For Quick Alerts
ALLOW NOTIFICATIONS  
For Daily Alerts

ನಾಲಗೆಯ ರುಚಿ ಹೆಚ್ಚಿಸುವ ವಿವಿಧ ಬಗೆಯ ಚಟ್ನಿ

By Suma
|

ನಾವು ಭಾರತೀಯರು ಆಹಾರ ಪ್ರಿಯರು. ಊಟಕ್ಕೆ ಕುಳಿತಾಗ ಅನ್ನದೊಂದಿಗೆ ಎಷ್ಟೇ ವ್ಯಂಜನಗಳಿರಲಿ ಉಪ್ಪಿನಕಾಯಿ ಬೇಕೇ ಬೇಕು ಎಂಬ ಕಟ್ಟುನಿಟ್ಟು ಉಳ್ಳವರು. ಶಿಸ್ತುಬದ್ಧವಾಗಿ ಭೋಜವನ್ನು ನಡೆಸಬೇಕು ಎಂಬ ನೀತಿಗೆ ಬದ್ಧರಾಗಿ ಊಟದಲ್ಲಿ ಹಲವಾರು ಕ್ರಮಗಳನ್ನು ನಾವು ಹೊರತಂದಿರುವೆವು. ಊಟವಿರಲಿ ತಿಂಡಿಯಿರಲಿ ಅಥವಾ ಕಾಫಿ ಟೀಯೊಂದಿಗೆ ಸೇವಿಸುವ ಕುರುಕಲೇ ಇರಲಿ ಅಲ್ಲೊಂದು ಕ್ರಮ ಅಂತೆಯೇ ವ್ಯವಸ್ಥೆಯನ್ನು ನಾವು ಪಾಲಿಸುತ್ತೇವೆ.

ಪಾಕದಲ್ಲಿ ತರೇಹವಾರಿ ಸಂಶೋಧನೆಗಳನ್ನು ನಡೆಸುವುದರಲ್ಲಿ ಭಾರತೀಯ ಗೃಹಿಣಿಯರು ಎತ್ತಿದ ಕೈ. ಕಸದಿಂದಲೇ ರಸ ಉತ್ಪಾದಿಸುವ ನೈಪುಣ್ಯ ನಮ್ಮ ಗೃಹಿಣಿಯರಿಗೆ ಉದಾತ್ತವಾಗಿ ಬಂದಿರುವಂಥದ್ದು. ಅಡುಗೆಗೆ ಸಾಮಾಗ್ರಿ ಸೀಮಿತವಾಗಿಯೇ ಇರಲಿ ಅದರಲ್ಲೇ ಹಿತಮಿತವಾಗಿ ಚೊಕ್ಕವಾಗಿ ಅಡುಗೆ ಮಾಡಿ ಬಣಿಸುವ ಕಲೆಗಾರಿಗೆ ಹೆಂಗಳೆಯರಿಗಿದೆ. ಇಂದಿನ ಲೇಖನದಲ್ಲಿ ಇಂತಹ ಕೌಶಲ್ಯಗಳಿಂದಲೇ ಮೂಡಿ ಬಂದಿರುವ ತರೇಹವಾರಿ ಚಟ್ನಿ ರೆಸಿಪಿಗಳತ್ತ ನಾವು ನಿಮ್ಮನ್ನು ಕರೆದೊಯ್ಯಲಿರುವೆವು. ಚಟ್ನಿ ಎಂದರೆ ಬರೀಯ ತೆಂಗಿನ ತುರಿ, ಒಂದಿಷ್ಟು ಉಪ್ಪು, ಹುಳಿ ಹಾಕಿ ತಯಾರಿಸುವುದಲ್ಲ ವಿಧ ಬಗೆಯಲ್ಲಿ ಅನೂಹ್ಯವಾಗಿ ತಯಾರಿಸುವ ಚಟ್ನಿ ರೆಸಿಪಿಗಳು ಇಲ್ಲಿವೆ ಮುಂದೆ ಓದಿ..

Mouth watering Variety styles of chutney recipe

ಕಡಲೆ ಬೇಳೆಯ ಚಟ್ನಿ
ದಿನಾಲೂ ದೋಸೆ ಅಥವಾ ಇಡ್ಲಿಗೆ ಒಂದೇ ಬಗೆಯ ಕಾಯಿಚಟ್ನಿಯನ್ನೇ ತಿಂದು ನಿಮ್ಮ ಮನೆಯವರಿಗೆ ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ಅವರಿಗೆ ಸ್ವಾದಿಷ್ಟವಾದ ಕಡಲೆ ಬೇಳೆಯ ಚಟ್ನಿಯನ್ನು ಮುಂದಿನ ಬಾರಿ ಬಡಿಸಿ ನೋಡಿ ಖಂಡಿತವಾಗಿಯೂ ಇಷ್ಟ ಪಡದೇ ಇರಲಾರರು.
ಕಡಲೆ ಬೇಳೆಯ ಚಟ್ನಿಯನ್ನು ತಯಾರಿಸಲು ಹಲವಾರು ಮಸಾಲೆವಸ್ತುಗಳ ಅಗತ್ಯವಿದೆ. ಈ ಮಸಾಲೆಗಳಿಂದಲೇ ಚಟ್ನಿಗೆ ವಿಶಿಷ್ಟವಾದ ಸ್ವಾದ ಲಭಿಸುತ್ತದೆ. ಆದರೆ ಇದಕ್ಕೆ ಬಳಸಲಾಗುವ ಹುಣಸೆಹುಳಿಯ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟೇ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಇಲ್ಲದಿದ್ದರೆ ಚಟ್ನಿ ಹೆಚ್ಚು ಹುಳಿಯಾಗುತ್ತದೆ. ಸರಿ, ಇನ್ನೇಕೆ ತಡ..? ಕಡಲೆ ಬೇಳೆ ಚಟ್ನಿ ಮಾಡುವ ವಿಧಾನಕ್ಕಾಗಿ ಲಿಂಕ್ ಕ್ಲಿಕ್ ಮಾಡಿ ಬಿಸಿಬಿಸಿ ದೋಸೆಗೆ ಸಾಥ್ ನೀಡುವ ಕಡಲೆ ಬೇಳೆಯ ಚಟ್ನಿ

ಶುಂಠಿ-ಕಾಯಿ ಚಟ್ನಿ

ಬೆಳಗಿನ ಜಾವ ಬೇಗನೆ ಎದ್ದು, ಅಕ್ಕರೆಯಿಂದ ತಯಾರಿಸಿದ ರುಚಿಕರ ಇಡ್ಲಿಯನ್ನು ಮನೆಯವರು ಪೂರ್ತಿಯಾಗಿ ಖಾಲಿ ಮಾಡಿಲ್ಲವೇ? ಕೆಲವಾರು ಉಳಿದೇ ಹೋದವೇ? ಇದಕ್ಕೆ ಇಡ್ಲಿ ಕಾರಣವಾಗಿರಲಿಕ್ಕಿಲ್ಲ, ಬದಲಿಗೆ ಅದೇ ಹಳೆಯ ರುಚಿಯ ಚಟ್ನಿ ಕಾರಣವಾಗಿರಬಹುದು! ಚಿಂತಿಸದಿರಿ ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿಮಗೆ ಅಗತ್ಯವಿರುವುದು ಕೇವಲ ಹತ್ತು ನಿಮಿಷ ಮತ್ತು ಸ್ವಲ್ಪ ಶುಂಠಿ ಮಾತ್ರ..! ಅಚ್ಚರಿವಾಯಿತೇ..? ಬನ್ನಿ ಶುಂಠಿ ಚಟ್ನಿ ರೆಸಿಪಿ ಮಾಡುವ ವಿಧಾನವನ್ನು ನೋಡೋಣ... ರುಚಿರುಚಿಯಾದ ಶುಂಠಿ-ಕಾಯಿ ಚಟ್ನಿ: ಹತ್ತೇ ನಿಮಿಷದಲ್ಲಿ ರೆಡಿ!

ಟೊಮೇಟೊ ಚಟ್ನಿ
ಇಂದಿನ ಆಧುನಿಕ ಯುಗದಲ್ಲಿ ಸರಳವಾದ ಆಹಾರವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಗಡಿಬಿಡಿಯ ಜೀವನದಲ್ಲಿ ಸರಳವಾಗಿ ತಯಾರಿಸಬಹುದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಖಾದ್ಯವನ್ನು ಎಲ್ಲರೂ ಇಷ್ಟಪಡುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ಟೊಮೇಟೊ ಚಟ್ನಿ. ಹೌದು ಅದು ದೋಸೆಯಾಗಿರಲಿ, ಅಥವಾ ಚಪಾತಿಯಾಗಿರಲಿ ತನ್ನ ಹುಳಿ-ಸಿಹಿ ಮಿಶ್ರಿತ ರುಚಿಯಿಂದಲೇ, ಖಾದ್ಯದ ರುಚಿಯನ್ನು ಇಮ್ಮಡಿಸುತ್ತದೆ.... ಹಾಗಾದರೆ ಇನ್ನೇಕೆ ತಡ ನೀವು ಪ್ರಯತ್ನಿಸುತ್ತೀರಲ್ಲವೇ...? ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!

ಕ್ಯಾರೆಟ್ ನಿಂದ ರುಚಿಯಾದ ಖಾರದ ಚಟ್ನಿ!
ಕಾಯಿಚಟ್ನಿ, ಟೊಮೇಟೊ ಚಟ್ನಿ, ಈರುಳ್ಳಿ ಚಟ್ನಿ ಕೇಳಿದ್ದೇವೆ, ಆದರೆ ಇದೇನಿದು ಕ್ಯಾರೆಟ್ ಚಟ್ನಿ...? ಅಚ್ಚರಿಯಾಯಿತೇ..? ಬನ್ನಿ ಕ್ಯಾರೆಟ್ ಚಟ್ನಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ- ಕ್ಯಾರೆಟ್ ನಿಂದ ರುಚಿಯಾದ ಖಾರದ ಚಟ್ನಿ!

English summary

Mouth watering Variety styles of chutney recipe

Chutney plays a very multiple role in indian cuisine despite the fact that it can be easily tucked away in any corner of the plate. its an important ingredient for serving idli, dosa etc
X
Desktop Bottom Promotion