For Quick Alerts
ALLOW NOTIFICATIONS  
For Daily Alerts

Navratri Recipe:ಸಕತ್ ರುಚಿಯಾಗಿರುತ್ತೆ ಈ ಕ್ಯಾರೆಟ್ ಫಿರ್ಣಿ

Posted By:
|

ಭಾರತೀಯ ಸಿಹಿ ಪ್ರಿಯರು. ಯಾವುದೇ ಒಳ್ಳೆಯ ವಿಷಯ ಹಂಚಿಕೊಳ್ಳುವುದಾದರೂ ಅದು ಸಿಹಿ ತಿನಿಸುವ ಮೂಲಕವೇ. ಎಷ್ಟೋ ಸಂಬಂಧಗಳು ಪಕ್ಕಾ ಆಗುವುದೂ ಸಿಹಿ ತಿಸಿಸುಗಳ ಪರಸ್ವರ ಹಂಚಿಕೆಯಿಂದಲೆ!

carrot phirni recipe

ಹಾಗಾಗಿ ಯಾವುದಾದರೂ ವಿಶೇಷವಾದ ದಿನ ನೀವು ತಪ್ಪದೇ ಮಾಡಬಹುದಾದ ಸುಲಭವಾದ ಒಂದು ಸಿಹಿ ತಿನಿಸು ಕ್ಯಾರೇಟ್ ಸ್ವೀಟ್!

carrot phirni recipe, ಕ್ಯಾರೆಟ್ ಫಿರ್ಣಿ ರೆಸಿಪಿ
carrot phirni recipe, ಕ್ಯಾರೆಟ್ ಫಿರ್ಣಿ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: ಪೂರ್ಣಿಮಾ ಹೆಗಡೆ

Recipe Type: ಸ್ವೀಟ್

Serves: 4

Ingredients
  • ಬೇಕಾಗುವ ಸಾಮಗ್ರಿಗಳು:

    ಬಾಸುಮತಿ ಅಕ್ಕಿ - ಒಂದು ಕಪ್

    ಅಕ್ಕಿ ನೆನೆಸಲು ನೀರು

    ಕ್ಯಾರೇಟ್ - 5-6

    ಹಾಲು - ಒಂದು ಲೀಟರ್

    ಸಕ್ಕರೆ -ಮುಕ್ಕಾಲು ಕಪ್

    ಗೋಡಂಬಿ ಹಾಗೂ ದ್ರಾಕ್ಷಿ, ಇದನ್ನು ಹುರಿಯಲು ತುಪ್ಪ.

Red Rice Kanda Poha
How to Prepare
  • ಮಾಡುವ ವಿಧಾನ:

    ಮೊದಲೆ ಒಂದು ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಹಾಕಿ. ನಂತರ ಅಕ್ಕಿಯನ್ನು ಸೋಸಿ ಒಂದು ಪ್ಲೇಟ್ ನಲ್ಲಿಟ್ಟು ನೀರು ಆರುವವರೆಗೆ ಒಣಗಿಸಿ. ಒಣಗಿದ ಅಕ್ಕಿಯನ್ನು ಮಿಕ್ಸರ್ ಜಾರ್ ಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.

    ಕ್ಯಾರೆಟ್ ಗಳನ್ನು ಸಿಪ್ಪೆ ತೆಗೆದು ದೊಡ್ಡ ತುಂಡುಗಳನ್ನಾಗಿ ಮಾಡಿ ನೀರಿನಲ್ಲಿ ಬೇಯಿಸಿಕೊಳ್ಳಿ. ಇದು ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದೆರಡು ಕ್ಯಾರೆಟ್ ತುಂಡುಗಳನ್ನು ತೆಗೆದಿಟ್ಟು, ಉಳಿದವನ್ನು ನುಣುಪಾಗಿ ರುಬ್ಬಿಕೊಳ್ಳಿ.

    ಇದೀಗ ಒಲೆಯ ಮೇಲೆ ಒಂದು ಅಗಲವಾದ ಪಾತ್ರೆಯನ್ನು ಇಟ್ಟು ಅದರಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಕಾಯಿಸಿ. ಹಾಲು ಕೆನೆ ಕಟ್ಟದಂತೆ ಆಗಾಗ ಕೈಯಾಡಿಸಿ. ನಂತರ ರುಬ್ಬಿಟ್ಟುಕೊಂಡ ಅಕ್ಕಿಯನ್ನು ಹಾಲಿಗೆ ಹಾಕಿ ಮಿಶ್ರಣ ಮಾಡಿ. 6-7 ನಿಮಿಷಗಳ ಕಾಲ ಆಗಾಗ ಮಿಶ್ರಣ ಮಾಡುತ್ತಾ ಇರಿ. ನಂತರ ಅಕ್ಕಿ ಬೆಂದ ಮೇಲೆ ರುಬ್ಬಿಟ್ಟುಕೊಂಡ ಕ್ಯಾರೆಟ್ ಪೇಸ್ಟ್ ನ್ನು ಹಾಕಿ ಕಲಕಿ. ಈಗ ತೆಗೆದಿಟ್ಟುಕೊಂಡ ಮುಕ್ಕಾಲು ಕಪ್ ಸಕ್ಕರೆಯನ್ನು ಹಾಕಿ ಕಲಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಐದು ನಿಮಿಷ ಕುದಿಯಲು ಬಿಡಿ.

    ನಂತರ ತೆಗೆದಿರಿಸಿದ ಕ್ಯಾರೆಟ್ ತುಂಡುಗಳನ್ನು ತುರಿದು ಮಿಶ್ರಣಕ್ಕೆ ಹಾಕಿ. ಕೊನೆಯಲ್ಲಿ ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹಾಕಿ ಹುರಿದು ಮಿಶ್ರಣಕ್ಕೆ ಸೇರಿಸಿದರೆ ರುಚಿಯಾದ ಕ್ಯಾರೆಟ್ ಫಿರ್ಣಿ ರೆಡಿ!

Instructions
  • ಕ್ಯಾರೆಟ್ ಹಲ್ವಾ ಬದಲಿಗೆ ಬೇರೆ ರುಚಿಯ ಸ್ವೀಟ್ ಕ್ಯಾರೆಟ್‌ನಿಂದ ಮಾಡಬಹುದಾ ಎಂದು ನೀವು ಹುಡುಕುತ್ತಿದ್ದರೆ ಇದು ಪರ್ಫೆಕ್ಟ್ ರೆಸಿಪಿ.
Nutritional Information
  • ಕ್ಯಾಲೋರಿ - 244 ಕ್ಯಾ
  • ಪ್ರೊಟೀನ್ - 9.3ಗ್ರಾಂ
  • ಕಾರ್ಬ್ಸ್ - 36ಗ್ರಾಂ
  • ನಾರಿನಂಶ - 0.4ಗ್ರಾಂ

ಮಾಡುವ ವಿಧಾನ:

ಮೊದಲೆ ಒಂದು ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಹಾಕಿ. ನಂತರ ಅಕ್ಕಿಯನ್ನು ಸೋಸಿ ಒಂದು ಪ್ಲೇಟ್ ನಲ್ಲಿಟ್ಟು ನೀರು ಆರುವವರೆಗೆ ಒಣಗಿಸಿ. ಒಣಗಿದ ಅಕ್ಕಿಯನ್ನು ಮಿಕ್ಸರ್ ಜಾರ್ ಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.

carrot phirni recipe

ಕ್ಯಾರೆಟ್ ಗಳನ್ನು ಸಿಪ್ಪೆ ತೆಗೆದು ದೊಡ್ಡ ತುಂಡುಗಳನ್ನಾಗಿ ಮಾಡಿ ನೀರಿನಲ್ಲಿ ಬೇಯಿಸಿಕೊಳ್ಳಿ. ಇದು ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದೆರಡು ಕ್ಯಾರೆಟ್ ತುಂಡುಗಳನ್ನು ತೆಗೆದಿಟ್ಟು, ಉಳಿದವನ್ನು ನುಣುಪಾಗಿ ರುಬ್ಬಿಕೊಳ್ಳಿ.

ಇದೀಗ ಒಲೆಯ ಮೇಲೆ ಒಂದು ಅಗಲವಾದ ಪಾತ್ರೆಯನ್ನು ಇಟ್ಟು ಅದರಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಕಾಯಿಸಿ. ಹಾಲು ಕೆನೆ ಕಟ್ಟದಂತೆ ಆಗಾಗ ಕೈಯಾಡಿಸಿ. ನಂತರ ರುಬ್ಬಿಟ್ಟುಕೊಂಡ ಅಕ್ಕಿಯನ್ನು ಹಾಲಿಗೆ ಹಾಕಿ ಮಿಶ್ರಣ ಮಾಡಿ. 6-7 ನಿಮಿಷಗಳ ಕಾಲ ಆಗಾಗ ಮಿಶ್ರಣ ಮಾಡುತ್ತಾ ಇರಿ.

carrot phirni recipe

ನಂತರ ಅಕ್ಕಿ ಬೆಂದ ಮೇಲೆ ರುಬ್ಬಿಟ್ಟುಕೊಂಡ ಕ್ಯಾರೆಟ್ ಪೇಸ್ಟ್ ನ್ನು ಹಾಕಿ ಕಲಕಿ. ಈಗ ತೆಗೆದಿಟ್ಟುಕೊಂಡ ಮುಕ್ಕಾಲು ಕಪ್ ಸಕ್ಕರೆಯನ್ನು ಹಾಕಿ ಕಲಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಐದು ನಿಮಿಷ ಕುದಿಯಲು ಬಿಡಿ.

carrot phirni recipe

ನಂತರ ತೆಗೆದಿರಿಸಿದ ಕ್ಯಾರೆಟ್ ತುಂಡುಗಳನ್ನು ತುರಿದು ಮಿಶ್ರಣಕ್ಕೆ ಹಾಕಿ. ಕೊನೆಯಲ್ಲಿ ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹಾಕಿ ಹುರಿದು ಮಿಶ್ರಣಕ್ಕೆ ಸೇರಿಸಿದರೆ ರುಚಿಯಾದ ಕ್ಯಾರೆಟ್ ಸಿಹಿ ರೆಡಿ!

carrot phirni recipe
[ 4 of 5 - 43 Users]
X
Desktop Bottom Promotion