For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2019ರ ವಿಶೇಷ-ತೆಂಗಿನಕಾಯಿ ಬರ್ಫಿ ರೆಸಿಪಿ

Posted By: Divya pandith
|

ಶ್ರೀಕೃಷ್ಣಾಷ್ಟಮಿ ಬಂತೆಂದರೆ ಸಂಭ್ರಮದ ಜತೆಗೆ ತಿಂಡಿತಿನಿಸುಗಳೂ ಮಹತ್ತರ ಪಾತ್ರ ವಹಿಸುತ್ತವೆ. ಚಕ್ಕುಲಿ, ಎಳ್ಳುಂಡೆ, ಕಡುಬು, ಕಡಲೇಕಾಯಿ ಉಂಡೆ, ಹರಳು ಉಂಡೆ, ಪಂಚಕಜ್ಜಾಯ ಸಹಿತ ಹಲವಾರು ಖಾದ್ಯಗಳು ಮನೆ-ಮನೆಯಲ್ಲಿ ಕಾಣಸಿಗುತ್ತವೆ. ಈ ಸಾಲಿನ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 24ರ ಶನಿವಾರದಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ತಿಂಡಿಪ್ರಿಯ ಕೃಷ್ಣನಿಗೆ ನೈವೇದ್ಯಕ್ಕಿಡಲು ತೆಂಗಿನಕಾಯಿ ಬರ್ಫಿ ಮಾಡುವ ವಿಧಾನವನ್ನು ತಿಳಿಯೋಣ.

ತೆಂಗಿನಕಾಯಿ ಬರ್ಫಿ ಎನ್ನುವುದು ಭಾರತೀಯರ ಸಾಂಪ್ರದಾಯಿಕ ಸಿಹಿ ತಿಂಡಿ. ಕುಟಂಬದ ವಿಶೇಷ ಕಾರ್ಯಗಳಲ್ಲಿ ಹಾಗೂ ಹಬ್ಬಗಳ ಸಂದರ್ಭದಲ್ಲಿ ಇದನ್ನು ತಯಾರಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ಹೆಚ್ಚು ತಯಾರಿಸುವ ಈ ಸಿಹಿ ತಿಂಡಿಗೆ ತೆಂಗಿನಕಾಯಿ ಮತ್ತು ಸಕ್ಕರೆಯೇ ಪ್ರಮುಖ ಪದಾರ್ಥಗಳು. ಆಯಾ ಪ್ರದೇಶಕ್ಕೆ ಅನುಗುಣವಾಗಿ ಇದನ್ನು ಕೊಬ್ಬರಿ ಬರ್ಫಿ, ತೆಂಗಿನ ಕಾಯಿ ಬರ್ಫಿ ಹಾಗೂ ನಾರಿಯಲ್ ಬರ್ಫಿ ಎಂತಲೂ ಕರೆಯುತ್ತಾರೆ.

ತಮಿಳುನಾಡಿನಲ್ಲಿ ತೆಂಗೈ ಬರ್ಫಿ ಎಂದು ಕರೆಯಲ್ಪಡುವ ಈ ಸಿಹಿ ತಿಂಡಿ ರಸಭರಿತವಾಗಿದ್ದು, ಹೊರ ಭಾಗದಲ್ಲಿ ಕುರುಕಲಾಗಿರುತ್ತದೆ. ತೆಂಗಿನಕಾಯಿಯ ರಸಭರಿತ ಹೂರಣ ಸಕ್ಕರೆಯೊಂದಿಗೆ ಸಂಯೋಜಿಲ್ಪಡುತ್ತದೆ. ಇದು ನಾಲಿಗೆಯನ್ನು ಚಪ್ಪರಿಸುವಂತೆ ಮಾಡುವುದು.

ಈ ಸಿಹಿ ತಿಂಡಿಗೆ ತುಪ್ಪ ಮತ್ತು ಬೆಣ್ಣೆಯಂತಹ ಯಾವುದೇ ದುಬಾರಿ ಪದಾರ್ಥಗಳ ಬಳಕೆ ಇಲ್ಲದೆ ಸರಳವಾಗಿ ತಯಾರಿಸಬಹುದು. ಹಾಗಾಗಿ ಇದನ್ನು ಅಗ್ಗದ ತಿಂಡಿ ಎಂತಲೂ ಕರೆಯುತ್ತಾರೆ. ನೀವೂ ಈ ಸರಳ ಸಿಹಿ ತಿಂಡಿಯನ್ನು ತಯಾರಿಸಲು ಬಯಸಿದರೆ, ನಾವಿಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

ತೆಂಗಿನಕಾಯಿ ಬರ್ಫಿ ವಿಡಿಯೋ ರೆಸಿಪಿ

coconut burfi recipe
ತೆಂಗಿನಕಾಯಿ ಬರ್ಫಿ ರೆಸಿಪಿ | ಕೊಬ್ಬರಿ ಬರ್ಫಿ ರೆಸಿಪಿ | ತೆಂಗಿನಕಾಯಿ ಬರ್ಫಿ ವಿಡಿಯೋ ರೆಸಿಪಿ
ತೆಂಗಿನಕಾಯಿ ಬರ್ಫಿ ರೆಸಿಪಿ | ಕೊಬ್ಬರಿ ಬರ್ಫಿ ರೆಸಿಪಿ | ತೆಂಗಿನಕಾಯಿ ಬರ್ಫಿ ವಿಡಿಯೋ ರೆಸಿಪಿ
Prep Time
10 Mins
Cook Time
20M
Total Time
1 Hours 20 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 12 ಉಂಡೆ

Ingredients
  • ಹಚ್ಚಿಕೊಂಡ ತೆಂಗಿನಕಾಯಿ - 1

    ನೀರು - 1/4 ಕಪ್

    ಸಕ್ಕರೆ - 1 ಕಪ್

    ತಾಜಾ ಕೆನೆ (ಮಲೈ) - 1/2 ಕಪ್

    ಹಾಲು - 1/2 ಕಪ್

    ತುಪ್ಪ - 1 ಟೀ ಚಮಚ (ಹಚ್ಚಿಕೊಳ್ಳಲು/ಸವರಲು)

    ಹಚ್ಚಿಕೊಂಡ ಗೋಡಂಬಿ - 2 ಟೀ ಚಮಚ + ಅಲಂಕಾರಕ್ಕೆ

    ಏಲಕ್ಕಿ ಪುಡಿ - 1 ಟಿಚಮಚ

Red Rice Kanda Poha
How to Prepare
  • 1. ತೆಂಗಿನಕಾಯಿಯನ್ನು ಮಿಕ್ಸರ್ ಜಾರಿನಲ್ಲಿ ಹಾಕಿಕೊಳ್ಳಿ.

    2. 1/4 ಕಪ್ ನೀರನ್ನು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಬೇಕು.

    3. ಬಿಸಿಯಾದ ದಪ್ಪ ತಳದ ಪಾತ್ರೆಗೆ ರುಬ್ಬಿಕೊಂಡ ತೆಂಗಿನಕಾಯಿಯನ್ನು ಹಾಕಿ.

    4. ಮಿಶ್ರಣದಲ್ಲಿರುವ ನೀರಿನಂಶ ಆರುವ ತನಕ ಹುರಿಯಿರಿ.

    5. ನಂತರ ಸಕ್ಕರೆಯನ್ನು ಸೇರಿಸಿ.

    6. ಚೆನ್ನಾಗಿ ತಿರುವಿ. ಒಂದು ಮುಚ್ಚಳವನ್ನು ಮುಚ್ಚಿಡಿ.

    7. ಮಿಶ್ರಣದಲ್ಲಿರುವ ನೀರಿನಂಶ ಆರುವ ವರೆಗೆ, 5 ನಿಮಿಷಗಳ ಕಾಲ ಬೇಯಲು ಬಿಡಿ.

    8. ತಾಜಾ ಕೆನೆ, ಹಾಲು ಮತ್ತು ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.

    9. ಮಿಶ್ರಣವು ದಪ್ಪವಾಗಿ, ಸ್ವಲ್ಪ ಒಣಗಿದಂತಾಗುವವರೆಗೆ ಮುಚ್ಚಳವನ್ನು ಮುಚ್ಚಿಡಿ.

    10. ಒಮ್ಮೆ ಆದ ಮೇಲೆ, ಹೆಚ್ಚಿಕೊಂಡ ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ.

    11. ಒಂದು ಪ್ಲೇಟ್‍ಗೆ/ತಟ್ಟೆಗೆ ತುಪ್ಪವನ್ನು ಸವರಿಕೊಂಡು, ತಯಾರುಗೊಂಡ ಮಿಶ್ರಣವನ್ನು ವರ್ಗಾಯಿಸಿ.

    12. ತಕ್ಷಣವೇ ಮಿಶ್ರಣವನ್ನು ತಟ್ಟೆಯ ತುಂಬಾ ಹರಡಿ.

    13. ಇದರ ಮೇಲೆ ಗೋಡಂಬಿಯ ಅಲಂಕಾರ ಮಾಡಿ, ಒಂದು ಗಂಟೆಗಳ ಕಾಲ ತಣ್ಣಗಾಗಲು/ಆರಲು ಬಿಡಿ.

    14. ಒಮ್ಮೆ ತಣಿದ ಮೇಲೆ, ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಸವಿಯಲು ನೀಡಿ.

Instructions
  • 1. ನೀವು ತಾಜಾ ತೆಂಗಿನಕಾಯಿಯ ಬದಲಿಗೆ ಒಣ ತೆಂಗಿನಕಾಯನ್ನು ಬಳಸಬಹುದು.
  • 2. ಸಕ್ಕರೆಯ ಬದಲಿಗೆ ಬೆಲ್ಲವನ್ನು ಉಪಯೋಗಿಸಬಹುದು. ಆದರೆ ಬರ್ಫಿಯ ರುಚಿಯಲ್ಲಿ ಸಂಪೂರ್ಣವಾದ ಬದಲಾವಣೆ ಇರುತ್ತದೆ.
Nutritional Information
  • ಸರ್ವಿಂಗ್ ಸೈಜ್ - 1 ತುಂಡು/ಪೀಸ್
  • ಕ್ಯಾಲೋರೀಸ್ - 59 ಕ್ಯಾಲ್
  • ಫ್ಯಾಟ್ - 3 ಗ್ರಾಂ.
  • ಪ್ರೋಟೀನ್ - 1 ಗ್ರಾಂ.
  • ಕಾರ್ಬೋಹೈಡ್ರೇಟ್ - 8 ಗ್ರಾಂ.
  • ಸಕ್ಕರೆ - 7 ಗ್ರಾಂ.

ತೆಂಗಿನಕಾಯಿ ಬರ್ಫಿ ರೆಸಿಪಿ ಮಾಡುವ ವಿಧಾನ:

1. ತೆಂಗಿನಕಾಯಿಯನ್ನು ಮಿಕ್ಸರ್ ಜಾರಿನಲ್ಲಿ ಹಾಕಿಕೊಳ್ಳಿ.

coconut burfi recipe

2. 1/4 ಕಪ್ ನೀರನ್ನು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಬೇಕು.

coconut burfi recipe
coconut burfi recipe

3. ಬಿಸಿಯಾದ ದಪ್ಪ ತಳದ ಪಾತ್ರೆಗೆ ರುಬ್ಬಿಕೊಂಡ ತೆಂಗಿನಕಾಯಿಯನ್ನು ಹಾಕಿ.

coconut burfi recipe

4. ಮಿಶ್ರಣದಲ್ಲಿರುವ ನೀರಿನಂಶ ಆರುವ ತನಕ ಹುರಿಯಿರಿ.

coconut burfi recipe

5. ನಂತರ ಸಕ್ಕರೆಯನ್ನು ಸೇರಿಸಿ.

coconut burfi recipe

6. ಚೆನ್ನಾಗಿ ತಿರುವಿ. ಒಂದು ಮುಚ್ಚಳವನ್ನು ಮುಚ್ಚಿಡಿ.

coconut burfi recipe

7. ಮಿಶ್ರಣದಲ್ಲಿರುವ ನೀರಿನಂಶ ಆರುವ ವರೆಗೆ, 5 ನಿಮಿಷಗಳ ಕಾಲ ಬೇಯಲು ಬಿಡಿ.

coconut burfi recipe

8. ತಾಜಾ ಕೆನೆ, ಹಾಲು ಮತ್ತು ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.

coconut burfi recipe
coconut burfi recipe
coconut burfi recipe
coconut burfi recipe

9. ಮಿಶ್ರಣವು ದಪ್ಪವಾಗಿ, ಸ್ವಲ್ಪ ಒಣಗಿದಂತಾಗುವವರೆಗೆ ಮುಚ್ಚಳವನ್ನು ಮುಚ್ಚಿಡಿ.

coconut burfi recipe

10. ಒಮ್ಮೆ ಆದ ಮೇಲೆ, ಹೆಚ್ಚಿಕೊಂಡ ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ.

coconut burfi recipe
coconut burfi recipe
coconut burfi recipe

11. ಒಂದು ಪ್ಲೇಟ್‍ಗೆ/ತಟ್ಟೆಗೆ ತುಪ್ಪವನ್ನು ಸವರಿಕೊಂಡು, ತಯಾರುಗೊಂಡ ಮಿಶ್ರಣವನ್ನು ವರ್ಗಾಯಿಸಿ.

coconut burfi recipe
coconut burfi recipe

12. ತಕ್ಷಣವೇ ಮಿಶ್ರಣವನ್ನು ತಟ್ಟೆಯ ತುಂಬಾ ಹರಡಿ.

coconut burfi recipe

13. ಇದರ ಮೇಲೆ ಗೋಡಂಬಿಯ ಅಲಂಕಾರ ಮಾಡಿ, ಒಂದು ಗಂಟೆಗಳ ಕಾಲ ತಣ್ಣಗಾಗಲು/ಆರಲು ಬಿಡಿ.

coconut burfi recipe
coconut burfi recipe

14. ಒಮ್ಮೆ ತಣಿದ ಮೇಲೆ, ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಸವಿಯಲು ನೀಡಿ.

coconut burfi recipe
coconut burfi recipe
[ 3.5 of 5 - 46 Users]
X
Desktop Bottom Promotion