For Quick Alerts
ALLOW NOTIFICATIONS  
For Daily Alerts

ಖಾರಾ ಖಾರಾ ಮಿರ್ಚಿ ಚಟ್ನಿ ಮಾಡಿ ಸವಿಯಿರಿ

|
Green Chilly Chutney Recipe
ಖಾರ ಬಯಸುವವರಿಗೆ ಈ ಮೆಣಸಿನ ಕಾಯಿ ಚಟ್ನಿ ಸಖತ್ ರುಚಿ ನೀಡುತ್ತೆ. ಚಪಾತಿ, ದೋಸೆ, ಪರೋಟಾ, ಇಡ್ಲಿ ಯಾವುದಾದರ ಜೊತೆಯೂ ಸರಿ, ಹಸಿರು ಮೆಣಸಿನಕಾಯಿಯ ಈ ಚಟ್ನಿ ಒಳ್ಳೆ ಕಾಂಬಿನೇಶನ್.

ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರಂತೂ ರುಚಿಗೆ ಪಾರವೇ ಇಲ್ಲದಂತೆ. ಹಸಿಮೆಣಸಿನ ಕಾಯಿಯಿಂದ ರುಚಿಕರವಾದ ಚಟ್ನಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಮೆಣಸಿನ ಕಾಯಿ ಚಟ್ನಿಗೆ ಏನೇನು ಬೇಕು?

* 100 ಗ್ರಾಂ ಹಸಿರು ಮೆಣಸಿನ ಕಾಯಿ

* ನಿಂಬೆಹಣ್ಣಿನ ಗಾತ್ರದ ಹುಣಸೆ ಹಣ್ಣು

* 50 ಗ್ರಾಂ ಬೆಲ್ಲ

* 1/2 ಹೋಳು ತೆಂಗಿನ ತುರಿ

* ರುಚಿಗೆ ತಕ್ಕಷ್ಟು ಉಪ್ಪು

* ಎಣ್ಣೆ, ಸಾಸಿವೆ, ಇಂಗು

ಹಸಿರು ಮೆಣಸಿನ ಕಾಯಿ ಚಟ್ನಿ ತಯಾರಿಸುವ ವಿಧಾನ:

* ಮೊದಲು ಹಸಿರು ಮೆಣಸಿನ ಕಾಯಿಯ ತೊಟ್ಟನ್ನು ಬಿಡಿಸಿಕೊಂಡು ಅದರೊಳಗಿನ ಬೀಜವನ್ನು ಅರ್ಧ ಭಾಗ ತೆಗೆದುಬಿಡಬೇಕು.

* ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದರಲ್ಲಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಬೇಕು.

* ನಂತರ ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಹುಣಸೆ ಹಣ್ಣು, ಉಪ್ಪು, ಬೆಲ್ಲ ಸೇರಿಸಿ ಹದವಾಗಿ ರುಬ್ಬಿಕೊಳ್ಳಬೇಕು.

* ಕೊನೆಗೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ, ಇಂಗಿನಿಂದ ಚಟ್ನಿಗೆ ಒಗ್ಗರಣೆ ಹಾಕಿ ಎಲ್ಲವನ್ನೂ ಬೆರೆಸಿದರೆ ಖಾರ ಖಾರವಾದ ಹಸಿರು ಮೆಣಸಿನ ಕಾಯಿ ಚಟ್ನಿ ತಿನ್ನಲು ತಯಾರಾಗಿರುತ್ತೆ.

English summary

Green Chilly Chutney Recipe | Spicy Side Dish | ಹಸಿರು ಮೆಣಸಿನ ಕಾಯಿ ಚಟ್ನಿ | ರುಚಿಕರವಾದ ಚಟ್ನಿ ರೆಸಿಪಿ

Ever tasted the spicy Green chilly chutney? Its a spicy side dish. This recipe can be made in few minutes and can be best flavoured with rice, chapati, dosa, parota etc. Take a look to know how to prepare this chilly chutney recipe.
Story first published: Monday, December 5, 2011, 17:20 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more