For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಉಪಹಾರಕ್ಕಾಗಿ ಕುಚ್ಚಲಕ್ಕಿ ದೋಸೆ

|

ಕುಚ್ಚಲಕ್ಕಿ ದೋಸೆಯನ್ನು (ಕೆಂಪಕ್ಕಿ ದೋಸೆ) ಬಹಳಷ್ಟು ಮಂದಿ ಕೇಳಿರುವುದಿಲ್ಲ. ಏನಿದು ಕುಚ್ಚಲಕ್ಕಿ ದೋಸೆ ಎಂಬ ಕುತೂಹಲವೇ? ಇದೊಂದು ಆರೋಗ್ಯಕರವಾದ ದೋಸೆಯಾಗಿದ್ದು, ಇದನ್ನು ಕುಚ್ಚಲಕ್ಕಿಯಿಂದ ತಯಾರಿಸಲಾಗುತ್ತದೆ. ಇದು ನಿಮ್ಮನ್ನು ದಿನವಿಡೀ ಆರೋಗ್ಯಕರವಾಗಿ ಮತ್ತು ಲವಲವಿಕೆಯಿಂದ ಇಡುತ್ತದೆ. ಈ ಕುಚ್ಚಲಕ್ಕಿ ದೋಸೆಯನ್ನು ಮಾಮೂಲಿ ಅಕ್ಕಿ ಹಿಟ್ಟಿನ ಬದಲಿಗೆ ಕುಸುಬಲಕ್ಕಿಯನ್ನು ಹಾಕಿ ಮಾಡಲಾಗುತ್ತದೆ.

ಈ ಶುದ್ಧ ಭಾರತೀಯ ಖಾದ್ಯವು ಇದೀಗ ಎಲ್ಲಾ ಗೃಹಿಣಿಯರ, ಗಂಡಸರ ಮತ್ತು ಕೆಲಸಕ್ಕೆ ಹೋಗುವ ಹೆಂಗಸರ ವಲಯದಲ್ಲಿ ಭರ್ಜರಿಯಾಗಿ ಬಿಸಿ ಬಿಸಿಯಾಗಿ ತಯಾರಾಗಲು ಶುರುವಾಗಿದೆ. ದಕ್ಷಿಣ ಭಾರತೀಯರು ಯಾವಾಗಲು ತಮ್ಮ ಮನೆಗಳಲ್ಲಿ ದೋಸೆಯ ಹಿಟ್ಟನ್ನು ಫ್ರಿಡ್ಜಿನಲ್ಲಿಟ್ಟುಕೊಂಡಿರುತ್ತಾರೆ. ತಮಗೆ ಬೇಕೆನಿಸಿದಾಗ, ಉಪಾಹಾರಕ್ಕೆ ಮತ್ತು ಸಂಜೆಯ ತಿಂಡಿಗಾಗಿ ಇದನ್ನು ಮಾಡಿಕೊಂಡು ಸೇವಿಸುತ್ತಿರುತ್ತಾರೆ.

ಇದು ಆರೋಗ್ಯಕರವು ಹೌದು. ಬಹುಶಃ ನೀವು ದೋಸೆಯ ಬಗೆ ಬಗೆಯ ರುಚಿಗಳನ್ನು ತಿಂದು ನೋಡಿರಬಹುದು. ನೀವೇ ಕೆಲವೊಂದು ಬಗೆಯ ದೋಸೆಗಳನ್ನು ಪ್ರಯೋಗಾತ್ಮಕವಾಗಿ ಮಾಡಿಕೊಂಡಿರಬಹುದು. ನೀವು ಹೊರಗಡೆ ತಿನ್ನಲು ಹೋದಾಗಲೂ ಸಹ ನಿಮ್ಮ ಮನೆಯ ಒಬ್ಬ ಸದಸ್ಯರಾದರು ದೋಸೆಗಾಗಿ ಆರ್ಡರ್ ಮಾಡುತ್ತಾರೆ. ಅದು ದೋಸೆಯ ಶಕ್ತಿ, ಏಕೆಂದರೆ ಇದು ಆರೋಗ್ಯಕರ ಎಂಬ ಭಾವನೆಯೇ ಇದಕ್ಕೆ ಕಾರಣ. ಹಾಗಾಗಿ ಕುಚ್ಚಲಕ್ಕಿ ದೋಸೆಯ ಕುರಿತಾಗಿ ಯಾವುದೇ ವಿಶೇಷ ವಿವರಣೆ ನೀಡಬೇಕಿಲ್ಲ. ನೀವು ಗಟ್ಟಿ ಮುಟ್ಟಾಗಿರಲು ಇದು ತೀರಾ ಅವಶ್ಯಕ. ಇದನ್ನು ತಯಾರಿಸುವುದು ಹೇಗೆ ಎಂಬುದರ ಕುರಿತಾಗಿ ಮುಂದೆ ಓದಿ: ನೀವೂ ಪ್ರಯತ್ನಿಸಿ ಗರಿಗರಿಯಾದ 10 ವಿಧದ ದೋಸೆ

Easy And Healthy Brown Rice Dosa Breakfast

*ಪ್ರಮಾಣ: 3-4 ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 12-13 ಗಂಟೆಗಳು
*ಅಡುಗೆ ಮಾಡಲು ತಗುಲುವ ಸಮಯ: 15-20 ನಿಮಿಷಗಳು

ಬೇಕಾಗಿರುವ ಸಾಮಾಗ್ರಿಗಳು
*ಕುಚ್ಚಲಕ್ಕಿ- 3 ಕಪ್‍ಗಳು
*ಉದ್ದಿನ ಬೇಳೆ -1 ಕಪ್
*ಕಡಲೆ ಬೇಳೆ - ½ ಕಪ್ಫ್
*ಹೆಸರು ಬೇಳೆ - ½ ಕಪ್
*ತೊಗರಿ ಬೇಳೆ - ½ ಕಪ್
*ಅವಲಕ್ಕಿ - 1 ಕಪ್
*ಮೆಂತ್ಯ ಬೀಜಗಳು - 1 ಟೀ ಚಮಚ
*ಎಣ್ಣೆ

ವಿಧಾನ
1. ಕುಚ್ಚಲಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ ಮತ್ತು ತೊಗರಿ ಬೇಳೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ರಾತ್ರಿಯೆಲ್ಲ ಇವುಗಳನ್ನು ಚೆನ್ನಾಗಿ ನೆನೆಸಿ.
2. ಬೆಳಗ್ಗೆ ಅವಲಕ್ಕಿಯನ್ನು ಒಂದು ಗಂಟೆಗಳ ಕಾಲ ನೆನೆಸಿ.
3. ಈಗ ಕುಚ್ಚಲಕ್ಕಿಯನ್ನು. ಅವಲಕ್ಕಿ, ಬೇಳೆಗಳ ಜೊತೆಗೆ ಮಿಕ್ಸಿಯಲ್ಲಿ ಹಾಕಿ ಹಿಟ್ಟಿನ ರೂಪಕ್ಕೆ ಬರುವವರೆಗು ರುಬ್ಬಿ. ಇದನ್ನು ಚೆನ್ನಾಗಿ ರುಬ್ಬಿದ ಮೇಲೆ ಇದಕ್ಕೆ ಅಗತ್ಯವಿದ್ದಷ್ಟು ನೀರನ್ನು ಹಾಕಿ. ನಂತರ ಇದನ್ನು ಚೆನ್ನಾಗಿ ಕಲೆಸಿ ಕೊಂಡಿರಿ. ನಂತರ ಈ ಮಿಶ್ರಣವನ್ನು ಕೊಠಡಿಯ ಉಷ್ಣಾಂಶದಲ್ಲಿ 8-9 ಗಂಟೆಗಳ ಕಾಲ ಹುದುಗು ಬರಲು ಇಡಿ.
4. ಒಮ್ಮೆ ಇದು ಸಿದ್ಧಗೊಂಡರೆ ನಿಮ್ಮ ಕುಚ್ಚಲಕ್ಕಿಯ ದೋಸೆ ತಯಾರಿಗೆ ನೀವು ಸಿದ್ಧರಾದಂತೆ. ದೋಸೆ ಕಾವಲಿಯನ್ನು ತೆಗೆದುಕೊಳ್ಳಿ, ಅದನ್ನು ಬಿಸಿ ಮಾಡಿ.
5. ಕಾವಲಿ ಜಿಡ್ಡು ಜಿಡ್ಡಾಗುವವರೆಗೆ ಎಣ್ಣೆಯನ್ನು ಹಾಕಿ. ಅದರ ಮೇಲೆ ಕುಚ್ಚಲಕ್ಕಿಯ ಹಿಟ್ಟನ್ನು ಹಾಕಿ, ವೃತ್ತಾಕಾರವಾಗಿ ದೋಸೆಯನ್ನು ಹುಯ್ಯಿರಿ.
6. ದೋಸೆಯು ತಿಳಿಯಾದ ಕಂದು ಬಣ್ಣಕ್ಕೆ ಬರುವವರೆಗು ಕಾಯಿಸಿ. ನಂತರ ಅದನ್ನು ತಿರುವಿ ಹಾಕಿ, ಎರಡು ಬದಿಯಲ್ಲಿ ದೋಸೆಯು ಸ್ವಲ್ಪ ಹೊಂಬಣ್ಣದಲ್ಲಿರುವಂತೆ ನೋಡಿಕೊಳ್ಳಿ. ನಿಮ್ಮ ಕುಚ್ಚಲಕ್ಕಿಯ ದೋಸೆಯನ್ನು ತೆಂಗಿನಕಾಯಿ ಅಥವಾ ಟೊಮೇಟೊ ಚಟ್ನಿ ಇಲ್ಲದೆಯೇ ತಿನ್ನಬಹುದು. ನಿಮಗೆ ಇಷ್ಟವಾದಲ್ಲಿ ಇದನ್ನು ಮಾವಿನ ಕಾಯಿ/ ನಿಂಬೆ ಹಣ್ಣಿನ ಉಪ್ಪಿನಕಾಯಿಯ ಜೊತೆ ಬೇಕಾದರು ಸವಿಯಬಹುದು. ಇಲ್ಲವಾದಲ್ಲಿ "ಮುಲುಗು ಪೊಡಿ" ಅಥವಾ ಚಟ್ನಿ ಪುಡಿಯ ಜೊತೆಗೆ ಬೇಕಾದರು ತಿನ್ನಬಹುದು. ಆದರೆ ಈ ಹಿಟ್ಟಿನಿಂದ ಇಡ್ಲಿಗಳನ್ನು ಮಾತ್ರ ತಯಾರಿಸಲು ಹೋಗಬೇಡಿ. ಏಕೆಂದರೆ ನೀವು ಅಂದುಕೊಂಡ ಫಲಿತಾಂಶ ಇದರಿಂದ ನಿಮಗೆ ದೊರೆಯುವುದಿಲ್ಲ.

ಪೋಷಕಾಂಶಗಳ ಪ್ರಮಾಣ
*ವಿಶೇಷವಾಗಿ ನೀವು ಡಯಟ್ ಮಾಡುತ್ತಿದ್ದಲ್ಲಿ, ಕುಚ್ಚಲಕ್ಕಿಯು ಆರೋಗ್ಯಕರವಾದ ಆಹಾರವಾಗಿದೆ. ಇದು ನಾರಿನಂಶ ಮತ್ತು ಕಾರ್ಬೊಹೈಡ್ರೇಟ್‍‍ಗಳ ಉತ್ತಮ ಮೂಲವಾಗಿದೆ. ಜೊತೆಗೆ ಇದು ದೇಹಕ್ಕೆ ಅಗತ್ಯವಾದ ಗ್ಲೂಕೋಸನ್ನು ಒದಗಿಸುತ್ತದೆ.
*ಕುಚ್ಚಲಕ್ಕಿಯು ನಿಮ್ಮ ದೇಹಕ್ಕೆ ಯಾವುದೇ ಕ್ಯಾಲೋರಿಗಳನ್ನು ಸೇರ್ಪಡೆ ಮಾಡುವುದಿಲ್ಲ. ಇದರಲ್ಲಿ ಮ್ಯೆಗ್ನಿಶಿಯಂ ಮತ್ತು ಕ್ಯಾಲ್ಸಿಯಂಗಳು ಯಥೇಚ್ಛವಾಗಿರುತ್ತವೆ. ಇದು ಸದೃಢವಾದ ಮೂಳೆಗಳನ್ನು ನಿರ್ಮಿಸಲು ಮತ್ತು ಹಲ್ಲುಗಳ ಆರೋಗ್ಯಕ್ಕು ಅತ್ಯಗತ್ಯವಾಗಿ ಬೇಕಾಗುತ್ತದೆ.

#ಸಲಹೆ
*ಕುಚ್ಚಲಕ್ಕಿಯನ್ನು ರಾತ್ರಿಯೆಲ್ಲ ನೆನೆಸುವಾಗ, ಸ್ವಲ್ಪ ಹೆಚ್ಚಿನ ಸಮಯ ನೆನೆಸಿ. ಏಕೆಂದರೆ ಕುಸುಬಲಕ್ಕಿಯು ನೆನೆಯಲು ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತದೆ.
ಇದನ್ನು ರುಬ್ಬುವಾಗ, ಆದಷ್ಟು ವೆಟ್ ಗ್ರೈಂಡರಿನಲ್ಲಿ ರುಬ್ಬಿ, ಆಗ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.
*ಕುಚ್ಚಲಕ್ಕಿಯ ದೋಸೆಯು ಮತ್ತಷ್ಟು ರುಚಿಕರವಾಗಿರಬೇಕು ಎಂದಾದಲ್ಲಿ, ಕಾವಲಿನ ಮೇಲೆ ಕಾದ ದೋಸೆಗೆ ಎಣ್ಣೆಯ ಬದಲಿಗೆ ತುಪ್ಪವನ್ನು ಹಾಕಿ. ಒಂದು ವೇಳೆ ನೀವು ಡಯಟ್ ಮಾಡುತ್ತಿದ್ದಲ್ಲಿ, ಇದು ಒಳ್ಳೆಯ ಆಲೋಚನೆಯಾಗಿರುವುದಿಲ್ಲ!.

English summary

Easy And Healthy Brown Rice Dosa Breakfast

Brown rice dosa is something that you would not be too familiar with. Are you wondering what the brown rice dosa is about? It is a healthy dosa recipe made of brown rice flour. It keeps you refreshed and healthy throughout the day.
X
Desktop Bottom Promotion