ಬಗೆಬಗೆಯ ಇಡ್ಲಿ ರೆಸಿಪಿ-ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

Posted By:
Subscribe to Boldsky

ನಿಮ್ಮ ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಬೆಳಗ್ಗಿನ ಉಪಹಾರವನ್ನು ಎಂದಿಗೂ ನಿರ್ಲಕ್ಷ್ಯಸದಿರಿ. ನೀವು ಮಾಡುವ ಈ ಉಪಹಾರ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲ ನಿಮ್ಮನ್ನು ಇಡೀ ದಿನ ಚಟುವಟಿಕೆಯಿಂದ ಇರಿಸುವ ದಿವ್ಯ ಔಷಧವಾಗಿದೆ. ಹೆಚ್ಚಿನವರು ಕಚೇರಿಗೆ ಹೋಗುವ ಲಗುಬಗೆಯಲ್ಲಿ ಅಥವಾ ಡಯೆಟ್ ಎಂಬ ನೆಪದಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸದೇ ಮಧ್ಯಾಹ್ನ ಜೊತೆಯಾಗಿ ಊಟ ಮಾಡಿದರೆ ಆಯಿತು ಎಂಬ ಉಪೇಕ್ಷೆಯಲ್ಲಿ ಈ ಅದ್ಭುತ ಟಾನಿಕ್ ಅನ್ನು ಕೈಬಿಡುತ್ತಿದ್ದಾರೆ. ಆದರೆ ನೀವು ಸೇವಿಸುವ ಉಪಹಾರ ನಿಮ್ಮ ದೇಹದ ತೂಕ ಇಳಿಕೆಯಲ್ಲೂ ಅದ್ಭುತ ಪರಿಣಾಮವನ್ನು ಬೀರುತ್ತದೆ.   ವಿಭಿನ್ನ ರುಚಿಯ ರೈಸ್ ಬಾತ್-ನೀವೂ ಪ್ರಯತ್ನಿಸಿ

ನೀವು ಸೇವಿಸುವ ಉಪಹಾರ ಆರೋಗ್ಯಕರವಾಗಿದ್ದು ಪೌಷ್ಟಿಕಾಂಶಗಳಿಂದ ಕೂಡಿರಬೇಕು ಎಂಬುದೇ ವೈದ್ಯಶಾಸ್ತ್ರದ ನಿಯಮವಾಗಿದೆ. ಭಾರತೀಯ ಆಹಾರ ಪದ್ಧತಿಗಳು ಇಂತಹ ಸಂತುಲಿತ ಅಂಶಗಳೊಂದಿಗೆ ಬಂದಿದ್ದು ವಿದೇಶಿ ತಿಂಡಿಗಳನ್ನು ಬಿಟ್ಟು ಸ್ವದೇಶಿತನವನ್ನು ನಿಮ್ಮದಾಗಿಸಿಕೊಳ್ಳಿ. ನೀವು ನಿತ್ಯವೂ ಸೇವಿಸುವ ಉಪಹಾರ ಬೇಜಾರು ಎನಿಸುತ್ತಿದೆ ಎಂದಾದಲ್ಲಿ ಅದರಲ್ಲೇ ವೈವಿಧ್ಯಮಯ ಪಾಕ ವಿಧಾನಗಳನ್ನು ತನ್ನಿ.

ಅಂತಹುದೇ ಪಾಕ ವೈವಿಧ್ಯತೆಯಾಗಿದೆ ವಿವಿಧ ಬಗೆಯ ಇಡ್ಲಿಗಳು. ಎಂದಿನ ಸಾದಾ ಇಡ್ಲಿಗಳಲ್ಲದೆ ಉಪಹಾರವನ್ನು ಪೌಷ್ಟಿಕವಾಗಿಸುವ ಮತ್ತು ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡುವ ನಳಪಾಕಗಳಾಗಿವೆ ಈ ತರೇಹವಾರಿ ಇಡ್ಲಿಗಳು. ಬೇರೆ ಬೇರೆ ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸುವ ಈ ಇಡ್ಲಿಗಳು ಹೊಟ್ಟೆಯುಬ್ಬರದ ಸಮಸ್ಯೆಯನ್ನು ತಂದೊಡ್ಡದೆ ಜೀರ್ಣಗೊಳ್ಳುವ ಅಂಶಗಳನ್ನು ಪಡೆದುಕೊಂಡು ಬಂದಿವೆ. ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ವಿಧ ವಿಧ ಬಗೆಯ ಇಡ್ಲಿಗಳನ್ನು ಕುರಿತು ತಿಳಿದುಕೊಳ್ಳೋಣ.

ಓಟ್ಸ್ ಇಡ್ಲಿ

ಓಟ್ಸ್ ಇಡ್ಲಿ

ಓಟ್ಸ್ ನಮ್ಮ ಉಪಾಹಾರದಲ್ಲಿ ನುಸುಳಿ ಹೆಚ್ಚು ಸಮಯವಾಗಿಲ್ಲ, ಆಗಲೇ ಹೆಚ್ಚಿನ ಜನಪ್ರಿಯತೆಗಳಿಸಿಕೊಂಡುಬಿಟ್ಟಿದೆ. ಆದರೆ ಬರೆಯ ಓಟ್ಸ್ ಅನ್ನು ಹಾಲಿನಲ್ಲಿ ಮುಳುಗಿಸಿ ತಿನ್ನುವುದಕ್ಕಿಂತ ಇಡ್ಲಿಯ ರೂಪದಲ್ಲಿ ಸೇವಿಸಿದರೆ ಇನ್ನಷ್ಟು ಪೌಷ್ಠಿಕ ಮತ್ತು ರುಚಿಕರವಾಗಿರುತ್ತದೆ. ಅದರಲ್ಲೂ ಓಟ್ಸ್ ಇಡ್ಲಿಯನ್ನು, ಚಟ್ನಿ, ಸಾಂಬಾರ್, ಸಕ್ಕರೆ, ಬೆಲ್ಲ, ಜೇನು, ಜಾಮ್ ಅಷ್ಟೇ ಏಕೆ, ಹಾಲು ಮತ್ತು ಮೊಸರಿನ ಜೊತೆಗೂ ಸೇವಿಸುವ ಮಜಾನೇ ಬೇರೆ...! ಹಾಗಾದರೆ ಇನ್ನೇಕೆ ತಡ..? ಬನ್ನಿ ಓಟ್ಸ್ ಇಡ್ಲಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.. ಅಡುಗೆ ಮನೆಯಲ್ಲಿ ಅರಳಿದ ಘಮ್ಮೆನ್ನುವ ಓಟ್ಸ್ ಇಡ್ಲಿ

ರವೆ ಇಡ್ಲಿ

ರವೆ ಇಡ್ಲಿ

ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂದು ಚಿಂತಿಸುವವರಿಗೆ, ಅದರಲ್ಲೂ ಮನೆಯಲ್ಲಿ ನೆಂಟರಿಷ್ಟರು ತುಂಬಿದ್ದಾಗ, ಉದ್ದು ನೆನೆಹಾಕಲು ಮರೆತು ಪೇಚಾಡುವ ಪ್ರಸಂಗ ಎದುರಾದಾಗ ಈ ದಿಢೀರ್ ಮೊಸರು ರವಾ ಇಡ್ಲಿ ಅತ್ಯುತ್ತಮ ತಿಂಡಿ. ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ. ಆದರೆ ಇದನ್ನು ತಯಾರಿಸಲು ಪ್ರಮುಖವಾಗಿ ಸ್ವಲ್ಪ ಹೆಚ್ಚು ಮೊಸರು ಬೇಕಾಗುತ್ತದೆ ಅಷ್ಟೇ, ಬನ್ನಿ ರವೆ ಇಡ್ಲಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!

ಬಾಳೆ ಹಣ್ಣಿನ ಇಡ್ಲಿ

ಬಾಳೆ ಹಣ್ಣಿನ ಇಡ್ಲಿ

ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜೆಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಆದರೆ ಎಂದಾದರು ಬಾಳೆ ಹಣ್ಣಿನ ಇಡ್ಲಿ ತಯಾರಿಸಿದ್ದೀರಾ? ಅಚ್ಚರಿಯಾಯಿತು ಅಲ್ಲವೇ..? ಹಾಗಾದರೆ ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳಿಗೆ ಪ್ರಿಯವಾಗುವುದು ಈ ಬನಾನ ಇಡ್ಲಿ

ಮೆಕ್ಕೆಜೋಳದ ಇಡ್ಲಿ

ಮೆಕ್ಕೆಜೋಳದ ಇಡ್ಲಿ

ಸಣ್ಣ ಮಕ್ಕಳಿಗೆ ಹಾಲಿನ ಜೊತೆಗೆ ಸ್ವಲ್ಪ ಹೆಚ್ಚಿನ ಪೌಷ್ಠಿಕಾಂಶಗಳಿರುವ ಆಹಾರದ ಅಗತ್ಯವಿದೆ. ಇದಕ್ಕೆ ಮೆಕ್ಕೆಜೋಳ ಅತ್ಯಂತ ಸಮರ್ಪಕವಾದ ಆಹಾರವಾಗಿದೆ. ಆದರೆ ಇದನ್ನು ಪಾಯಸದ ರೂಪದಲ್ಲಿ ನೀಡಿದರೆ ಮಕ್ಕಳು ಅಷ್ಟು ಇಷ್ಟಪಡುವುದಿಲ್ಲ. ಬದಲಿಗೆ ಇದರ ಇಡ್ಲಿಯನ್ನು ಮಾಡಿ ತಿನ್ನಿಸಿದರೆ ಇಷ್ಟಪಟ್ಟು ತಿನ್ನುತ್ತವೆ. ಹಾಗಾದರೆ ಇನ್ನೇಕೆ ತಡ? ರೆಡಿಯಾಗಿ ಮೆಕ್ಕೆಜೋಳದ ಇಡ್ಲಿಯನ್ನು ತಯಾರಿಸಲು... ಮಕ್ಕಳ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರ ಮೆಕ್ಕೆಜೋಳದ ಇಡ್ಲಿ

English summary

Simply Delicious: Top four Idli Recipes

Here are few interesting varieties of idli that are easy to make, low on calories and absolutely fabulous, have a look
Please Wait while comments are loading...
Subscribe Newsletter