For Quick Alerts
ALLOW NOTIFICATIONS  
For Daily Alerts

ರುಚಿಯಾದ ಚಾಟ್ಸ್ ರಹಸ್ಯ ಬಹಿರಂಗ

|
Chaat Masala Recipe
ರುಚಿಕರವಾದ ಚಾಟ್ಸ್ ಗೆ ಅದಕ್ಕೆ ಬಳಸುವ ಮಸಾಲ ಕಾರಣವಾಗಿದೆ. ಈ ಮಸಾಲವನ್ನು ತಯಾರಿಸುವಾಗ ಅದಕ್ಕೆ ಬಳಸುವ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಮಾತ್ರ ಮಸಾಲ ಚಾಟ್ಸ್ ರುಚಿ ಹೆಚ್ಚಿಸುವುದು. ಚಾಟ್ಸ್ ಮಸಾಲ ತಯಾರಿಸುವ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:

1. ಒಂದು ಚಮಚ ಜೀರಿಗೆ
2. ಅರ್ಧ ಚಮಚ ಒಣಗಿದ ಪುದೀನಾ ಎಲೆ
3. ಚಿಟಿಕೆಯಷ್ಟು ಅಜ್ವೈನ್
4. ಚಿಟಿಕೆಯಷ್ಟುಇಂಗು
5. ಒಂದು ಚಮಚ ಕಲ್ಲುಪ್ಪು
6. ಒಣಗಿದ ಮಾವಿನ ಹಣ್ಣಿನ ಪುಡಿ 2 1/2 ಚಮಚ
7. ಲವಂಗ ಮತ್ತು ಚಕ್ಕೆ 5 -6
8. ಒಂದು ಚಮಚ ಶುಂಠಿ ಪುಡಿ ಅಥವಾ ಒಣ ಶುಂಠಿ ಒಂದು ಇಂಚು
9. ಕೆಂಪು ಮೆಣಸಿನ ಪುಡಿ ಒಂದು ಚಮಚ
10. ಒಂದು ಚಮಚ ಕರಿಮೆಣಸಿನ ಪುಡಿ
11. ಉಪ್ಪು 2 ಚಮಚ

ತಯಾರಿಸುವ ವಿಧಾನ:

1. ಉಪ್ಪು ಹೊರತು ಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಬಾಣಲೆಯಲ್ಲಿ ಹುರಿಯಬೇಕು. ಅದರಿಂದ ಮಸಾಲೆ ವಾಸನೆ ಬರುವಾಗ ಬಾಣಲೆಯನ್ನು ಉರಿಯಿಂದ ಇಳಿಸಬೇಕು.
2. ಬಿಸಿ ಸ್ವಲ್ಪ ಆರಿದ ಮೇಲೆ ಉಪ್ಪು ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಬೇಕು.
3. ತಯಾರಾದ ಚಾಟ್ಸ್ ಮಸಾಲೆ ಪುಡಿಯನ್ನು ಡಬ್ಬಿಯಲ್ಲಿ ಹಾಕಿ ಮುಚ್ಚಿಡಬೇಕು.

English summary

Chaat Masala Recipe | Masala Recipe | ಚಾಟ್ ಮಸಾಲ ರೆಸಿಪಿ | ಮಸಾಲ ರೆಸಿಪಿ

If you want to prepare tasty chaats then you should do one simple thing to add taste to your chaats. That is preparing chaat massala by adding correct ingredients. Here there are chaat masala recipe.
Story first published: Tuesday, March 6, 2012, 13:04 [IST]
X
Desktop Bottom Promotion