For Quick Alerts
ALLOW NOTIFICATIONS  
For Daily Alerts

ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ

Posted By:
|

ನೀವು ಮಟನ್‌ ಸಾಲ್ನಾ ರುಚಿ ನೋಡಿದ್ದೀರಾ, ಮಧುರೈ ಹೋದರೆ ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಇದು ನಿಮಗೆ ಸಿಗುವುದು. ಮಟನ್ ಮೂಳೆ ರಸ ಬಿಟ್ಟಿರುವ ಬೇಳೆಯ ರೆಸಿಪಿ ಇದಾಗಿದ್ದು ರುಚಿ ತುಂಬಾ ಚೆನ್ನಾಗಿರುತ್ತದೆ.

ಇದರಲ್ಲಿ ನೀವು ಯಾವ ಬೇಳೆ ಬೇಕಾದರೆ ಬಳಸಬಹುದು, ತೊಗರಿ ಬೇಳೆ, ಅಥವಾ ಕಪ್ಪು ಬೇಳೆ ಬಳಸಬಹುದು, ಬೇಳೆ ಚೆನ್ನಾಗಿ ಬೆಂದು ಕರಗಬೇಕು, ಅಂದರೆ ಮಾತ್ರ ಗ್ರೇವಿ ಟೇಸ್ಟ್ ಸೂಪರ್ ಆಗಿರುತ್ತೆ.

Chettinad Style Mutton Salna Recipe

ಇದು ಚಪಾತಿ, ಪರೋಟ ಜೊತೆ ಸವೆಯಲು ಸೂಪರ್‌ ಗ್ರೇವಿ ಆಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ನೋಡೋಣ:

Chettinad Style Mutton Salna Recipe, ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ
Chettinad Style Mutton Salna Recipe, ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ
Prep Time
10 Mins
Cook Time
45M
Total Time
55 Mins

Recipe By: Reena TK

Recipe Type: Curry

Serves: 4

Ingredients
  • ಬೇಕಾಗುವ ಸಾಮಗ್ರಿ

    ಮಟನ್-1/4 ಕೆಜಿ

    ತೊಗರಿ ಬೇಳೆ-3 ಚಮಚ

    ದೊಡ್ಡ ಈರುಳ್ಳಿ 1 (ತುಂಬಾ ಚಿಕ್ಕದಾಗ ಹೆಚ್ಚಿದ್ದು)

    ಟೊಮೆಟೊ 1 (ಕತ್ತರಿಸಿದ್ದು)

    ಶುಂಠಿ-ಬೆಳ್ಳುಳ್ಳಿ ಬೇಸ್ಟ್ 1 ಚಮಚ

    ಸ್ವಲ್ಪ ಅರಿಶಿಣ ಪುಡಿ

    ಖಾರದ ಪುಡಿ 1 ಚಮಚ

    ನೀರು 1 ಕಪ್

    ರುಚಿಗೆ ತಕ್ಕ ಉಪ್ಪು

    ರುಬ್ಬಲು

    ತೆಂಗಿನಕಾಯಿ 3 ಚಮಚ

    ಮೆಂತೆ 1/2 ಚಮಚ

    ಜೀರಿಗೆ 1/4 ಚಮಚ

    ಕಾಳು ಮೆಣಸು 1/4 ಚಮಚ

    ಒಗ್ಗರಣೆಗೆ

    ಅಡುಗೆ ಎಣ್ಣೆ 2 ಚಮಚ

    ಚಕ್ಕೆ 1/4 ಇಂಚಿನಷ್ಟು ದೊಡ್ಡದು

    ಲವಂಗ 2

    ಏಲಕ್ಕಿ 2

    ಪಲಾವ್ ಎಲೆ 1

Red Rice Kanda Poha
How to Prepare
  • ಮಾಡುವ ವಿಧಾನ:

    * ರುಬ್ಬಲು ಬೇಕಾಗುವ ಸಾಮಗ್ರಿ ಹಾಕಿ ರುಬ್ಬಿ.

    * ಈಗ ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಒಬ್ಬಗರಣೆಗೆ ಹೇಳಿದ ಸಾಮಗ್ರಿ ಹಾಕಿ.

    * ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಸೌಟ್‌ನಿಂದ ಆಡಿಸಿ, ನಂತರ ಟೊಮೆಟೊ, ಕರಿಬೇವು ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ. ನಂತರ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಮಸಾಲೆ ಚೆನ್ನಾಗಿ ಮಿಶ್ರ ಮಾಡಿ.

    *ತೊಗರಿ ಬೇಳೆ ತೊಳೆದು ರೆಡಿಯಾಗಿ ಇಡಿ. ಮೊದಲು ಮಟನ್‌ ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ, ನಂತರ ಬೇಳೆ ಸೇರಿಸಿ.

    * ಬೇಕಾದ ಪ್ರಮಾಣಕ್ಕೆ ನೀರು ಹಾಕಿ, ಬೇಳೆ ನೀರಿನಲ್ಲಿ ಮುಳುಗುವಷ್ಟು ನೀರು ಹಾಕಿರಬೇಕು. ನಂತರ8-10 ವಿಶಲ್ ಹೊಡೆಸಿ. ನಂತರ ಗ್ಯಾಸ್‌ ಆಫ್‌ ಮಾಡಿ, ಕುಕ್ಕರ್‌ನ ಸ್ವಲ್ಪ ತಣ್ಣಗಾದ ಮೇಲೆ ಅದರ ಮುಚ್ಚಳ ತೆಗೆದು 2 ನಿಮಿಷ ಕುದಿಸಿ, ನಂತರ ರುಬ್ಬಿದ ಮಸಾಲೆ ಹಾಕಿ.

    * ಮೇಲ್ಭಾಗದಲ್ಲಿ ಎಣ್ಣೆಯಂಶ ತೇಲುವಷ್ಟು ಹೊತ್ತು ಕುದಿಸಿ, ನಂತರ ಗ್ಯಾಸ್‌ ಆಫ್‌ ಮಾಡಿ ಚಪಾತಿ/ಪರೋಟ ಜೊತೆ ಸರ್ವ್ ಮಾಡಿ.

Instructions
  • ಬೇಳೆ ಚೆನ್ನಾಗಿ ಕರಗಿರಬೇಕು, ಇಲ್ಲದಿದ್ದರೆ ಮ್ಯಾಶ್‌ ಮಾಡಿ, ಆದ್ರೆ ಮಾತ್ರ ಗ್ರೇವಿ ನಾನ್‌ವೆಜ್‌ ರುಚಿಯಲ್ಲಿರುವುದು, ಇಲ್ಲದಿದ್ದರೆ ಸಾಂಬಾರ್‌ಗೆ ಮಟನ್ ಹಾಕಿದಂತೆ ಆಗುವುದು.
Nutritional Information
  • ಕ್ಯಾಲೋರಿ - 197
  • ಕೊಬ್ಬು - 9 ಗ್ರಾಂ
  • ಪ್ರೊಟೀನ್ - 28ಗ್ರಾಂ
[ 4.5 of 5 - 59 Users]
X
Desktop Bottom Promotion