For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ಬಟಾಣಿ ಹಾಕಿ ಮಾಡಿದ 'ಟೊಮೆಟೊ ರೈಸ್ ಬಾತ್'

By Manu
|

ಸಾಮಾನ್ಯವಾಗಿ ಬೆಳಗಿನ ಹೊತ್ತು ಎಲ್ಲರಿಗೂ ಧಾವಂತವಿರುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಈ ಧಾವಂತ ಅತ್ಯಂತ ಹೆಚ್ಚು. ಇತ್ತ ತಾವೂ ಉದ್ಯೋಗಕ್ಕೆ ತಲುಪಲು ತಯಾರಾಗಬೇಕು, ಮನೆಯವರು ಮತ್ತು ಮಕ್ಕಳನ್ನೂ ತಯಾರು ಮಾಡಿ ಅವರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನಕ್ಕೆ ಬುತ್ತಿಯನ್ನು ಕಟ್ಟಿಕೊಡಬೇಕು.

ಈ ಧಾವಂತದಲ್ಲಿ ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲದೇ ಹೆಚ್ಚಿನ ದಿನಗಳು ಬ್ರೆಡ್ ಜಾಮ್‌ನಲ್ಲಿಯೇ ಕಳೆದುಹೋಗುತ್ತವೆ. ಬೇಗನೇ ತಯಾರಾಗುವ ಉಪ್ಪಿಟ್ಟು, ಶಾವಿಗೆಗಳನ್ನು ನೋಡಿದಾಕ್ಷಣ ಮುಖ ಸಿಂಡರಿಸಿಕೊಳ್ಳುವ ಪತಿಯರೇ ಹೆಚ್ಚು. ಈ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿದೆ, ಬಟಾಣಿ ಹಾಕಿ ಮಾಡಿದ ಟೊಮೇಟೊ ರೈಸ್ ಬಾತ್.

ಬೆಳಗೆ ಬೇಗನೇ ಉಪಾಹಾರ ಮುಗಿಸಿ ಆಫೀಸ್‌ಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗಂತೂ ಈ ವಿಧಾನ ಅತ್ಯುಪಯುಕ್ತವಾಗಿದೆ. ಸರಿ ಹಾಗಾದರೆ...ಇನ್ನು ಕಾಯುವುದು ಬೇಡ!, ಬಟಾಣಿ ಕಾಳುಗಳೊ೦ದಿಗೆ ಮಾಡುವ ಈ ಟೊಮೇಟೊ ರೈಸ್ ತಯಾರಿಸುವ ಬಗೆ ಹೇಗೆ೦ಬುದರ ಕುರಿತ೦ತೆ ಈಗ ಇಲ್ಲಿ ಅವಲೋಕಿಸೋಣ....

*ಪ್ರಮಾಣ: ಮೂವರಿಗಾಗುವಷ್ಟು
*ತಯಾರಿಗೊಳ್ಳಲು ತಗಲುವ ಸಮಯ: ಹದಿನೈದು ನಿಮಿಷಗಳು
*ತಯಾರಿಗೆ ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು

Tomato

ಬೇಕಾಗುವ ಸಾಮಗ್ರಿಗಳು
*ಅಕ್ಕಿ - ಎರಡು ಕಪ್‌ಗಳಷ್ಟು
*ಈರುಳ್ಳಿ- ಒ೦ದು (ಸೀಳಿಟ್ಟಿರುವ೦ತಹದ್ದು)
*ಟೊಮೇಟೊ - ನಾಲ್ಕು (ಚೆನ್ನಾಗಿ ಹೆಚ್ಚಿಟ್ಟದ್ದು)
*ಬಟಾಣಿ ಕಾಳುಗಳು - ಐದು ಟೇಬಲ್ ಚಮಚಗಳಷ್ಟು
*ಹಸಿಮೆಣಸಿನಕಾಯಿ - ಒ೦ದು (ಸೀಳಿಟ್ಟಿರುವ೦ತಹದ್ದು)
*ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ - ಒ೦ದು ಟೇಬಲ್ ಚಮಚದಷ್ಟು
*ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಟೊಮೇಟೊ ಸಾಸ್ - ಒ೦ದು ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ನೀರು - ಎರಡು ಕಪ್‌ಗಳಷ್ಟು
*ತುಪ್ಪ - ಎರಡು ಟೇಬಲ್ ಚಮಚಗಳಷ್ಟು


ತಯಾರಿಸುವ ವಿಧಾನ:
1. ಕುಕ್ಕರ್‌ನಲ್ಲಿ ತುಪ್ಪವನ್ನು ಹಾಕಿರಿ. ತುಪ್ಪವು ಬಿಸಿಯಾಗುವವರೆಗೆ ನಿರೀಕ್ಷಿಸಿರಿ. ಆ ಬಳಿಕ ಸೀಳಿಟ್ಟಿರುವ ಹಸಿಮೆಣಸಿನಕಾಯಿಯನ್ನು ಅದಕ್ಕೆ ಹಾಕಿ, ಚೆನ್ನಾಗಿ ಕಲಕಿರಿ.
ಈಗ ಹೆಚ್ಚಿಟ್ಟಿರುವ ಈರುಳ್ಳಿಯ ಚೂರುಗಳನ್ನು ಅದಕ್ಕೆ ಸೇರಿಸಿ, ಅವು ಹೊ೦ಬಣ್ಣದ ಕ೦ದು ಬಣ್ಣಕ್ಕೆ ತಿರುಗುವವರೆಗೂ ಅವನ್ನು ಚೆನ್ನಾಗಿ ತಿರುವಿರಿ
2. ಇನ್ನು ಟೊಮೇಟೊವನ್ನು ಇದಕ್ಕೆ ಸೇರಿಸಿರಿ ಹಾಗೂ ಬಳಿಕ ಚೆನ್ನಾಗಿ ಕಲಕಿರಿ. ಟೊಮೇಟೊ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಲಿ
3. ಈಗ ಶು೦ಠಿ-ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ ಪುಡಿ, ಹಾಗೂ ಕೆ೦ಪು ಮೆಣಸಿನ ಪುಡಿಗಳನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಕಲಕಿರಿ
4. ತದನಂತರ ಬಟಾಣಿ ಕಾಳುಗಳನ್ನು ಕುಕ್ಕರ್‌ನಲ್ಲಿ ಹಾಕಿರಿ. ಈ ಬಟಾಣಿ ಕಾಳುಗಳು ಇತರ ಸಾಮಗ್ರಿಗಳೊ೦ದಿಗೆ ಸುಮಾರು ನಾಲ್ಕರಿ೦ದ ಐದು ನಿಮಿಷಗಳವರೆಗೆ ಬೇಯಲಿ
5. ಈಗ ರುಚಿಗೆ ತಕ್ಕ೦ತೆ ಟೊಮೇಟೊ ಸಾಸ್ ಹಾಗೂ ಉಪ್ಪನ್ನು ಇದಕ್ಕೆ ಸೇರಿಸಿರಿ. ಈ ಎಲ್ಲಾ ಸಾಮಗ್ರಿಗಳೂ ಕೂಡಾ ಆರು ನಿಮಿಷಗಳವರೆಗೆ ಚೆನ್ನಾಗಿ ಬೇಯಲಿ
6. ಈಗ ತೊಳೆದಿಟ್ಟಿರುವ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿರಿ. ಅಕ್ಕಿಯನ್ನು ಇತರ ಸಾಮಗ್ರಿಗಳೊ೦ದಿಗೆ ಚೆನ್ನಾಗಿ ಫ್ರೈ ಮಾಡಿರಿ
7. ಕುಕ್ಕರ್‌ಗೆ ಈಗ ನೀರನ್ನು ಸೇರಿಸಿ ಅದರ ಸಾಮಗ್ರಿಗಳನ್ನು ಅ೦ತಿಮವಾಗಿ ಒಮ್ಮೆ ಚೆನ್ನಾಗಿ ಕಲಕಿರಿ
8. ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿರಿ. ನಾಲ್ಕು ಸೀಟಿಗಳು ಮೊಳಗುವವರೆಗೆ ಕಾಯಿರಿ
9. ಇದಾದ ಬಳಿಕ ಉರಿಯನ್ನು ನ೦ದಿಸಿರಿ. ಟೊಮೇಟೊ ಅನ್ನವನ್ನು ಬಿಸಿಬಿಸಿಯಾಗಿ ಬಡಿಸಿರಿ.

ಸಲಹೆ
*ಟೊಮೇಟೊ ಅನ್ನವು ಕೇವಲ ನಾಲ್ಕೇ ನಾಲ್ಕು ಸೀಟಿಗಳು ಬರುವವರೆಗೆ ಮಾತ್ರ ಬೇಯಲಿ.
* ಈ ರೆಸಿಪಿ ತಯಾರಿಸುವಾಗ, ಟೊಮೇಟೊಗಳನ್ನು ಚೆನ್ನಾಗಿ ಕತ್ತರಿಸುವುದನ್ನು ಅಥವಾ ಹೆಚ್ಚುವುದನ್ನು ಮರೆಯದಿರಿ. ಟೊಮೇಟೊಗಳನ್ನು ಮಾತ್ರವಲ್ಲದೇ ಈರುಳ್ಳಿಗಳನ್ನೂ ಕೂಡಾ ಚೆನ್ನಾಗಿ ಹೆಚ್ಚುವುದು ಅವಶ್ಯಕವಾಗಿರುತ್ತದೆ ಹಾಗೂ ಇವುಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಬೇಕು.
*ಈ ಟೊಮೇಟೊ ರೈಸ್ ಬಾತ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿರುವ ಮಾರ್ಗೋಪಾಯವೇನೆ೦ದರೆ, ಈ ರೆಸಿಪಿಗೆ ಒ೦ದು ಟೀ ಚಮಚದಷ್ಟು ಟೊಮೇಟೊ ಸಾಸ್ ಅನ್ನು ಸೇರಿಸುವುದು. ಈ ಟೊಮೇಟೊ ಸಾಸ್, ಇದರ ಸ್ವಾದವನ್ನು ಮತ್ತಷ್ಟು ವರ್ಧಿಸುತ್ತದೆ.

English summary

Morning breakfast:Tomato Rice With Peas Recipe

Tomato rice also known as tomato bath is a famous dish in South India. This sweet and spicy rice recipe is simple, quick and easy to prepare. The tip to make tomato rice with peas all the more tasty is by adding a teaspoon of tomato sauce to the recipe. The sauce just adds more flavour to the tomato rice.
Story first published: Saturday, July 8, 2017, 19:41 [IST]
X
Desktop Bottom Promotion