For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ತೆಂಗಿನಕಾಯಿ ಬೆಲ್ಲ ಬರ್ಫಿ ರೆಸಿಪಿ

Posted By:
|

ಸಿಹಿಪ್ರಿಯರಿಗೆ ಬರ್ಫಿ ಇಷ್ಟವಾಗದೇ ಇರದು. ಮಾರುಕಟ್ಟೆಯಲ್ಲಿ ನಾನಾತರಹದ ಬರ್ಫಿಗಳಿದ್ದರೂ, ಮನೆಯಲ್ಲಿಯೇ ತಯಾರಿಸುವ ಬರ್ಫಿಗೆ ರುಚಿ ಹೆಚ್ಚು. ಆದ್ದರಿಂದ ನಾವಿಂದು ಮನೆಯಲ್ಲಿಯೇ ಸುಲಭವಾಗಿ, ತೆಂಗಿನಕಾಯಿ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

Coconut burfi recipe with jaggery in Kannada | coconut barfi with jaggery | jaggery barfi

ತೆಂಗಿನಕಾಯಿ ಬೆಲ್ಲ ಬರ್ಫಿ ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಬಾಯಲ್ಲಿ ನೀರೂರಿಸುವ ತೆಂಗಿನಕಾಯಿ ಬೆಲ್ಲ ಬರ್ಫಿ ರೆಸಿಪಿ
ಬಾಯಲ್ಲಿ ನೀರೂರಿಸುವ ತೆಂಗಿನಕಾಯಿ ಬೆಲ್ಲ ಬರ್ಫಿ ರೆಸಿಪಿ
Prep Time
10 Mins
Cook Time
50M
Total Time
1 Hours0 Mins

Recipe By: Shreeraksha

Recipe Type: Sweets

Serves: 2

Ingredients
  • ಬೇಕಾಗುವ ಪದಾರ್ಥಗಳು:

    4 ಕಪ್ ತೆಂಗಿನಕಾಯಿ (ತುರಿದ)

    2 ಚಮಚ ತುಪ್ಪ

    2½ ಕಪ್ ಬೆಲ್ಲ

    ½ ಟೀಸ್ಪೂನ್ ಏಲಕ್ಕಿ ಪುಡಿ

    1 ಟೀಸ್ಪೂನ್ ತುಪ್ಪ

    ¼ ಕಪ್ ಹಾಲು

    ½ ಕಪ್ ಹಾಲಿನ ಪುಡಿ

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮೊದಲನೆಯದಾಗಿ, ಮಿಕ್ಸರ್ ಜಾರ್ನಲ್ಲಿ 4 ಕಪ್ ತೆಂಗಿನಕಾಯಿಯನ್ನು ತೆಗೆದುಕೊಂಡು ಒರಟಾಗಿ ರುಬ್ಬಿಕೊಂಡು, ಪಕ್ಕಕ್ಕೆ ಇರಿಸಿ.
    • ದೊಡ್ಡ ಕಡಾಯಿಯಲ್ಲಿ 2 ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನಕಾಯಿಯನ್ನು ಸೇರಿಸಿ.
    • 2 ನಿಮಿಷ ಅಥವಾ ತೆಂಗಿನಕಾಯಿ ಸುವಾಸನೆ ಹೋಗುವವರೆಗೆ ಹುರಿಯಿರಿ. ತೆಂಗಿನಕಾಯಿ ಕಂದುಬಣ್ಣವಾಗದಂತೆ ನೋಡಿಕೊಳ್ಳಿ.
    • ಈಗ 2½ ಕಪ್ ಬೆಲ್ಲವನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    • ಬೆಲ್ಲವು ಕರಗಿ ಚೆನ್ನಾಗಿ ಸೇರಿಕೊಳ್ಳುವವರೆಗೆ ಬೇಯಿಸುತ್ತಿರಿ.
    • ಮತ್ತೊಂದು, ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಅದಕಕೆ ¼ ಕಪ್ ಹಾಲು ಸೇರಿಸಿ ಜೊತೆಗೆ ½ ಕಪ್ ಹಾಲಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    • ಮಿಶ್ರಣವು ಪ್ಯಾನ್ ಬಿಡಲು ಪ್ರಾರಂಭವಾಗುವವರೆಗೆ ಬೆರೆಸಿ.
    • ಇದನ್ನು ತೆಂಗಿನ ಬೆಲ್ಲದ ಮಿಶ್ರಣಕ್ಕೆ ವರ್ಗಾಯಿಸಿ, ಮಿಶ್ರಣವು ಆಕಾರವನ್ನು ಹಿಡಿದಿಡಲು ಪ್ರಾರಂಭಿಸುವವರೆಗೆ ಬೇಯಿಸುವುದನ್ನು ಮುಂದುವರಿಸಿ.
    • ಈಗ ½ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 1 ಟೀಸ್ಪೂನ್ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    • ಇದನ್ನು ಬೇಕಿಂಗ್ ಪೇಪರ್ನಿಂದ ಮುಚ್ಚಿದ ಟ್ರೇಗೆ ವರ್ಗಾಯಿಸಿ, ಒತ್ತಿ, ಲೆವೆಲ್ ಅಪ್ ಮಾಡಿ ಮತ್ತು 2 ಗಂಟೆಗಳ ಕಾಲ ಬಿಡಿ.
    • 2 ಗಂಟೆಗಳ ನಂತರ, ಬರ್ಫಿಯನ್ನು ಬಿಡಿಸಿ, ತುಂಡುಗಳಾಗಿ ಕತ್ತರಿಸಿದರೆ, ಸವಿಯಲು ಸಿದ್ಧ.
Instructions
Nutritional Information
  • People - 2
  • ಕ್ಯಾಲೋರಿಗಳು: - 188 ಕೆ.ಕೆ.ಎಲ್
  • 1 ಗ್ರಾಂ - 8 ಗ್ರಾಂ
  • ಪ್ರೋಟೀನ್: - 1 ಗ್ರಾಂ
  • ಕಾರ್ಬೋಹೈಡ್ರೇಟ್ಗಳು: - 28 ಗ್ರಾಂ
[ 5 of 5 - 92 Users]
Story first published: Wednesday, December 22, 2021, 10:40 [IST]
X
Desktop Bottom Promotion