಪ, ಉಪ್ಪು - ರುಚಿಗೆ

Red Rice Kanda Poha
How to Prepare
  • ತಯಾರಿಸುವ ವಿಧಾನ:

    1. ಮೊದಲು ಮೇಲೆ ನೆನೆಸಿಡಲು ತಿಳಿಸಿದ ಪದಾರ್ಥಗಳನ್ನು ಒಂದೊಂದೇ ಸೇರಿಸಿ ಮಿಕ್ಸ್ ಮಾಡಿ.

    2. ಅದರೊಂದಿಗೆ ಏಡಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ.

    3. ರುಬ್ಬಿಕೊಳ್ಳಲು ಹೇಳಿದ ಪದಾರ್ಥಗಳನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.

    4. ನಂತರ ಪ್ಯಾನ್ ಒಂದಕ್ಕೆ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಏಡಿ ತುಂಡುಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಏಡಿಯನ್ನು ತೆಗೆದಿರಿಸಿ.

    5. ಅದೇ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಸೇರಿಸಿ ಏಡಿ ನೆನೆಸಿಟ್ಟ ಉಳಿದ ಮಸಾಲೆ ಹಾಗೂ ರುಬ್ಬಿಕೊಂಡ ಮಸಾಲೆ ಸೇರಿಸಿ ಮೀಡಿಯಂ ಉರಿಯಲ್ಲಿ ಕುದಿಸಿ. ಮಸಾಲೆ ಕಂದು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು.

    6. ನಂತರ ಮೊದಲೇ ಹುರಿದುಕೊಂಡ ಏಡಿಯನ್ನು ಮಸಾಲೆಗೆ ಸೇರಿಸಿ ಅದಕ್ಕೆ 1/4 ಕಪ್‌ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಏಡಿಗೆ ಚೆನ್ನಾಗಿ ಹಿಡಿಯಬೇಕು.

    7. ನಂತರ ಕೊನೆಯದಾಗಿ ಅದಕ್ಕೆ ತುಪ್ಪ ಸೇರಿಸಿ.

    8. ಬಿಸಿ ಇರುವಾಗಲೇ ತಿನ್ನುವುದು ಚೆಂದ.

Instructions
Nutritional Information
  • People - 3
  • ಕಾರ್ಬ್ಸ್ - 17.35 g
  • ಕೊಬ್ಬು - 17.96 g
  • ಪ್ರೋಟೀನ್ - 11.32 g
  • ಫೈಬರ್ - 3.47 g
[ 3.5 of 5 - 44 Users]
Story first published: Wednesday, June 16, 2021, 17:39 [IST]
X
Desktop Bottom Promotion