For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ರುಚಿಕರ ಹೆಸರುಕಾಳು ದೋಸೆ

|

ನಮ್ಮ ದೈನಂದಿನ ಜೀವನದಲ್ಲಿ ಆಹಾರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ದೇಹವನ್ನು ಆರೋಗ್ಯವಾಗಿರಿಸಿ ಬಲವರ್ಧನೆಯನ್ನು ಮಾಡುವ ಈ ಆಹಾರಗಳು ಹೆಚ್ಚು ಕೊಬ್ಬಿನಿಂದ ಕೂಡಿರದೇ ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತಿರಬೇಕು. ಪೋಷಕಾಂಶಗಳ ಕೊರತೆಯನ್ನು ನಾವು ಸೇವಿಸುವ ಆಹಾರ ಎದುರಿಸುತ್ತಿದೆ ಎಂದಾದಲ್ಲಿ ದೇಹವು ನ್ಯೂನತೆಗಳಿಂದ ಬಳಲುವುದು ಖಂಡಿತ.

ಈ ನ್ಯೂನತೆಗಳು ನಮ್ಮ ದೇಹವನ್ನು ಸಮೀಪಿಸಬಾರದು ಎಂದಾದಲ್ಲಿ ನಾವು ಸೇವಿಸುವ ಆಹಾರದ ಮೇಲೆ ಹೆಚ್ಚುವರಿ ಗಮನವನ್ನು ನೀಡುವುದು ಅಗತ್ಯವಾಗಿದೆ. ಹಾಲು, ಹಣ್ಣು, ಹಸಿರು ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು ಆಹಾರ ಹೊಂದಿದೆಯೇ ಎಂಬುದನ್ನು ಪರಿಶೀಲಿಸುವುದು ಅತೀ ಅಗತ್ಯ. ಜಿಡ್ಡಿನಿಂದ ಕೂಡಿದ ಮತ್ತು ಸಿದ್ಧ ಆಹಾರಗಳ (ರೆಡಿ ಫುಡ್) ಸೇವನೆಯಿಂದ ನಮ್ಮ ದೇಹ ಬಳಲುವುದು ಖಂಡಿತ. ಎಣ್ಣೆರಹಿತ ಹೆಸರುಕಾಳಿನ ಮಸಾಲಾ

ಇನ್ನು ಈ ಮೊದಲೇ ತಿಳಿಸಿದಂತೆ ಹಾಲು ಹಣ್ಣುಗಳೊಂದಿಗೆ ಮೊಳಕೆ ಕಾಳುಗಳು ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಿದ್ದರೆ ಮೊಳಕೆ ಕಾಳುಗಳನ್ನು ನಿಯಮಿತವಾಗಿ ಸೇವಿಸುವಂತೆ ಅದರಿಂದ ತಿಂಡಿಗಳನ್ನು ತಯಾರಿಸುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂದಿನ ಲೇಖನದಲ್ಲಿ ಹೆಚ್ಚಿನ ಪ್ರೋಟೀನ್ ವಿಟಮಿನ್‌ಗಳನ್ನು ತನ್ನಲ್ಲಿ ಸಮೃದ್ಧವಾಗಿ ಒಳಗೊಂಡಿರುವ ಧಾನ್ಯ ಹೆಸರು ಕಾಳಿನ ದೋಸೆಯನ್ನು ಸವಿಯಿರಿ. ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಹೆಸರು ತಂಪಿನ ಗುಣವನ್ನು ತನ್ನಲ್ಲಿ ಹೇರಳವಾಗಿ ಹೊಂದಿದೆ. ಹೆಸರು ಕಾಳಿನ ದೋಸೆ ತಯಾರಿಯ ವಿಧಾನವನ್ನು ಕೆಳಗೆ ನಾವು ನೀಡಿದ್ದು ಇದನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತ್ವರಿತವಾಗಿ ಸಿದ್ಧಪಡಿಸಬಹುದು.

Mouthwatering Green gram dosa recipe

ಪ್ರಮಾಣ: 4
*ಸಿದ್ಧತಾ ಸಮಯ: 1/2 ಗಂಟೆ
*ಅಡುಗೆಗೆ ಬೇಕಾದ ಸಮಯ: 1/2 ಗಂಟೆ

ಸಾಮಾಗ್ರಿಗಳು
*ಹೆಸರು ಕಾಳು 250 ಗ್ರಾಮ್
*ಶುಂಠಿ - 1 ತುಂಡು
*ಜೀರಿಗೆ ಸ್ವಲ್ಪ
*ಉಪ್ಪು - ರುಚಿಗೆ
*ಹಸಿಮೆಣಸಿನಕಾಯಿ - 4
*ಕೊತ್ತಂಬರಿ ಸೊಪ್ಪು - ಸ್ವಲ್ಪ
*ಎಣ್ಣೆ - 50 ಗ್ರಾಮ್

ಮಾಡುವ ವಿಧಾನ
1. ಮೊದಲಿಗೆ ಹೆಸರು ಕಾಳನ್ನು ನೀರಿನಲ್ಲಿ 5 ಗಂಟೆಗಳ ಕಾಲ ನೆನೆಸಿ.
2. ನಂತರ ಕಾಳಿನಿಂದ ನೀರನ್ನು ಬಸಿದು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಜೀರಿಗೆಯನ್ನು ಸೇರಿಸಿ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
3.ಕೊನೆಗೆ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ದೋಸೆ ಹಿಟ್ಟಿಗೆ ಸೇರಿಸಿ.
4.ಈ ಸಮಯದಲ್ಲಿ ತವಾ ಬಿಸಿ ಮಾಡಿಕೊಳ್ಳಿ ಮತ್ತು ವೃತ್ತಾಕಾರವಾಗಿ ದೋಸೆಯನ್ನು ಹುಯ್ಯಿರಿ.
ರುಚಿಕರವಾದ ಹೆಸರುಕಾಳಿನ ದೋಸೆ ಸವಿಯಲು ಸಿದ್ಧವಾಗಿದೆ. ಹಸಿರು ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯುವುದು ಅತ್ಯುತ್ತಮ ರುಚಿಯನ್ನು ನೀಡುತ್ತದೆ.

English summary

Mouthwatering Green gram dosa recipe

Green gram is a healthy grocery itom which is giving healthy contents to our body. Green gram is very useful to health and it is providing nutishion supplemenntary. So it is highly recommended to eat every day.
X
Desktop Bottom Promotion