For Quick Alerts
ALLOW NOTIFICATIONS  
For Daily Alerts

ಬೀಟ್‌ರೂಟ್‌ನಿಂದ ರುಚಿಯಾದ ಉಪ್ಪಿನಕಾಯಿ

|
Beetroot Pickle Recipe
ಉಪ್ಪಿನಕಾಯಿ ಎಲ್ಲರಿಗೆ ತಯಾರಿಸಲು ಬರುವುದಿಲ್ಲ. ಆದರೆ ಕೆಲವೊದು ಬಗೆಯ ಉಪ್ಪಿನಕಾಯಿಯನ್ನು ಅಡುಗೆ ಬರದವರು ಕೂಡ ತಯಾರಿಸಬಹುದು, ಅಂತಹ ಉಪ್ಪಿನಕಾಯಿಗಳಲ್ಲಿ ಒಂದು ಬೀಟ್ ರೂಟ್ ಉಪ್ಪಿನಕಾಯಿ. ಈ ಬೀಟ್ ರೂಟ್ ಉಪ್ಪಿನಕಾಯಿಯನ್ನು ಅನ್ನ ಅಥವಾ ಚಪಾತಿ ಜೊತೆ ತಿನ್ನಬಹುದಾಗಿದ್ದು ಇದನ್ನು ಸುಲಭವಾಗಿ ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ದೊಡ್ಡ ಬೀಟ್ ರೂಟ್ 2
* ಬೆಳ್ಳುಳ್ಳಿ 25-30 ಎಸಳು
* ಹಸಿ ಮೆಣಸಿನ ಕಾಯಿ 1/4 ಕಪ್
* ವಿನಿಗರ್ 1/4 ಕಪ್
* ರುಚಿಗೆ ತಕ್ಕ ಉಪ್ಪು
* 1/2 ಚಮಚ ಮೆಂತೆ
* ಚಿಟಿಕೆಯಷ್ಟು ಇಂಗು
* 1 ಚಮಚ ಸಾಸಿವೆ
* 2 ಚಮಚ ಎಣ್ಣೆ

ತಯಾರಿಸುವ ವಿಧಾನ:

1. ಬೀಟ್ ರೂಟ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.

2. ಈಗ ಬೆಳ್ಳುಳ್ಳಿ ಎಸಳು ಮತ್ತು ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಈ ಬೀಟ್ ರೂಟ್ ಗೆ ಹಾಕಬೇಕು. ನಂತರ ವಿನಿಗರ್ ಮತ್ತು ಉಪ್ಪು ಹಾಕಿ.

3. ಈಗ ಒಗ್ಗರಣೆ ಹಾಕುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಮೆಂತೆ ಬೀಜ, ಚಿಟಿಕೆಯಷ್ಟು ಇಂಗು ಹಾಕಿ ಅದನ್ನು ಬೀಟ್ ರೂಟ್ ಮಿಶ್ರಣಕ್ಕೆ ಹಾಕಿದರೆ ರುಚಿಕರವಾದ ಬೀಟ್ ರೂಟ್ ಉಪ್ಪಿನಕಾಯಿ ರೆಡಿ. ಇದನ್ನು ಜಾರ್ ಅಥವಾ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಿಡಿ.

English summary

Beetroot Pickle Recipe | Variety Of Pickle Recipe | ಬೀಟ್ ರೂಟ್ ಉಪ್ಪಿನಕಾಯಿ ರೆಸಿಪಿ | ಅನೇಕ ಬಗೆಯ ಉಪ್ಪಿನಕಾಯಿ ರೆಸಿಪಿ

Have you tasted Beetroot pickle? This pickle will be more tasteful. You can have this one with chapathi or rice. If you want to prepare this pickle here id a recipe.
X
Desktop Bottom Promotion