For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ

Posted By:
|

ನಿಮಗೆಲ್ಲಾ ನೆನಪಿರಬಹುದು, ಚಿಕ್ಕಂದಿನಲ್ಲಿ, ಕೈಯಲ್ಲಿ ಏನೂ ಇಲ್ಲದ ಸಮಯದಲ್ಲಿ ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದಿದ್ದು ಈ ಶೇಂಗಾ ಚಿಕ್ಕಿ. ಚೂರೇ ಕಾಸಿನಲ್ಲಿ ಕೈ ತುಂಬಾ ಸಿಹಿ ಬರುತ್ತಿದ್ದ ಕಾಲವದು. ನಮಗೆಲ್ಲಾ ಇದೇ ಹಬ್ಬದೂಟ. ಆದರೆ ಈಗಿನ ಕಾಲದಲ್ಲಿ ಇದಿಕ್ಕೂ ಬೆಲೆ ಜಾಸ್ತಿಯಾಗಿದೆ ಬಿಡಿ.

Chikki Recipe In Kannada | How To Make Peanut Chikki

ಆದರೆ ನಾವಿಂದು ಹೇಳ ಹೊರಟಿರುವುದು ಈ ಶೇಂಗಾ ಚಿಕ್ಕಿಯ ಬೆಲೆಯ ವಿಚಾರವಲ್ಲ. ಇದರ ಪ್ರಾಮುಖ್ಯತೆಯ ಬಗ್ಗೆ. ಎಲ್ಲ ಹಬ್ಬಗಳಲ್ಲೂ ಪ್ರತಿಯೊಬ್ಬರೂ ಇಷ್ಟ ಪಟ್ತು ತಿನ್ನುವ, ತಯಾರಿಸುವ ಸಿಹಿತಿನಿಸು ಈ ಶೇಂಗಾ ಚಿಕ್ಕಿ. ಆದರೆ ಹೆಚ್ಚಿನವ್ರಿಗೆ ಇದನ್ನು ತಯಾರು ಮಾಡುವುದರಲ್ಲಿ ಗೊಂದಲವಿದೆ. ಅದನ್ನು ನಾವಿವತ್ತು ಪರಿಹರಿಸುತ್ತೇವೆ.

ಮಕರ ಸಂಕ್ರಾಂತಿ ದಿನಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮಕರ ಸಂಕ್ರಾಂತಿ ಸ್ಪೆಷಲ್ ಈ ಶೇಂಗಾ ಚಿಕ್ಕಿಯನ್ನು ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಹೇಳಲಿದ್ದೇವೆ ನೋಡಿ.

ಮಕರ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ
ಮಕರ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ
Prep Time
5 Mins
Cook Time
15M
Total Time
20 Mins

Recipe By: Shreeraksha

Recipe Type: Chikki Recipe

Serves: 4

Ingredients
  • ಬೇಕಾಗುವ ಸಾಮಾಗ್ರಿಗಳು:

    • ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ- 1 ಕಪ್
    • ಬೆಲ್ಲ- ಅರ್ಧ ಕಪ್
    • ತುಪ್ಪ- 1 ಅಥವಾ 2 ದೊಡ್ಡ ಚಮಚ
Red Rice Kanda Poha
How to Prepare
  • ಮಾಡುವ ವಿಧಾನ :

    1. ೧ ದೊಡ್ಡ ಚಮಚ ತುಪ್ಪವನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಅದಕ್ಕೆ ಬೆಲ್ಲವನ್ನು ಹಾಕಿ.
    2. ೨ ದೊಡ್ಡ ಚಮಚ ನೀರನ್ನು ಹಾಕಿ ಹಾಗೂ ಬೆಲ್ಲವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    3. ಎರಡೆಳೆ ಪಾಕ ಬರುವ ತನಕ ಕುದಿಸುತ್ತಿರಿ.
    4. ಬೇಕಾದ ಹದಕ್ಕೆ ಬಂದ ಮೇಲೆ ಹುರಿದು ಸಿಪ್ಪೆ ತೆಗೆದು, ೨ ಭಾಗ ಮಾಡಿಟ್ಟುಕೊಂಡ ಶೇಂಗಾ ಬೀಜಗಳನ್ನು ಹಾಕಿಚೆನ್ನಾಗಿ ಕಲಸಿಕೊಳ್ಳಿ ಹಾಗೂ ಉರಿಯನ್ನು ನಿಲ್ಲಿಸಿ.
    5. ಒಂದು ಒಂದು ತಟ್ಟೆಗೆ ತುಪ್ಪ ಸವರಿಕೊಳ್ಳಿ.
    6. ಅದರ ಮೇಲೆ ಚಿಕ್ಕಿ ಮಿಶ್ರಣವನ್ನು ಹಾಕಿ ಹಾಗೂ ತಟ್ಟಿ ಅಥವಾ ಲಟ್ಟಿಸಿಕೊಳ್ಳಿ.ಒಂದೇ ಸಮನಾಗಿ ದಪ್ಪಇರುವಂತೆ ತಟ್ಟಿಕೊಳ್ಳಿ.
    7. ಒಂದು ಚಾಕುವಿನ ಸಹಾಯದಿಂದ ಕತ್ತರಿಸುವ ಗುರುತುಗಳನ್ನು ಅದು ತಣಿಯುವ ಮುಂಚೆ ಮಾಡಿಕೊಳ್ಳಿ.
    8. ಪೂರ್ತಿಯಾಗಿ ತಣಿದ ಮೇಲೆ ಅದನ್ನು ಚೌಕಾಕಾರದ ಚಿಕ್ಕಿಗಳಾಗಿ ಕತ್ತರಿಸಿಕೊಳ್ಳಿ.
    9. ಈಗ ನಿಮ್ಮ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಸವಿಯಲು ಸಿದ್ಧ.

    Instruction:

    ಒಂದು ಗಾಳಿಯಾಡದ ಜಾರಿನಲ್ಲಿ ಶೇಖರ ಮಾಡಿಕೊಂಡರೆ ರುಚಿಯಾದ ಈ ಕಡಲೆಕಾಯಿ ಚಿಕ್ಕಿ ಕೆಲವು ದಿನಗಳವರೆಗೆ ಕೆಡುವುದಿಲ್ಲ.

Instructions
  • ಮಕರ ಸಂಕ್ರಾಂತಿ ದಿನಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮಕರ ಸಂಕ್ರಾಂತಿ ಸ್ಪೆಷಲ್ ಈ ಶೇಂಗಾ ಚಿಕ್ಕಿಯನ್ನು ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಹೇಳಲಿದ್ದೇವೆ ನೋಡಿ.
Nutritional Information
  • ಬಡಿಸುವ ಪ್ರಮಾಣ - 4 ಜನ
  • ಕೊಬ್ಬು - 3.9 g
  • ಪ್ರೋಟೀನ್ - 2.1ಗ್ರಾಂ
  • ಕಾರ್ಬೋಹೈಡ್ರೇಟ್ - 9.7 g
  • ಫೈಬರ್ - 0.7 g
[ 4.5 of 5 - 72 Users]
X
Desktop Bottom Promotion