For Quick Alerts
ALLOW NOTIFICATIONS  
For Daily Alerts

ಯಮ್ಮೀ... ಯಮ್ಮೀ... ಚಿಕನ್‌ ಚಾಪ್ಸ್ ರೆಸಿಪಿ

Posted By:
|

ಚಿಕನ್ ಚಾಪ್ಸ್‌ ನೋಡುವಾಗಲೇ ಬಾಯಲ್ಲಿ ನೀರೂರುತ್ತೆ ಅಲ್ವಾ? ರೆಸ್ಟೋರೆಂಟ್‌ಗೆ ಹೋಗಿ ತಿಂದರೆ ಒಂದು ನಾಲ್ಕು ಪೀಸ್‌ಗೆ ನೀವು ನೂರು-ಇನ್ನೂರು ಕೊಡಬೇಕಾಗುತ್ತೆ.

Chicken Chops Recipe

ಆದರೆ ಮನೆಯಲ್ಲಿಯೇ ಮಾಡುವುದಾದರೆ 200 ರುಪಾಯಿ ಸಾಮಗ್ರಿ ಇದ್ದರೆ ಸಾಕು ಮನೆಯಲ್ಲಿರುವ 4-5 ಜನ ಸವಿಯಲು ಚಿಕನ್‌ ಚಾಪ್ಸ್ ಮಾಡಬಹುದು. ಈ ಚಿಕನ್‌ ಚಾಪ್ಸ್ ಮಾಡುವುದು ಹೇಗೆ ಎಂದು ನೋಡೋಣ:

Chicken Chops Recipe, ಚಿಕನ್‌ ಚಾಪ್ಸ್ ರೆಸಿಪಿ
Chicken Chops Recipe, ಚಿಕನ್‌ ಚಾಪ್ಸ್ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Reena TK

Recipe Type: snacks

Serves: 4

Ingredients
  • ಬೇಕಾಗುವ ಸಾಮಗ್ರಿ

    300 ಗ್ರಾಂ ಚಿಕನ್‌ (minced)

    1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)

    2 ಹಸಿ ಮೆಣಸಿನಕಾಯಿ

    1 ಮೊಟ್ಟೆ

    1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    2 ಚಮಚ ಕೊತ್ತಂಬರಿ ಸೊಪ್ಪು

    ಸ್ವಲ್ಪ ಪುದೀನಾ

    1/4 ಚಮಚ ಅರಿಶಿಣ ಪುಡಿ

    1/2 ಚಮಚ ಕೊತ್ತಂಬರಿ ಪುಡಿ

    ರುಚಿಗೆ ತಕ್ಕ ಉಪ್ಪು

    ಡೀಪ್‌ ಫ್ರೈಗೆ ಮಾಡಲು ಎಣ್ಣೆ

    ಬ್ರೆಡ್‌ ಚೂರುಗಳು

Red Rice Kanda Poha
How to Prepare
  • ಚಿಕನ್‌ ಚಾಪ್ಸ್‌ ಮಾಡುವುದು ಹೇಗೆ?

    * ಒಂದು ಬೌಲ್‌ನಲ್ಲಿ ಮಿನ್ಸ್ಡ್‌ ಚಿಕನ್ (ತುಂಬಾ ಚಿಕ್ಕ -ಚಿಕ್ಕ ತುಂಡು), ಈರುಳ್ಳಿ, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಕೊತ್ತಂಬರಿ-ಪುದೀನಾ ಸೊಪ್ಪು, ಸ್ವಲ್ಪ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು, ಸ್ವಲ್ಪ ನಿಂಬೆರಸ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ.

    * ಈಗ ಈ ಮಿಶ್ರಣವನ್ನು 15 ನಿಮಿಷ ಫ್ರಿಡ್ಜ್‌ನಲ್ಲಿಡಿ

    * ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಅದೇ ಸಮಯದಲ್ಲಿ ಚಿಕನ್‌ ಚಾಪ್ಸ್ ಮಿಶ್ರಣದಿಂದ ದೊಡ್ಡ-ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ, ಅದನ್ನು ಕೈಯಲ್ಲಿಯೇ ರೋಲ್ ಮಾಡಿ.

    * ನಂತರ ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ನಂತರ ಎಣ್ಣೆಯಲ್ಲಿ ಹಾಕಿ ಡೀಪ್‌ ಫ್ರೈ ಮಾಡಿ.

    * ಈ ರೆಡಿಯಾದ ಬಿಸಿ-ಬಿಸಿ ಚಿಕನ್‌ ಚಾಪ್ಸ್ ಅನ್ನು ಟೊಮೆಟೊ ಸಾಸ್‌ ಅಥವಾ ಪುದೀನಾ ಚಟ್ನಿ ಅಥವಾ ಮಯೋನೈಸ್ ಜೊತೆ ಸವಿಯಿರಿ.

Instructions
  • ಇಲ್ಲಿ 300 ಗ್ರಾಂ ಚಿಕನ್ ಚಾಪ್ಸ್‌ಗೆ ಸಾಕಾಗುವಷ್ಟು ಸಾಮಗ್ರಿ ಹೇಳಿದ್ದೇವೆ, ನೀವು ಚೆನ್ನಾಗಿ ತಿನ್ನಬೇಕೆಂದರೆ ಅರ್ಧ ಕೆಜಿಯಲ್ಲಿ ಮಾಡಿರೆ ಸಾಕಾಗುವುದು
Nutritional Information
  • Calories: - 138cal
  • Fat: - 7g
  • Protein: - 17g
  • Carbs: - 3g
[ 4 of 5 - 95 Users]
X
Desktop Bottom Promotion