For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯಲ್ಲೆ ಮಾಡಿ ಘಮಘಮ ಸಾರಿನ ಪುಡಿ

|
Recipe For Curry Powder
ಘಮಘಮ ಸಾರು ರುಚಿಕಟ್ಟಾಗಿರಬೇಕಾದರೆ ಅದಕ್ಕೆ ಹಾಕುವ ಮಸಾಲೆ ಪುಡಿ ಸರಿ ಇರಬೇಕು. ಸಾರು ಮಾಡುವ ಮುನ್ನ ಪುಡಿ ಮಾಡುವ ವಿಧಾನವನ್ನು ಕಲಿಯೋಣ. ಇದು ಒಂದು ಫಾರ್ಮುಲಾ!

ಪುಡಿಗಳು ಅಂಗಡಿಯಲ್ಲಿ ಸಿಗತ್ತೆ. ಆದರೆ, ಮನೆಯಲ್ಲೆ ಪುಡಿಯಿಂದ ಕುದಿಸಿದ ಸಾರಿನ ಗಮ್ಮತ್ತೇ ಬೇರೆ. ಇದರ ರುಚಿ ನಿಮಗೂ ಗೊತ್ತು. ಆದರೆ ಮೆಣಸಿನಕಾಯಿ, ದನಿಯ ಮುಂತಾದ ಪದಾರ್ಥ ಹುರಿದು ಕುಟ್ಟಿ ಪುಡಿ ಮಾಡಿ ಡಬ್ಬಕ್ಕೆ ತುಂಬಿಡುವುದಕ್ಕೆ ಮೈಬಗ್ಗಲ್ಲ. ಅಲ್ವಾ? ಕೆಲವರಿಗೆ ಸೊಂಟ ಬಗ್ಗತ್ತೆ ಆದರೆ ಟೈಮೇ ಸಿಗಲ್ಲಾರೀ..ಅಂತಾರೆ. ಓಕೆ. ಬರುವ ಶನಿ ಅಥವಾ ಭಾನುವಾರ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

1. ಕೊತ್ತಂಬರಿ ಬೀಜ1 ಕಪ್

2. 5-6 ಒಣ ಮೆಣಸಿನಕಾಯಿ

3. ಉದ್ದಿನ ಬೇಳೆ 1 ದೊಡ್ಡ ಚಮಚ

4. ತುರಿದ ಒಣ ಕೊಬ್ಬರಿ 1 ಕಪ್

5. ಚಕ್ಕೆ ಒಂದು ಚಿಕ್ಕ ತುಂಡು

ಮಾಡುವ ವಿಧಾನ:

1. ಕೊತ್ತಂಬರಿಬೀಜವನ್ನು 2 ನಿಮಿಷ ಮೈಕ್ರೋವೇವ್ ಅಥವಾ ಸ್ಟೌವ್ ಮೇಲೆ ಬಾಣಲೆಯಿಟ್ಟು ಹುರಿಯಬೇಕು.

2. ಕೆಂಪು ಮೆಣಸಿನಕಾಯಿ, ಚಕ್ಕೆ, ಕೊಬ್ಬರಿಯನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಬೇಕು.

3. ಉದ್ದಿನ ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

4. ನಂತರ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಪುಡಿಯಾಗುವವರೆಗೆ ಗಡಗಡ ಮಾಡಿ. ಇದನ್ನು ಗಾಳಿ ನುಸುಳದಂತೆ ಡಬ್ಬದಲ್ಲಿ ಹಾಕಿ ಅದರ ಬಾಯನ್ನು ಮುಚ್ಚಿಡಿ. ಬೇಕೆಂದಾಗ ಬಳಸಿ ಸಾರು ಮಾಡಿ.

English summary

Recipe For Curry Powder | Homemade Indian Curry Powder | ಮಸಾಲೆ ಪುಡಿ ತಯಾರಿಸುವ ವಿಧಾನ

Homemade Indian curry powder will adds perfect taste to the curry than shop curry powder. It is definitely not very difficult to prepare fresh curry powder in your very home provided the ingredients are ready and measurements are ideal.
Story first published: Monday, November 21, 2011, 12:29 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more