For Quick Alerts
ALLOW NOTIFICATIONS  
For Daily Alerts

ಕೊರಿಯಾಂಡರ್‌ ಚಿಕನ್‌ ರೋಸ್ಟ್‌ ರೆಸಿಪಿ

|

ಮಾನ್ಸೂನ್ ಕಾಲ ಶುರುವಾಗಿದೆ. ಜಿಟಿಜಿಟಿ ಮಳೆ, ಚಳಿಯ ವಾತಾವರಣ ಇದರ ನಡುವೆ ರುಚಿಕರವಾದ ಚಿಕನ್‌ ರೆಸಿಪಿ ಇದ್ದರೆ ಆಹಾ ಅದ್ಭುತ....

ಶಾಖಾಹಾರಿಗಳಿಗೆ ಚಳಿಗಾಲದಲ್ಲಿ ಬೇಕೆ ಬೇಕು ಅನಿಸುವ ಅಡುಗೆ ಚಿಕನ್‌ ಖಾದ್ಯಗಳು. ಇದುವರೆಗೂ ನಿಮ್ಮದೇ ಆದ ಶೈಲಿಯಲ್ಲಿ, ಒಂದೇ ರುಚಿಯಲ್ಲಿ ಚಿಕನ್‌ ಖಾದ್ಯಗಳನ್ನು ಮಾಡಿ ಬೋರ್‌ ಆಗಿದ್ದರೆ ವಿಭಿನ್ನ ರುಚಿಯನ್ನು ತಯಾರಿಸಿ ನೋಡಿ.

ರೆಸಿಪಿ

ಇಂದು ಚಿಕನ್‌ನಿಂದ ತಯಾರಿಸಬಹುದಾದ ಕೊರಿಯಾಂಡರ್‌ ಚಿಕನ್‌ ರೆಸಿಪಿ ಅಥವಾ ಸಿಲಾಂಟ್ರೋ ಚಿಕನ್ ರೋಸ್ಟ್ ಅನ್ನು ಮಾಡುವ ಹಂತಹಂತದ ವಿಧಾನವನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ. ನೀವು ಒಮ್ಮೆ ಮಾಡಿ ನೋಡಿ:

coriander chicken roast recipe/ಸಿಲಾಂಟ್ರೋ ಚಿಕನ್ ರೋಸ್ಟ್
coriander chicken roast recipe/ಸಿಲಾಂಟ್ರೋ ಚಿಕನ್ ರೋಸ್ಟ್
Prep Time
30 Mins
Cook Time
20M
Total Time
50 Mins

Recipe By: Boldsky

Recipe Type: Snacks

Serves: 2

Ingredients
  • ಬೇಕಾಗುವ ಪದಾರ್ಥಗಳು

    * ಚಿಕನ್ - 500 ಗ್ರಾಂ

    * ಮೆಣಸಿನ ಪುಡಿ - 1 ಚಮಚ

    * ಗರಂ ಮಸಾಲ - 1 ಚಮಚ

    * ಅರಿಶಿನ - 1/4 ಚಮಚ

    * ಉಪ್ಪು - ರುಚಿಗೆ

    * ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ

    * ಕೊತ್ತಂಬರಿ ಮತ್ತು ಪುದೀನ ಪೇಸ್ಟ್‌ - 3/4 ಕಪ್

    * ಎಣ್ಣೆ - 2 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ

    * ಶುಭ್ರವಾಗಿ ತೊಳೆದ ಚಿಕನ್‌ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಗಂಟೆ ನೆನೆಸಿಡಿ.

    * ಒಂದು ಗಂಟೆಯ ನಂತರ ಪ್ಯಾನ್‌ಗೆಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ನೆನೆಸಿದ ಚಿಕನ್ ಅನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.

    * ಚಿಕನ್ ಎಣ್ಣೆಯಲ್ಲೆ ಸಂಪೂರ್ಣವಾಗಿ ಬೇಯಬೇಕು, ನೀರನ್ನು ಹಾಕುವಂತಿಲ್ಲ.

    * ಚಿಕನ್ ಚೆನ್ನಾಗಿ ಬೆಂದ ನಂತರ ಗ್ಯಾಸ್‌ ಆಫ್ ಮಾಡಿ 5 ನಿಮಿಷ ಬಿಡಿ.

    * ಈಗ ರುಚಿಯಾದ ಸಿಲಾಂಟ್ರೋ ಚಿಕನ್ ರೋಸ್ಟ್ ಸವಿಯಲು ಸಿದ್ಧ.

Instructions
  • ನಿಮಗೆ ಇಷ್ಟವಿದ್ದರೆ ಇದಕ್ಕೆ ಚಿಕನ್‌ ಬೇಯುವಾಗ 2ಚಮಚ ವೈನ್‌ ಅನ್ನು ಹಾಕಬಹುದು.
Nutritional Information
  • ಕ್ಯಾಲೋರಿ - 284
  • ಕೊಬ್ಬು - 6.2 ಗ್ರಾಂ
  • ಪ್ರೋಟೀನ್‌ - 53.4 ಗ್ರಾಂ
[ 4.5 of 5 - 56 Users]
Story first published: Wednesday, June 30, 2021, 11:20 [IST]
X
Desktop Bottom Promotion