For Quick Alerts
ALLOW NOTIFICATIONS  
For Daily Alerts

ಮೊಟ್ಟೆಯಿಂದ ಮಾಡಬಹುದು ಉಪ್ಪಿನಕಾಯಿ!

|

ಮೊಟ್ಟೆಯಿಂದ ಪದಾರ್ಥಗಳನ್ನು, ತಿಂಡಿಗಳನ್ನು ಮಾಡಿದರೆ ತುಂಬಾ ಕಾಲ ಬಾಳಿಕೆ ಬರುವುದು ಕಡಿಮೆ. ಆದರೆ ಮೊಟ್ಟೆಯಿಂದ ಉಪ್ಪಿನಕಾಯಿ ಮಾಡಿಟ್ಟರೆ ಒಂದು ವಾರದವರೆಗೆ ಬಾಳಿಕೆ ಬರುತ್ತದೆ. ಮೊಟ್ಟೆಯಿಂದ ಉಪ್ಪಿನಕಾಯಿ ಮಾಡಬಹುದಾ ಎಂದು ಆಶ್ಚರ್ಯವಾಗುತ್ತಿದೆ ಅಲ್ಲವೇ? ಇಲ್ಲಿ ನೀಡಿದ ರೆಸಿಪಿಯ ವಿಧಾನದಂತೆ ಮಾಡಿದರೆ ಮೊಟ್ಟೆಯಿಂದ ರುಚಿಕರವಾದ ಉಪ್ಪಿನಕಾಯಿಯನ್ನು ಸುಲಭದಲ್ಲಿ ತಯಾರಿಸಬಹುದು.

ಸಲಹೆ: ಈ ಉಪ್ಪಿನ ಕಾಯಿಯನ್ನು ಮೊಟ್ಟೆಯ ಹಳದಿ ಹಾಕದೆ ಮಾಡಿದರೆ ಕೊಬ್ಬಿನಂಶವಿರುವುದಿಲ್ಲ.

Egg Pickled Recipe

ಬೇಕಾಗುವ ಸಾಮಾಗ್ರಿಗಳು:

ಮೊಟ್ಟೆ 6-8
ಆಪಲ್ ಸೈಡರ್ ವಿನಿಗರ್ 1 ಕಪ್
ಸಾಸಿವೆ ಪುಡಿ ಅರ್ಧ ಚಮಚ
ಜೋಳದ ಹಿಟ್ಟು ಒಂದೂವರೆ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಒಂದು ಚಮಚದಷ್ಟು ಸಕ್ಕರೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ

1. ಮೊಟ್ಟೆಯನ್ನು ಚೆನ್ನಾಗಿ ಅದರ ಸಿಪ್ಪೆ ಸುಲಿದು ಇಡಬೇಕು.

2. ಈಗ ಸ್ವಲ್ಪ ಅಗಲವಿರುವ ಬಾಣಲಿ ತೆಗೆದು ಅದರಲ್ಲಿ ಸಾಸಿವೆ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ 1 ನಿಮಿಷ ಬಿಸಿ ಮಾಡಬೇಕು. ನಂತರ ಆಪಲ್ ಸೈಡರ್ ವಿನಗರ್ ಅನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಉರಿಯಿಂದ ತಗೆದು ತಣ್ಣಗಾಗಲು ಬಿಡಬೇಕು.

3. ಈಗ ಗಾಜಿನ ಬಾಟಲಿ ತೆಗೆದು ಅದರಲ್ಲಿ ಮೊಟ್ಟೆಯನ್ನು ಹಾಕಿ ನಂತರ ತಣ್ಣಗಾದ ವಿನಿಗರ್ ಅನ್ನು ಸುರಿಯಬೇಕು.

4. ನಂತರ ಬಾಟಲಿಯ ಮುಚ್ಚಳವನ್ನು ಬಿಗಿಯಾಗಿ ಹಾಕಿ 2 ದಿನ ಫ್ರಿಜ್ ನಲ್ಲಿಟ್ಟರೆ ಮೊಟ್ಟೆ ಹಳದಿ ಬಣ್ಣ ಪಡೆಯುವುದು. ಈ ಉಪ್ಪಿನ ಕಾಯಿ ನೋಡಲು ಆಕರ್ಷಕವಾಗಿರುತ್ತದೆ ಹಾಗೂ ತಿನ್ನಲೂ ರುಚಿಕರವಾಗಿರುತ್ತದೆ.

ಮನೆಯಲ್ಲಿ ಗೆಸ್ಟ್ ಬರುವುದು ಅಂತ 2-3 ದಿನದ ಮೊದಲೇ ಗೊತ್ತಾದರೆ ಈ ಉಪ್ಪಿನಕಾಯಿ ಮಾಡಿಟ್ಟರೆ ಅವರಿಗಾಗಿ ವಿಶೇಷ ಅಡುಗೆ ಮಾಡಿದಂತಾಗುವುದು. ಈ ಉಪ್ಪಿನ ಕಾಯಿಯನ್ನು ಒಂದು ವಾರಗಳ ಕಾಲ ಇಡಬಹುದು.

English summary

Egg Pickled Recipe | Variety Of Egg Recipe | ಮೊಟ್ಟೆ ಉಪ್ಪಿನಕಾಯಿ ರೆಸಿಪಿ | ಅನೇಕ ಬಗೆಯ ಮೊಟ್ಟೆ ರೆಸಿಪಿ

Pickled eggs are an excellent side dish that can be served with the meal. f you prepare pickled eggs without using egg yolk, they can be very low in calories and fats.
X
Desktop Bottom Promotion